ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ: ಶಂಕರ ಹಲಗತ್ತಿ
Development of villages is development of the country: Shankar Halagatti
ಧಾರವಾಡ 06: ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಒಂದು ದೇಶದ ಭವಿಷ್ಯ ಆ ದೇಶದ ಯುವಜನಾಂಗದ ಸ್ವಭಾವ, ಸಾಮರ್ಥ್ಯ ಹಾಗೂ ಚಾರಿತ್ರ್ಯವನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ತಮ್ಮ ಶಕ್ತಿ, ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ‘ಕಲಾ ಮತ್ತು ಜಾನಪದ ಮಂಟಪ’ವು ಕಲಘಟಗಿ ಗುಡ್‌ನ್ಯೂಸ್ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕಲಘಟಗಿ ತಾಲೂಕಿನ ಜುಂಜನಬೈಲ್ ಗ್ರಾಮದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ (ಎನ್.ಎಸ್.ಎಸ್.) ವಾರ್ಷಿಕ ಶಿಬಿರದಲ್ಲಿ ಅತಿಥಿಗಳಾಗಿ ಮಾತನಾಡಿದರು.
ಜುಂಜನಬೈಲ್ ಗ್ರಾಮವು ಜಿಲ್ಲೆಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಮಾದರಿಯವಾದ ಗ್ರಾಮ. ಈ ಗ್ರಾಮದಿಂದ ಇಲ್ಲಿಯವರೆಗೂ ನ್ಯಾಯಾಲಯದಲ್ಲಿ ಹಾಗೂ ಪೊಲೀಸ್ ಠಾಣೆಯಲ್ಲಿ ಒಂದೂ ಪ್ರಕರಣ ಮತ್ತು ಮೊಕದ್ದಮೆಗಳು ದಾಖಲಾಗದೇ ಇರುವುದು ನಿಜವಾಗಿ ಅನುಕರಣೀಯ. ಅಂತಹ ಪ್ರಕರಣಗಳನ್ನು ಊರಿನ ಹಿರಿಯರು ರಾಜಿ ಮೂಲಕ ಇತ್ಯರ್ಥಗೊಳಿಸುತ್ತಿರುವುದು ಅಭಿನಂದನಾರ್ಹವಾದುದು. ಗ್ರಾಮದ ಜನರು ಶಾಂತಿ, ಸಹಕಾರ, ಸೌಹಾರ್ಧಯುತವಾದಂತಹ ಮೌಲ್ಯಾಧಾರಿತ ಜೀವನವನ್ನು ನಡೆಸುತ್ತಿರುವುದು ನಿಜವಾಗಿಯೂ ಶ್ಲಾಘನೀಯ.
ಎನ್.ಎಸ್.ಎಸ್. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಮತ್ತು ಸಹಕಾರ ಗುಣಗಳನ್ನು ಬೆಳೆಸುತ್ತಿದೆ. ವಿದ್ಯಾರ್ಥಿಗಳು ಗ್ರಾಮದ ಅಭಿವೃದ್ಧಿ ಕಾರ್ಯಗಳನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಮಾಡಿಕೊಳ್ಳಬೇಕು. ಮುಂದಿನ ಪೀಳಿಗೆಗೆ ನಿಮ್ಮ ಕಾರ್ಯಗಳೇ ಸ್ಮಾರಕಗಳಾಗಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಮಹೇಶ ಧ. ಹೊರಕೇರಿ ಮಾತನಾಡಿ, ಎನ್.ಎಸ್.ಎಸ್. ವಾರ್ಷಿಕ ಶಿಬಿರದಲ್ಲಿ ನಮ್ಮ ವಿದ್ಯಾಲಯದಿಂದ ಉಚಿತ ನೇತ್ರ ತಪಾಸಣೆ, ರಕ್ತದಾನ ಶಿಬಿರಗಳನ್ನು ಆಯೋಜಿಸಿ ಗ್ರಾಮದ ಅನೇಕ ಫಲಾನುಭವಿಗಳಿಗೆ ಅನುಕೂಲಿಸಲಾಗಿದೆ. ರಕ್ತದಾನದ ಮಹತ್ವ ಕುರಿತು ಗ್ರಾಮೀಣ ಜನರಿಗೆ ಸಾರ್ವಜನಿಕ ಅರಿವು ಮೂಡಿಸಲಾಗಿದೆ. ಇದೊಂದು ಯಶಸ್ವಿ ಶಿಬಿರವಾಗಿದ್ದು ಗ್ರಾಮದ ಎಲ್ಲರೂ ತಮ್ಮ ಸಹಾಯ, ಸಹಕಾರ ನೀಡಿದ್ದಕ್ಕಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.
ಹರ್ಲಾಪೂರದ ಸಿ.ವಾಯ್.ಸಿ.ಡಿ. ಕಲಾ ತಂಡದವರು ಮೂಲ ಜಾನಪದ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ವೇದಿಕೆ ಮೇಲಿನ ಗಣ್ಯರನ್ನು ಶಿಬಿರದ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.
ವೇದಿಕೆಯಲ್ಲಿ ಕ.ವಿ.ವ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ವೀರಣ್ಣ ಒಡ್ಡೀನ, ಆರ್.ಎಸ್. ಬಾಳನಗೌಡ್ರ, ಭೀಮು ಖಟಾವಿ, ರೆಹಮಾನಸಾಬ್ ಸೌದಾಗರ ಇದ್ದರು. ಕಾರ್ಯಕ್ರಮಾಧಿಕಾರಿ ಎಂ.ಬಿ. ಉಳ್ಳಾಗಡ್ಡಿ, ಎಂ.ಎನ್. ನಿಂಬಣ್ಣವರ, ಮಹಿಮಾ ದೂಪದ, ಶಶಿಧರ ಹೆಬ್ಬಳ್ಳಿಮಠ ಮುಂತಾದವರು ಉಪಸ್ಥಿತರಿದ್ದರು. ಜ್ಯೋತಿ ಜಾವೂರ ಸ್ವಾಗತಿಸಿದರು, ಗಾಯತ್ರಿ ಚಿಕ್ಕಮ್ಮನವರ ನಿರೂಪಿಸಿದರು. ಸಹೀರಾ ಮಿಠಾಯಿಗಾರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 