ದೇವಿಹೊಸೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ವಯಂಪ್ರೇರಿತ ರಕ್ತದಾನ ಶಿಬಿರ
Devihosur and Primary Health Center Voluntary Blood Donation Camp
ಲೋಕದರ್ಶನ ವರದಿ
ಹಾವೇರಿ29 :ಸ್ಚಯಂ ಸೇವಾ ಸಂಸ್ಥೆಗಳು ಜನರ ಜೊತೆಗಿದ್ದು,ಜನರೇಳಿಗೆಗಾಗಿ ಮಹತ್ವ ಕೆಲಸ ಮಾಡುತ್ತಿವೆ.ಸಹಮತ ಸಂಸ್ಥೆಯು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಸದಸ್ಯರಾದ ಪರಿಮಳ ಜೈನ ಹೇಳಿದರು.
ತಾಲೂಕಿನ ದೇವಿಹೊಸೂರು ಗ್ರಾಮದ ಗ್ರಂಥಾಲಯದಲ್ಲಿ ಸಹಮತ ಸಂಸ್ಥೆ(ರಿ)ಹಾವೇರಿ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ,ಹಾವೇರಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರ,ಅಮ್ಮಾ ಸಂಸ್ಥೆ(ರಿ)ಹಿರೇಮುಗದೂರ,ಗ್ರಾಮ ಪಂಚಾಯತಿ ದೇವಿಹೊಸೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ದೇವಿಹೊಸೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾನ್ಯ ಜನತೆಯು ಅನಾರೋಗ್ಯಕ್ಕೊಳಗಾಗಿ ರಕ್ತದ ಅವಶ್ಯಕತೆಯಿರುವಾಗ ರಕ್ತವನ್ನು ಒದಗಿಸುವುದು ಮಹತ್ವದ ಕೆಲಸವಾಗಿದೆ. ಇಂತಹ ಜನಪರ ಕೆಲಸ ಮಾಡುವ ಸಹಮತ ಸಂಸ್ಥೆಯು ಜನರಲ್ಲಿ ರಕ್ತದಾನದ ಜಾಗೃತಿಯನ್ನು ಮೂಡಿಸಿ ಶಿಬಿರ ಹಮ್ಮಿಕೊಂಡಿರುವುದು ಮಾದರಿ ಕೆಲಸವಾಗಿದೆ ಎಂದರು.
ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರ ವೈದ್ಯಾಧಿಕಾರಿಗಳಾದ ಡಾ.ಬಸವರಾಜ ತಳವಾರ ಮಾತನಾಡಿ ರಕ್ತದಾನದ ಮೂಲಕ ಜೀವವನ್ನು ಉಳಿಸುವ ಕಾರ್ಯ ಮಾಡುತ್ತಿರುವ ಸಹಮತ ಸಂಸ್ಥೆಯ. ಕಾರ್ಯ ಅಭಿನಂದನಾರ್ಹವಾಗಿದೆ. ಒಂದು ಯೂನಿಟ್ ರಕ್ತದಿಂದ ಮೂರು ಜೀವಗಳನ್ನು ಉಳಿಸಲು ಸಾಧ್ಯವಿದೆ. ಹಾಗಾಗಿ ಜನತೆ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು.ಜಿಲ್ಲೆಯ ಜನಸಂಖ್ಯೆಗನುಗುಣವಾಗಿ ಹತ್ತೊಂಬತ್ತು ಸಾವಿರ ಯೂನಿಟ್ ರಕ್ತ ಅವಶ್ಯಕತೆಯಿದೆ. ಆದರೆ ಹತ್ತು ಸಾವಿರ ಯೂನಿಟ್ ಮಾತ್ರ ಸಂಗ್ರಹಿಸಲು ಸಾಧ್ಯವಾಗಿದೆ. ಇನ್ನೂ ಒಂಬತ್ತು ಸಾವಿರ ಯೂನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಬೇಕಿದೆ.ಸಹಮತ ಸಂಸ್ಥೆಗಳಂತೆ ಉಳಿದೆಲ್ಲ ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಏರಿ್ಡಸಬೇಕು ಎಂದು ಕರೆ ನೀಡಿದರು.
ರಕ್ತದಾನ ಶಿಬಿರದಲ್ಲಿ ರಕ್ತದಾನಿಗಳಿಂದ ಐವತ್ತು ಯೂನಿಟ್ ರಕ್ತ ಸಂಗ್ರಹಿಸಲಾಯಿತು. ರಕ್ತದಾನ ಮಾಡಿದವರಿಗೆ ಅಭಿನಂದನಾ ಪ್ರಶಂಸಾ ಪತ್ರ ನೀಡಿ ಗೌರವಿಸಿ ಅಭಿನಂದಿಸಿ,ರಕ್ತದಾನ ಶಿಬಿರ ಕಾರ್ಯಕ್ರಮ ಆಯೋಜಿಸಿದ ಸಂಸ್ಥಗಳಿಗೆ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವತಿಯಿಂದ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಸಹಮತ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಪೂಜಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಹಮತ ಸಂಸ್ಥೆಯ ಕಾರ್ಯದರ್ಶಿ ರೇಣುಕಾ ಕಹಾರ ನಿರೂಪಿಸಿದರು. ಅಮ್ಮಾ ಸಂಸ್ಥೆಯ ನಿಂಗಪ್ಪ ಆರೇರ ವಂದಿಸಿದರು.ಜಿಲ್ಲಾ ರಕ್ತನಿಧಿ ಕೆಂದ್ರದ ರೇವಣಸಿದ್ದಪ್ಪ, ಸಂತೋಷ ನೆಲ್ಲಿಕೊಪ್ಪ,ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಮಂಜುನಾಠ, ಡಾ.ವಿಜಯ್,ದೇವಿಹೊಸೂರು ರಕ್ತದಾನಿಗಳ ಬಳಗದ ಮುಖ್ಯಸ್ಥರಾದ ಗಣೇಶಗೌಡ ಗಟ್ಟಿ, ಸಹಮತ ಸಂಸ್ಥೆಯ ಪದಾಧಿಕಾರಿಗಳಾದ ಬೀರ್ಪ ಸೂರಣಗಿ,ಲಕ್ಷ್ಮೀಪ್ರಭ ಎಸ್.ಹುಲ್ಲೂರು,ಸವಿತಾ ಗುಬ್ಬೇರ,ಡಿಹೆಚ್‌ಎಸ್ ಜಿಲ್ಲಾ ಸಂಚಾಲಕರಾದ ವೀರಣ್ಣ ಗಡ್ಡಿಯವರ,ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷರಾದ ಅರುಣ ನಾಗಾವತ್, ಡಿವೈಎಪ್‌ಐ ಜಿಲ್ಲಾ ಮುಖಂಡರಾದ ಖಲಂದರ್ ಅಲ್ಲಿಗೌಡ್ರ,ಅಜಯಸಿಂಗ್ ರಜಪೂತ,ಪರಶುರಾಮ ಕಹಾರ, ಸುಲ್ತಾನ ಹುಬ್ಬಳ್ಳಿ,ಆನಂದ ಕ್ಯಾಲಕೊಂಡ,ನಾಗನಗೌಡ ಹರ್ತಿ,ಜಾಕಿರಲಿ ದೇವಗೇರಿ,ಚಮನಸಾಬ ಮೆಳ್ಳೆಗಟ್ಟಿ,ಶಿವಯೋಗಿ ನಂದಿ,ಸಿದ್ಧರಾಮೇಶ ಸಿಂಧನೂರು ಸೇರಿದಂತೆ ಅನೇಕರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 