ಜೀವನದಲ್ಲಿ ಆಧ್ಯಾತ್ಮಿಕ ಒಲವು ಬೆಳೆಸಿಕೊಳ್ಳಿ: ನಾವದಗಿ
Develop a spiritual bent in life: Navadagi
ತಾಳಿಕೋಟಿ 09: ಮಹಾತ್ಮರು ದಾರ್ಶನಿಕರು ಶರಣರು ನಮ್ಮನ್ನು ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ತರುತ್ತಾರೆ. ಅವರ ಜೀವನ ಚರಿತ್ರೆ ತಿಳಿದುಕೊಳ್ಳುವ ಪ್ರಯತ್ನ ನಾವೆಲ್ಲರೂ ಮಾಡಬೇಕು. ಅವರ ಆದರ್ಶ ಬದುಕು ನಮಗೆ ದಾರಿ ದೀಪವಾಗಿದೆ ಎಂದು ನಾವದಗಿ ಬ್ರಹನ್ಮಠದ ಷ.ಬ್ರ. ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ ಮಹಾ ಸ್ವಾಮಿಗಳು ಹೇಳಿದರು. ತಾಲೂಕಿನ ಸುಕ್ಷೇತ್ರ ಶಳ್ಳಗಿ ಗ್ರಾಮದಲ್ಲಿ ಬಸವಂತ್ರಾಯ ಹಾಗೂ ಪರಮಣ್ಣ ಮುತ್ಯಾ ದೇವಸ್ಥಾನದ 2ನೇ ವರ್ಷದ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಬುಧವಾರ ಹಮ್ಮಿಕೊಂಡ ಕಲ್ಬುರ್ಗಿ ಶರಣ ಬಸವೇಶ್ವರ ಪುರಾಣ ಪ್ರಾರಂಭೋತ್ಸವ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಶಳ್ಳಗಿ ಸುಕ್ಷೇತ್ರದಲ್ಲಿ ಈ ಇಬ್ಬರು ಮಹಾನ್ ಶರಣರು ಅದಮ್ಯ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿವರಾಗಿದ್ದರು. ಭಕ್ತರು ಬೇಡಿದ ಇಷ್ಟಾರ್ಥಗಳನ್ನು ಕ್ಷಣಾರ್ಧದಲ್ಲಿ ಈಡೇರಿಸುವಂಥಹ ಪವಾಡ ಪುರುಷರಾಗಿದ್ದರು. ಕಳೆದ ಎರಡು ವರ್ಷಗಳಿಂದ ಈ ಕಾರ್ಯಕ್ರಮವನ್ನು ತಾವು ಮುನ್ನೆಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಮಾಗಣಗೇರಿಯ ಷ.ಬ್ರ.ಡಾ. ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಎಲ್ಲರೂ ಧರ್ಮ ಮಾರ್ಗದಲ್ಲಿ ನಡೆಯುವಂತವರಾಗಬೇಕು. ಆಧ್ಯಾತ್ಮಿಕ ಒಲವು ಬೆಳೆಸಿಕೊಳ್ಳಿ, ಇಂತಹ ಪುರಾಣ ಪ್ರವಚನಗಳ ಮೂಲಕ ಮಹಾತ್ಮರ ಜೀವನವನ್ನು ತಿಳಿದುಕೊಳ್ಳುವುದರಿಂದ ಬದುಕು ಸಾರ್ಥಕವಾಗುತ್ತದೆ. ನಾನು ಎರಡು ವರ್ಷಗಳ ಹಿಂದೆ ದೇವಸ್ಥಾನದ ಉದ್ಘಾಟನೆಗೆ ಬಂದಾಗ ಹೇಳಿದ ಮಾತನ್ನು ನೀವು ಚಾಚು ತಪ್ಪದೇ ನಡೆಸಿಕೊಂಡು ಬರುತ್ತಿದ್ದೀರಿ ಜಾತ್ರೆ ಪುರಾಣ ಪ್ರವಚನಗಳು ನಮ್ಮ ಮಧ್ಯ ಪ್ರೀತಿ ವಿಶ್ವಾಸ ಹಾಗೂ ಭಾತೃತ್ವವನ್ನು ಬೆಳೆಸುತ್ತವೆ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಿ ಎಂದು ಸಲಹೆ ನೀಡಿದರು.
ಪುರಾಣಿಕ ವೇದ ಮೂರ್ತಿ ಬಸಯ್ಯ ಸೋಮಶೇಖರ ಮಠ(ಯಾಳಗಿ) ಅವರು ಮೊದಲು ದಿನದ ಪುರಾಣದಲ್ಲಿ ಶರಣ ಬಸವೇಶ್ವರರ ಬಾಲ್ಯದ ಕುರಿತು ವಿವರಿಸಿದರು. ವೇ.ಮೂ.ಮಲ್ಲಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಎಪಿಎಂಸಿ ಮಾಜಿ ಅಧ್ಯಕ್ಷ ಕೆ ಕೆ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವೇದ ಮೂರ್ತಿ ಮಲ್ಲಯ್ಯಸ್ವಾಮಿ ಹಿರೇಮಠ, ಮಲ್ಲಯ್ಯ ಸ್ವಾಮಿ ಆರ್ ಮಠ, ಪರಮಣ್ಣ ಶರಣರು, ಗೌರವಾಧ್ಯಕ್ಷ ಕೆ ಸಿ ದೇಸಾಯಿ, ದತ್ತಣ್ಣ ದೇಸಾಯಿ, ಬಸನಗೌಡ ನಾಡಗೌಡ, ವಿಶ್ವನಾಥ್ ರೆಡ್ಡಿ ನಾಡಗೌಡ, ಗುರಣ್ಣ ಚಿಂಚೋಳಿ, ರಾಮನಗೌಡ ದೇಸಾಯಿ, ಉತ್ತನಗೌಡ ನಾಡಗೌಡ, ಶಾಂತಗೌಡ ಬಂಟನೂರ, ಮುದುಕಪ್ಪ ಪೂಜಾರಿ, ಸಾಹಿತಿ ಬಸವರಾಜ ಗೊರಜಿ (ಕೊಡಗಾನೂರ), ಶರಣಗೌಡ ಪಾಟೀಲ(ಕರಿಭಾವಿ) ಮತ್ತಿತರರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 