ಯಲ್ಲಮ್ಮನಗುಡ್ಡದ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿ ಭಕ್ತರ ಪರದಾಟ
Devotees' procession due to traffic problems on the roads of Yellammanamgudda
ಲೋಕದರ್ಶನ ವರದಿ
ಯಲ್ಲಮ್ಮನಗುಡ್ಡದ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿ ಭಕ್ತರ ಪರದಾಟ
ಉಗರಗೋಳ 07: ಉಗರಗೋಳ ಸಮೀಪದ ಏಳುಕೊಳ್ಳದ ನಾಡು ಯಲ್ಲಮ್ಮಗುಡ್ಡದಲ್ಲಿ ಮಂಗಳವಾರ ಶೀಗಿ ಹುಣ್ಣಿಗೆ ಅಂಗವಾಗಿ ಬೃಹತ್ ಜಾತ್ರೆ ಜರುಗಿತು. ಬೆಳಗ್ಗೆಯಿಂದ ಗುಡ್ಡದತ್ತ ಹರಿದು ಬಂದ ಲಕ್ಷಾಂತರ ಭಕ್ತರು, ಆದಿಶಕ್ತಿ ಶ್ರೀ ರೇಣುಕಾ ದೇವಿಗೆ ತಮ್ಮ ಶಕ್ತಿಗೆಅನುಸಾರ ಪೂಜೆ ಸಲ್ಲಿಸಿ, ವಿಶೇಷ ದರ್ಶನ ಪಡೆದು ಪುನೀತರಾದರು. ಆದರೆ ಗುಡ್ಡಕ್ಕೆ ಸಂಪರ್ಕ ಕಲ್ಪಸುವ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯ ಉಂಟಾಗಿ ಭಕ್ತರು ಪರದಾಡಿದರು.
ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದಲೂ ಭಕ್ತರ ದಂಡು ಯಲ್ಲಮ್ಮನ ಸಾನ್ನಿಧ್ಯದತ್ತ ಮುಖಮಾಡಿತ್ತು. ಎತ್ತ ನೋಡಿದರೂ ಜನಜಾತ್ರೆಯೇ ಕಣ್ಣಿಗೆ ರಾಚುತ್ತಿತ್ತು. ಶೀಗಿ ಹುಣ್ಣಿಮೆಯಾದ್ದರಿಂದ ಅಲ್ಲೊಂದು ಗ್ರಾಮೀಣ ಹಳ್ಳಿ ಸೊಗಡಿನ ಜಾತ್ರೆಯೇ ನಡೆದಂತ ಅನುಭವ ಎಲ್ಲರಿಗೂ ಭಾಸವಾಗುತ್ತಿತ್ತು. ಯಲ್ಲಮ್ಮಗುಡ್ಡದ ಬೆಟ್ಟದ ಪ್ರದೇಶಗಳಲ್ಲಿ ಠಿಕಾಣಿ ಹೂಡಿದ್ದ ಭಕ್ತರು ಮಲಪ್ರಭೆ ಮಡಿಲಲ್ಲಿನ ಜೋಗುಳಬಾವಿ, ಎಣ್ಣೆಹೊಂಡದಲ್ಲಿ ಪವಿತ್ರಸ್ನಾನ ಮಾಡಿ ವಿಶೇಷ ನೈವೇದ್ಯ ತಯಾರಿಸಿ ಪರಡಿ ತುಂಬಿ ಅಮ್ಮನ ಕೃಪೆಗೆ ಪಾತ್ರರಾದರು. ಭಕ್ತರು ಹೋಳಿಗೆ, ಕಡಬು, ವಡೆ, ಭಜಿ ಮೊದಲಾದ ಖಾದ್ಯಗಳನ್ನು ತಯಾರಿಸಿದ್ದರು. ಧಾರ್ಮಿಕ ವಿಧಿವಿಧಾನಗಳ ನಂತರ ಎಲ್ಲರೂ ಒಗ್ಗೂಡಿ ಕುಳಿತು, ದೇವಿಯ ದರ್ಶನ ಪಡೆದು ಶೀಗಿ ಹುಣ್ಣಿಮೆ ಅರ್ಥಪೂರ್ಣವಾಗಿ ಆಚರಿಸಿದರು.ಶೀಗಿ ಹುಣ್ಣಿಮೆ ಜಾತ್ರೆ ರೈತರ ಜಾತ್ರೆಯಂದೇ ಖ್ಯಾತಿ ಪಡದಿದೆ ಆದರೆ ಈ ಬಾರಿ ಮಳೆ, ಪ್ರವಾಹದಿಂದ ಅಪಾರ ಪ್ರಮಾನದಲ್ಲಿ ಬೆಳೆ ಹಾನಿಯಾಗಿ ರೈತರು ಸಂಕಷ್ಡದಲ್ಲಿ ಇದ್ದಾರೆ, ಹಾಗಾಗಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೂ ಅಥವಾ ಇಲ್ಲವೂ ಎಂಬುವ ಅನುಮಾನವಿತ್ತು ಆದರೆ ರೈತರು ನೀರಿಕ್ಷೆಗೂ ಮೀರಿ ಹರಿದು ಬಂದಿದ್ದರು. ಯಲ್ಲಮ್ಮನ ಗುಡ್ಡಕ್ಕೆ ಸಂಪರ್ಕಿಸುವ ಮಾರ್ಗದಲ್ಲಿ ಭಕ್ತರು ಬೀಕಾಬಿಟ್ಟಿಯಾಗಿ ವಾಹನ ನಿಲ್ಲಿಸಿದ್ದರಿಂದ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಯಲ್ಲಮ್ಮನ ಗುಡ್ಡದಿಂದ ಉಗರಗೋಳ, ಹಿರೆಕುಂಬಿ, ಚಿಕ್ಕುಂಬಿವರೆಗೆ ವಾಹನಗಳ ಸಾಲು ಕಂಡುಬಂದಿತು ಸಂಜೆಯಾಗುತ್ತಾ ಬಂದರು ವಾಹನಗಳ ಸಾಲು ಇನ್ನೂ ಹೆಚ್ಚಾಗುತ್ತಲೇ ಸಾಗಿತ್ತು. ಭಕ್ತರು ಹೈರಾನಾಗಿದ್ದು ಕಂಡು ಬಂದಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 