ಲೋಕದರ್ಶನವರದಿ
ಬ್ಯಾಡಗಿ: ಸಮುದಾಯದ ಸಕಾರಾತ್ಮಾಕ ಸಹಕಾರದಿಂದ ಮಾತ್ರ ಜೀವವಿಮಾ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯವಿದ್ದು ಈ ದಿಶೆಯಲ್ಲಿ ಜೀವವಿಮಾ ಸಂಸ್ಥೆಯ ಏಜೆಂಟ್ರುಗಳು ಸಕಾರಾತ್ಮಕ ಚಿಂತನೆಯಿಂದ ಹೆಚ್ಚು ವಿಮಾ ಪಾಲಿಸಿದಾರರಿಗೆ ತಿಳುವಳಿಕೆ ನೀಡುವ ಮೂಲಕ ಜೀವವಿಮಾ ಸಂಸ್ಥೆಯನ್ನು ಆದರ್ಶ ಸಂಸ್ಥೆಯನ್ನಾಗಿ ಮಾಡುವಂತೆ ಸ್ಥಳೀಯ ಅಭಿವೃದ್ಧಿ ಅಧಿಕಾರಿ ರವೀಂದ್ರ ಮುಗುದುಂ ಹೇಳಿದರು.
ಸ್ಥಳೀಯ ತಾ.ಪಂ.ಸಭಾಭವನದಲ್ಲಿ ರವೀಂದ್ರ ಮುಗುದುಂ ಅವರ ಪ್ರತಿನಿಧಿಗಳ ಬಳಗ ಹಾಗೂ ಲಿಯಾಫಿ ಸಂಸ್ಥೆಯ ಪದಾಧಿಕಾರಿಗಳು ರವೀಂದ್ರ ಮುಗುದುಂ ಅವರು ಸ್ಥಳೀಯ ಜೀವವಿಮಾ ಸಂಸ್ಥೆಯಿಂದ ಪದೋನ್ನತಿ ಹೊಂದಿ ರಾಣೆಬೆನ್ನೂರಿನ ಜೀವವಿಮಾ ಸಂಸ್ಥೆಯಲ್ಲಿ ಸಹಾಯಕ ಮ್ಯಾನೇಜರ್ ಆಗಿ ಪದೋನ್ನತಿ ಹೊಂದಿದ ನಿಮಿತ್ಯವಾಗಿ ಅವರೊಂದಿಗೆ ತಾಯಿ ಹಾಗೂ ಪತ್ನಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಹಾಗೂ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಕಳೆದ 30 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಸ್ಥಳೀಯ ಜೀವವಿಮಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದು, ನನಗೆ ತೃಪ್ತಿ ತಂದಿದೆ.
ಇಲ್ಲಿನ ಜನತೆ ನನಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಇಲ್ಲಿನ ಜನತೆಯ ಋಣವನ್ನು ತೀರಿಸಲು ನನ್ನಿಂದಾ ಸಾಧ್ಯವಾಗಲಾರದು. ಜೀವವಿಮಾ ಸಂಸ್ಥೆಯಲ್ಲಿ ನನ್ನೊಂದಿಗೆ ಹಾಗೂ ನನ್ನ ಬಳಗದಲ್ಲಿ ನೂರಾರು ಯುವಕ ಯುವತಿಯರು ಉತ್ತಮವಾಗಿ ಬೆಳೆದು ಸಂಸ್ಥೆಗೆ ತಮ್ಮಿಂದಾದ ಸೇವೆಯನ್ನು ಸಲ್ಲಿಸಿದ್ದಾರೆ. ಲಿಯಾಫಿ ಸಂಸ್ಥೆಯ ತಾಲೂಕಾ ಅಧ್ಯಕ್ಷ ನಾಗೇಶ ಗುತ್ತಲ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅನೇಕ ಸಂಸ್ಥೆಗಳು ವಿಮಾಪಾಲಿಸಿ ಮಾಡಿಸಲು ತಾಮುಂದೆ ನಾ ಮುಂದೆ ಎಂಬಂತೆ ಹುಟ್ಟಿ ಕೆಲವೇ ದಿನಗಳಲಿ ಪಾಲಿಸಿದಾರರನ್ನು ಮೋಷಗೊಳಿಸಿರುವುದನ್ನು ನಾವು ದಿನ ನಿತ್ಯ ನೋಡುತ್ತಿದ್ದೇವೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀವವಿಮಾ ಸಂಸ್ಥೆಯ ಹಿರಿಯ ಏಜೆಂಟ್ ಬಸಣ್ಣ ಹಾದರಗೇರಿ ವಹಿಸಿ ಮಾತನಾಡಿ ಸ್ಥಳೀಯ ಜೀವವಿಮಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ರವೀಂದ್ರ ಮುಗುದುಂ ಅವರು ಏಜೆಂಟರರ್ ಸವರ್ೋತೋಮುಖ ಬೆಳವಣೆಗೆಗೆ ಹಾಗೂ ಸಂಸ್ಥೆಯ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ. ಇಂದು ನಮ್ಮಲ್ಲಿಂದಾ ಪದೋನ್ನತಿ ಹೊಂದಿ ರಾಣೆಬೆನ್ನೂರಿನ ಜೀವವಿಮಾ ಸಂಸ್ಥೆಗೆ ತೆರಳುತ್ತಿರುವುದು ಸಂತೋಷ ಪಡುವಂತ ವಿಷಯವೆಂದರು. ಸ್ಪಧರ್ಾತ್ಮಕವಾದ ಇಂದಿನ ದಿನಗಳಲ್ಲಿ ನಮಗೆ ಅವರು ಬದುಕುವ ಕಲೆಯನು ಕಲಿಸಿದ್ದಾರೆಂದು ಹೆಮ್ಮೆ ಪಟ್ಟರು.
ಅತಿಥಿಗಳಾಗಿ ನ್ಯಾಯವಾಧಿ ಎಫ್.ಎಂ.ಮುಳಗುಂದ, ಬಸವಣ್ಣೆಪ್ಪ ಗುತ್ತಲ, ಗೀತಕ್ಕ ಕಬ್ಬೂರ, ಸಂಪದಾ ಮುಗುದುಂ, ಶಾಂತಾ ಮುಗುದುಂ, ಸುರೇಶ ಉದೋಗನ್ಣನವರ, ದ್ರಾಕ್ಷಾಯಣಕ್ಕ ಹರಮಗಟ್ಟಿ, ಶಿಲ್ಪಾ ಗುತ್ತಲ, ಮಂಜುಳಾ ಗುತ್ತಲ, ಎಸ್.ಎಂ.ಪಾಟೀಲ, ರಂಗಣ್ಣ ಗುತ್ತಲ, ಕೊಟ್ರೇಶ ಅಂಗಡಿ, ಎಂ.ಬಿ.ಅಂಗಡಿ, ಸುಭಾಶ ಪಂಚಾನನ, ಎಸ್.ಜಿ.ಸಂಕನ್ಣನವರ, ಸಿ.ಪಿ.ಹುದ್ದಾರ, ಮಾಲತೇಶ ಯಲಿ, ಮೃತ್ಯಂಜಯ ರಾಮಗೊಂಡನಹಳ್ಳಿ, ಸುಮಾ ಬಕಿಟಗಾರ, ಮುತ್ತಣ್ಣ ಕೆರೂಡಿ, ಅಂಬಣ್ಣ ಜೈನ್, ಎಚ್.ಎಸ್.ಬನ್ನಿಹಟ್ಟಿ ಸೇರಿದಂತೆ ಇನ್ನೀತರರಿದ್ದರು.