ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವ ಛಲ ಬೆಳಿಸಿಕೊಳ್ಳಿರಿ: ಸಂಜೀವಕುಮಾರ ನೀರಲಗಿ
Develop the will to build a self-reliant life: Sanjeev Kumar Neeralagi
ಹಾವೇರಿ 27 : ವಿಕಲಚೇತನರು ತರಬೇತಿ ಹಾಗೂ ಉದ್ಯೋಗಾವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವ ಛಲ ಬೆಳಿಸಿಕೊಳ್ಳಿರಿ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಸಂಜೀವಕುಮಾರ ನೀರಲಗಿ ಸಲಹೆ ನೀಡಿದರು. ಇಲ್ಲಿನ ಜಿಲ್ಲಾಸ್ಪತ್ರೆಯ ಆವರಣದಲ್ಲಿನ ಡಿಡಿಆರ್ ಸಿ ಕಚೇರಿಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ -ಹಾವೇರಿ, ಡಿಡಿಆರ್ ಸಿ ಹಾವೇರಿ ಹಾಗೂ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎ.ಪಿ.ಡಿ) ಇವರ ಸಹಯೋಗದೊಂದಿಗೆ ಆಯೋಜಿಸಿದ ಜಿಲ್ಲೆಯ ವಿಕಲಚೇತನರಿಗೆ ತರಬೇತಿ ಮತ್ತು ಉದ್ಯೋಗ ಅವಕಾಶ ಇರುವ ಬಗ್ಗೆ ಅರಿವು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ವಿಕಲಚೇತನರ ಬದುಕಿಗೆ ದಾರೀದೀಪವಾಗಲು ರೆಡ್ ಕ್ರಾಸ್ ಸಂಸ್ಥೆ, ಎ.ಪಿ.ಡಿ ಸಂಸ್ಥೆಗಳಂತಹ ಹಲವಾರು ಸಂಸ್ಥೆಗಳು ಕೆಲಸ ಮಾಡುತ್ತಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೌಲಭ್ಯಗಳನ್ನು ಪಡೆಯಲು ಇಂತಹ ತರಬೇತಿ ಅರಿವು ಕಾರ್ಯಕ್ರಮಗಳು ಸಹಕಾರಿಯಾಗಲಿವೆ.ಜಿಲ್ಲೆಯ ವಿಕಲಚೇತನರು ಇಂತಹ ಕಾರ್ಯಕ್ರಮಗಳಿಂದ ತಮ್ಮ ಬದುಕಿಗೆ ಉಪಯೋಗವಾಗಲಿ ಎಂದರು. ಎ.ಪಿ.ಡಿ ಸಂಸ್ಥೆಯ ಹನುಮಂತರಾಯಪ್ಪ ಪ್ರಾಸ್ತಾವಿಕ ಮಾತನಾಡಿ ವಿಕಲಚೇತನರಿಗೆ ಅನುಕಂಪಕ್ಕಿಂತ ಉದ್ಯೋಗಗಳ ಅವಕಾಶ ನೀಡಿದರೆ ಸ್ವಾವಲಂಬನೆ ಬದುಕಿಗೆ ಸಹಕಾರಿಯಾಗಲಿದೆ. ಜಿಲ್ಲೆಯ ವಿಕಲಚೇತನರು ತರಬೇತಿ ಪಡೆದು ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ನಮ್ಮ ಕಾರ್ಯಕ್ರಮ ಸಾರ್ಥಕವಾಗಲಿದೆ.ತಮ್ಮಲ್ಲಿ ಅದ್ಭುತ ಸಾಮರ್ಥ್ಯ ಇರುತ್ತದೆ. ಎಲ್ಲರಗಿಂತ ಭಿನ್ನವಾಗಿ ಸಾಧನೆ ಮಾಡಲು ನಿಮ್ಮಲ್ಲಿ ಪ್ರತಿಭೆ ಇರುತ್ತದೆ.ಎ.ಪಿ.ಡಿ ಸಂಸ್ಥೆ ತರಬೇತಿ ಹಾಗೂ ಉದ್ಯೋಗ ಅವಕಾಶ ನೀಡಲು ಸದಾ ಸಿದ್ದವಾಗಿದೆ.
ನಾನು ಚಿಕ್ಕ ವಯಸ್ಸಿನಲ್ಲಿ ಕಣ್ಣಿನ ಸಮಸ್ಯೆಗೆ ಒಳಗಾಗಿ ಶಿಕ್ಷಣ ಸೌಲಭ್ಯ ಪಡೆದು ಇದೇ ಕ್ಷೇತ್ರದಲ್ಲಿ ಸೇವೆ ಮಾಡುತ್ಗಿದ್ದೇನೆ ಎಂದು ತಮ್ಮ ಬದುಕಿನ ಸ್ಪೂರ್ತಿದಾಯಕ ನುಡಿಗಳನ್ನು ಮಾತನಾಡಿದರು.ಕಾರ್ಯಕ್ರಮ ಉದ್ಘಾಟನೆ ಮಾಡಿದ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸಮಿತಿ ಸದಸ್ಯರಾದ ರವಿ ಮೆಣಸಿನಕಾಯಿ ಮಾತನಾಡಿ ಸೌಲಭ್ಯ ಪಡೆದುಕೊಂಡು ತಮ್ಮ ಬದುಕು ಕಟ್ಟಿಕೊಳ್ಳಲು ಛಲದಿಂದ ಮುನ್ನಡಿಯಿರಿ ಎಂದರು.ವಿಕಲಚೇತನರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಮೌನೇಶ ಬಡಿಗೇರ ಮಾತನಾಡಿ ನಾವು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಲು ಶ್ರಮಿಸಬೇಕು. ಛಲದಿಂದ ಎಲ್ಲವನ್ನೂ ಸಾಧಿಸಲು ಸಾಧ್ಯ.ತರಬೇತಿ ಉದ್ಯೋಗಗಳ ಸದುಪಯೋಗ ಪಡಿಸಿಕೊಳ್ಳಿರಿ ಎಂದರು.ಇದೇ ಅವಧಿಯಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಎ.ಪಿ.ಡಿ ಸಂಸ್ಥೆಯ ಹನುಮಂತರಾಯಪ್ಪ ಹಾಗೂ ಮೌನೇಶ ಬಡಿಗೇರ ಅವರನ್ನು ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಪ್ರಭು ಹಿಟ್ನಳ್ಳಿ, ಜಿಲ್ಲಾ ಸಹಕಾರ್ಯದರ್ಶಿ ನಿಂಗಪ್ಪ ಆರೇರ, ಜಿಲ್ಲಾ ಸಮಿತಿ ಸದಸ್ಯರಾದ ಹನುಮಂತಗೌಡ ಗೊಲ್ಲರ,ಉಡಚಪ್ಪ ಮಾಳಗಿ,ರವಿ ಇಂಚಿಗೇರಿ,ಪ್ರದೀಪ ದೊಡ್ಡಗೌಡ್ರ,ಎ.ಪಿ.ಡಿ ಸಂಸ್ಥೆ ಟ್ರೈನಿಂಗ್ ಅಧಿಕಾರಿಗಳಾದ ಸೋಮನಾಥ,ಲಕ್ಷ್ಮೀ, ಡಿಡಿಆರ್ ಸಿ ನೋಡಲ್ ಆಫೀಸರ್ ಪೂರ್ಣಿಮಾ ಮಠದ. ಸಿಬ್ಬಂದಿಗಳಾದ ಇರ್ಶಾದಲಿ ದುಂಡಸಿ,ಫಕ್ಕಿರೇಶ ಬಾರ್ಕಿ,ನವೀನ ಮುಗದೂರ,ಜಗದೀಶ ಬೆಟಗೇರಿ ಸೇರಿದಂತೆ ಎಂ ಆರ್ ಡಬ್ಯೂ,ವ್ಹಿಆರ್ ಡಬ್ಲೂ ಹಾಗೂ ಜಿಲ್ಲೆಯ ವಿಕಲಚೇತನರು ಪಾಲ್ಗೊಂಡಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 