ಎಡಿಬಿ ಅನುದಾನದಲ್ಲಿ ಮಡಿಗಾಲುವೆಗಳು ಅಭಿವೃದ್ಧಿ : ಪಿ.ಮೂಕಯ್ಯಸ್ವಾಮಿ
Development of the foothills with ADB grant: P. Mookayaswamy
ಎಡಿಬಿ ಅನುದಾನದಲ್ಲಿ ಮಡಿಗಾಲುವೆಗಳು ಅಭಿವೃದ್ಧಿ : ಪಿ.ಮೂಕಯ್ಯಸ್ವಾಮಿ
ಕಂಪ್ಲಿ 30: ಕಂಪ್ಲಿ ತಾಲ್ಲೂಕಿನಲ್ಲಿ ನೂರಾರು ವರ್ಷಗಳಿಂದಲೂ ದುರಸ್ತಿ ಕಾಣದ ಮಡಿಗಾಲುವೆಗಳನ್ನು ಸರ್ಕಾರದ ಎಡಿಬಿ ಅನುದಾನದಲ್ಲಿ ಸ್ವತಃ ರೈತರು ಮಡಿಗಾಲುವೆಗಳನ್ನು ಅಭಿವೃದ್ಧಿಗೊಳಿಸಿಕೊಂಡಿದ್ದಾರೆಂದು ರೈತ ಮುಖಂಡ ಸಣಾಪುರದ ಪಿ.ಮೂಕಯ್ಯಸ್ವಾಮಿ ತಿಳಿಸಿದರು. ಅವರು ಬುಧವಾರ ಪಟ್ಟಣದ ಕೋಟೆ ಹತ್ತಿರದ ಗಣೇಶನ ದೇವಸ್ಥಾನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರವು ಎಡಿಬಿ ಅನುದಾನ ಮೂಲಕ ವಿಜಯನಗರ ಕಾಲುವೆಗಳು, ಸೇರಿದಂತೆ ರೈತರ ಮಡಿಗಾಲುವೆಗಳ ದುರಸ್ತಿಗೆ ನೂರಾರು ಕೋಟಿ ರೂಗಳನ್ನು ಬಿಡುಗಡೆ ಮಾಡಿತ್ತಲ್ಲದೆ ರೈತರ ಹೊಲ ಗದ್ದೆಗಳ ಮಡಿಗಾಲುವೆಗಳನ್ನು ರೈತರೇ ಮುತುವರ್ಜಿ ವಹಿಸಿ ದುರಸ್ತಿ ಮಾಡಿಸಿಕೊಳ್ಳಲು ಅವಕಾಶಗಳನ್ನು ಮಾಡಿಕೊಟ್ಟಿತ್ತು. ಅದರಂತೆಯೇ ರೈತರು ತಮ್ಮ ತಮ್ಮ ಜಮೀನುಗಳ ಮಡಿಗಾಲುವೆಗಳನ್ನು ನೀರು ಬಳಕೆದಾರರ ಸಂಘದ ಮೂಲಕ ಉತ್ತಮ ಗುಣಮಟ್ಟದಲ್ಲಿ ದುರಸ್ತಿ ಮಾಡಿಸಿಕೊಂಡಿದ್ದಾರೆ. ನೂರಾರು ವರ್ಷಗಳು ದುರಸ್ತಿ ಕಾಣದ ಕಾಲುವೆಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಮಡಿಗಾಲುವೆಗಳ ಕೊನೆಯಂಚಿಗೆ ಇದುವರೆಗೂ ನೀರೇ ಸಿಗುತ್ತಿರಲಿಲ್ಲ.ಆದರೆ ಮಡಿಗಾಲುವೆಗಳ ದುರಸ್ತಿಯ ನಂತರ ಕೊನೆಯಂಚಿನ ಜಮೀನುಗಳಿಗೂ ನೀರು ಸಿಗುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ. ಮಡಿಗಾಲುವೆಗಳ ಅಭಿವೃದ್ಧಿ ಕಾಮಗಾರಿಗಳನ್ನು ನೀರಾವರಿ ಇಲಾಖೆಯ ಅಧಿಕಾರಿಗಳು ಪರೀಶೀಲನೆ ಮಾಡಿದ ನಂತರ ಅನುದಾನವನ್ನು ಬಿಡುಗಡೆ ಮಾಡಿದ್ದು, ಇನ್ನು ಶೇ.20ರಷ್ಟನ್ನು ಬಾಕಿ ಉಳಿಸಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಕೆಲವರು ಬಾಧಿತರಾಗದವರು ವಿನಾಕಾರಣ ಮಡಿಗಾಲುವೆಗಳ ಬಗ್ಗೆ ದೂರುಗಳನ್ನು ನೀಡಿ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವುದಲ್ಲದೆ, ನಮಗೆ ಬರಬೇಕಾದ ಬಾಕಿ ಹಣವೂ ಬಾರದಂತಾಗಿದೆ. ನೀರಾವರಿ ಇಲಾಖೆಯ ಅಧಿಕಾರಿಗಳ ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಮತ್ತೊಮ್ಮೆ ಬೇಕಾದರೆ ಪರೀಶೀಲನೆ ಮಾಡಲಿ, ಆದರೆ ಹಣವನ್ನು ತಡೆಹಿಡಿಯದೇ ಕೂಡಲೇ ಬಿಡುಗಡೆ ಮಾಡಬೇಕೆಂದರಲ್ಲೆ, ಕಮಲಾಪುರ ಕರ್ನಾಟಕ ನೀರಾವರಿ ನಿಗಮದ ಎಇಇ ಬಸಪ್ಪ ಜಾನ್ಕರ್ ಮತ್ತು ಸಿಬ್ಬಂದಿಗಳು ಹಗಲಿರುಳು ಮಡಿಗಾಲುವೆಗಳ ದುರಸ್ತಿಗೆ ವಿಶೇಷ ಗಮನ ಹರಿಸಿ ಅಭಿವೃದ್ಧಿಗೊಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದಾರೆ ಎಂದರು. ನಂತರ ರೈತರ ಮಡಿಗಾಲುವೆಗಳ ದುರಸ್ತಿಗೆ ಸಂಬಂಧಿಸಿದಂತೆ ಕರ್ನಾಟಕ ನೀರಾವರಿ ನಿಗಮ ಬಾಕಿ ಉಳಿಸಿಕೊಂಡಿರುವ ಶೆ.20ಅರಷ್ಟು ಅನುದಾನವನ್ನು ಮುಖ್ಯಂತ್ರಿಗಳೊಂದಿಗೆ ಚರ್ಚಿಸಿ ಕೂಡಲೇ ಬಿಡುಗಡೆ ಮಾಡಿಸುವಂತೆ ದಿಶಾ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ಎ.ಸಿ.ದಾನಪ್ಪನವರಿಗೆ ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು ಮನವಿ ಪತ್ರವನ್ನು ಸಲ್ಲಿಸಿದರು. ಮನವಿ ಸ್ವೀಕರಿಸಿ ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ ಮಾತನಾಡಿ, ಅವರು ಎಡಿಬಿ ಮೂಲಕ 5 ಉಪವಿಭಾಗಗಳಲ್ಲಿ ಕಾಲುವೆಗಳೂ ಸೇರಿದಂತೆ ಮಡಿಗಾಲುವೆ,ವಿತರಣಾ ನಾಲೆಗಳನ್ನು ಉತ್ತಮವಾಗಿ ರೈತರೇ ತಮ್ಮ ನೀರು ಬಳಕೆದಾರರ ಸಂಘದ ಮೂಲಕ ದುರಸ್ತಿ ಮಾಡಿಸಿಕೊಂಡಿದಾರೆ. ಆದರೆ ಯಾರೋ ಕೆಲವರು ಮಾಡಿರುವ ಆರೋಪಗಳಿಂದಾಗಿ ಬಾಕಿ ಅನುದಾನ ಉಳಿದಿದ್ದು, ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಮೂಲಕ ಬಿಡುಗಡೆ ಮಾಡಿಸಲು ಪ್ರಮಾಣಿಕ ಪ್ರಯತ್ನಗಳನ್ನು ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಅಯೋದಿ ವೆಂಕಟೇಶ್, ರೈತ ಮುಖಂಡರಾದ ನವೀನ್ ಮಣ್ಣೂರು, ಎಸ್.ಚಂದ್ರಶೇಖರಗೌಡ, ಕೋನೇರು ಶ್ರೀಧರ, ಮುರಾರಿ ದಾಸರ, ಕನಕಗಿರಿ ಬಸವರಾಜ, ಬಿ.ಲಕ್ಷ್ಮಣ, ಬಿ.ಗಂಗಾಧರ್, ತಿಮ್ಮಯ್ಯ ಯು.ಅರುಣ್‌ಕುಮಾರ್, ಜಿ.ರವಿಶಂಕರ್ ಸೇರಿದಂತೆ ರಾಮಸಾಗರ, ನಂ.10 ಮುದ್ದಾಪುರ, ಬೆಳಗೋಡುಹಾಳು, ಸಣಾಪುರ ಹಾಗೂ ಕಂಪ್ಲಿ ಪಟ್ಟಣದ ರೈತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 