ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಭಕ್ತರು

ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಭಕ್ತರು Devotees dance and dance during the Maha Ganapati immersion ceremony

ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಭಕ್ತರು 

ಮುದ್ದೇಬಿಹಾಳ, 04 : ಪಟ್ಟಣದಲ್ಲಿ ಪ್ರಥಮಬಾರಿಗೆ ಹುತ್ತಿನ ಮಣ್ಣಿನಿಂದ ಪ್ರತಿಷ್ಠಾಪಿಸಲಾದ ಹಿಂದೂಮಹಾಗಣಪತಿಯ 7 ದಿನಗಳವರೆಗೆ ಜರುಗಿದ ಮಹಾಪೂಜಾ ಕಾರ್ಯಕ್ರಮಗಳು ಹಿಂದೂ ದಾರ್ಮಿಕ ಪದ್ದತಿಯಂತೆ ಜರುಗಿದವಲ್ಲದೇ ಈ ಉತ್ಸವ ಕುರಿತು ಮೆರಗು ತರಲು ಮುಂದಾಗಿದ್ದ ಸಮಾನ ಮನಸ್ಕರ ಬಳಗ ಭಕ್ತಿಭಾವ ಸೇವಾ ಕಾರ್ಯ ಏರಿ​‍್ಡಸಿದ್ದುದ್ದರ ಕುರಿತು ಎಷ್ಟು ಗುಣಗಾನ ಮಾಡಿದರೂ ಸಾಲದಂತಾಯಿತು.  

    7 ನೇ ದಿನವಾದ ಮಂಗಳವಾರರಂದು ಗಣೇಶ ಮಹಾಮೂರ್ತಿಯನ್ನು ವಿಸರ್ಜಿಸಲು ಪ್ರತಿಷ್ಠಾಪನಾ ಸ್ಥಳವಾದ ಪಟ್ಟಣದ ಹುತಾತ್ಮ ಯೋಧರ ಸ್ಮಾರಕ ಸ್ಥಳದ ಹತ್ತಿರದ ಸ್ಥಳದಿಂದ ವಿವಿಧ ವಾಧ್ಯ ವೈಭವಗಳೊಂದಿಗೆ ವಿಸರ್ಜನೆಗಾಗಿ ಸಿದ್ದಪಡಿಸಲಾದ ವಿವಿಧ ವಾದ್ಯ ವೈಭವಗಳ ತಕ್ಕಂತೆ ಹಿಂದೂ ಯುವಕರ ತಂಡದ ಕುಣಿತ ಹಾಗೂ ಮೇಲಿಂದ ಮೇಲೆ ಎಲ್ಲರಿಂದ ಹೊರಬರುತ್ತಿದ್ದ ಗಣಪತಿ ಬಪ್ಪಾ ಮೋರಯಾ.. ಎಂಬ ಶಬ್ದಗಳು ಹೊರಬರುತ್ತಿರುವದನ್ನು ನೋಡಿದರೆ ಕೇಳುಗರಲ್ಲಿ ಹಾಗೂ ನೋಡುಗರಲ್ಲಿಯೂ ಭಕ್ತಿಭಾವದ ಮೆರಗು ನಗುಮುಖದೊಂದಿಗೆ ಅವರಿಂದಲೂ ಅದೇ ಶಬ್ದ ಹೊರಬರದೇ ಇರಲಿಲ್ಲಾ.  

   ಹಿಂದೂ ಮಹಗಾಗಣಪತಿ ಎಂಬ ಹೆಸರಿನ ಗಣಪತಿಯನ್ನು ಈ ಪ್ರಥಮ ವರ್ಷವೇ ಪ್ರತಿಷ್ಠಾಪಿಸಿದ್ದು ಈ ಕುರಿತು ಉತ್ಸವ ಸಮೀತಿ ಕೈಕೊಂಡತಹ ನಿರ್ಣಯಗಳು ಮಾರ್ಗಸೂಚಿಯಾಗಿ ಪರಿಣಮಿಸದೇ ಇರಲಿಲ್ಲಾ. 7 ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಎಲ್ಲವೂ ಏಕತೆಯ ಭಾವನೆಗಳನ್ನು ಮೂಡಿಸುವಂತಹ ಕಾರ್ಯಕ್ರಮಗಳು ನಡೆದಿರುವುದು ಅನೇಕ ಜನರಲ್ಲಿ ಸಂತಸವನ್ನುಂಟುಮಾಡಿರುವುದು ಕಡಿಮೇನಿಲ್ಲಾ.  

      ಮಹಾಪ್ರಸಾದದ ವ್ಯವಸ್ಥೆಯಲ್ಲಿಯೂ ಕೂಡಾ ಮಾದರಿಯಾಗಿ ಪರಿಣಮಿಸಿತಲ್ಲದೇ ಅಸಂಖ್ಯಾತ ಭಕ್ತರು ದಿನದ ಮಹಾ ಪೂಜಾ ಕಾರ್ಯಕ್ರಮದಲ್ಲಿ ಮಹಾಪ್ರಸಾದ ಸೇವಿಸಿ ಪುನೀತರಾದದ್ದು ಕಂಡುಬಂದಿತು.  

      ಗಣೇಶ ಮೂರ್ತಿಯ ಮಹಾಪೂಜಾ ಕಾರ್ಯಕ್ರಮದಲ್ಲಿಯ ಭಕ್ತಿರಿಗಾಗಿ ಅಗತ್ಯವಿರುವಂತಹ ಸಾಮಗ್ರಿಗಳನ್ನು ಲೀಲಾವು ಮುಖಾಂತರ ನೀಡಿ ಸ್ವೀಕರಿಸಿದ ಭಕ್ತರಿಗೆ ಆಶೀರ್ವಾದ ಪ್ರಸಾದವನ್ನೂ ಸಹ ನೀಡಲಾಯಿತು.  

     ಹಿಂದೂ ಗಣಪತಿಯ ಮಹಾಮಂಡಳಿಯ ಅಧ್ಯಕ್ಷ ವೆಂಕನಗೌಡ ಪಾಟೀಲರು ಹಾಗೂ ಸರ್ವ ಸದಸ್ಯರನ್ನೊಳಗೊಂಡ ಕೈಕೊಂಡ ಅಭಿಪ್ರಾಯದಂತೆ, ಮಾರ್ಗಸೂಚಿಯಂತೆ ಗಣೇಶ ಮೂರ್ತಿಯನ್ನು ವಿಸರ್ಜನೆಗೆ ಕೊಂಡ್ಯೋಯ್ಯಲಾಯಿತಲ್ಲದೇ 7 ದಿನಗಳವರೆಗೆ ನಡೆಸಿಕೊಂಡು ಬರಲಾದ ಪ್ರತಿದಿನ ಪೂಜಾ ವಿದಿವಿಧಾನಗಳನ್ನು ಸಲ್ಲಿಸಿದ ಭಕ್ತರಿಗೂ ಸಮೀತಿ ವತಿಯಿಂದ ಸನ್ಮಾನಿಸಿ ಗೌರವಿಸುವ ಕಾರ್ಯ ನಡೆಯಿತು. 

     ಪಟ್ಟಣದ ಮಾರುತಿ ನಗರದಲ್ಲಿ ಪ್ರತಿಷ್ಟಾಪಿಸಲಾದ ಗಣೇಶ ಮಹಾಮೂರ್ತಿಯೂ ಸಹ ವಿಸರ್ಜನೆಗೆ ತೆರಳಿದವು. 

    ವಿಸರ್ಜನೆ ಸಮಯದಲ್ಲಿ ಯಾವದೇ ತರದ ಘಟನೆ ಜರುಗಬಾರದೆಂಬ ಉದ್ದೇಶದಿಂದ ಸಿಪಿಐ ಅವರು ಪಿಎಸ್‌ಐ ಅವರು ಹಾಗೂ ಸಿಬ್ಬಂದಿಗಳು ಯೋಗ್ಯ ಬಂದೋಬಸ್ತ ಏರಿ​‍್ಡಸಿ ಶಾಂತತೆಯನ್ನು ಕಾಪಾಡಿಕೊಂಡು ಬಂದಿರುವದು ಮಾದರಿಯಾಗಿ ಪರಿಣಮಿಸಿತು.  

   ಒಟ್ಟಿನಲ್ಲಿ ಗಣೇಶ ಉತ್ಸವ ಶಾಂತಿ ಮತ್ತು ಕೋಮು ಸೌಹಾರ್ಧತೆಯ ಭಾವನೆಯಿಂದ ಜರುಗಿತು.