ಹನುಮಸಾಗರದ ಬನಶಂಕರಿ ದೇವಸ್ಥಾನಕ್ಕೆ ಆಗಮಿಸಿದ ದೇವಾಂಗ ಜ್ಯೋತಿ

ಹನುಮಸಾಗರದ ಬನಶಂಕರಿ ದೇವಸ್ಥಾನಕ್ಕೆ ಆಗಮಿಸಿದ ದೇವಾಂಗ ಜ್ಯೋತಿ Devanga Jyoti arrives at Banashankari Temple in Hanumasagar

ಹನುಮಸಾಗರ 28: ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಆಗಮಿಸಿದ ದೇವಾಂಗ ಜ್ಯೋತಿಯನ್ನು ಅರ್ಚಕರಾದ ರಾಘವೇಂದ್ರ ಸಿನ್ನೂರ ಹಾಗೂ ಮಂಜುನಾಥ ಸಿನ್ನೂರ ಪೂಜೆ ಸಲ್ಲಿಸಿ ದೇವಾಂಗ ಜಾಗೃತಿ ಜ್ಯೋತಿಯನ್ನು ಬಿಳ್ಕೊಡಲಾಯಿತುಅಖಿಲ ಭಾರತ ದೇವಾಂಗ (ನೇಕಾರ) ಜಾಗೃತ ಸಮಾವೇಶದ ಅಂಗವಾಗಿ ಹಂಪಿ ಹೇಮ ಕೂಟ ಫೀಠಾಧಿಪತಿಯಾದ ದಯಾನಂದಪುರಿ ಮಹಾಸ್ವಾಮೀಜಿಯವರ 36ನೇ ವರ್ಷದ ಪಟ್ಟಾಭಿಷೇಕ ಹಾಗೂ ತುಲಾಭಾರ ಸಮಾರಂಭದ ಅಂಗವಾಗಿ ದೇವಾಂಗ ಸಮಾಜ ಬಾಂದವರ ಜಾಗೃತಿಗಾಗಿ ಬದಾಮಿ ಬನಶಂಕರಿ ದೇವಸ್ಥಾನದಲ್ಲಿ ಪೂಜೆಗೊಂಡು ರಾಜ್ಯಾಧ್ಯಂತ ಜಾಗೃತಿಯನ್ನು ಮೂಡಿಸಿ ಮೇ 09 ಮತ್ತು 10ನೇ, ಶನಿವಾರ ಮತ್ತು ಭಾನುವಾರ ಬಾದಾಮಿ ಬನಶಂಕರಿಯಲ್ಲಿ ನಡೆಯುವ 36ನೇ ವರ್ಷದ ಪಟ್ಟಾಭಿಷೇಕ ಹಾಗೂ ತುಲಾಭಾರ ಸಮಾರಂಭಕ್ಕೆ ಆಗಮಿಸುವಂತೆ ದೇವಾಂಗ ಜ್ಯೋತಿಯ ಮೂಲಕ ಆಹ್ವಾನವನ್ನು ನೀಡುವ ಉದ್ದೇಶದಿಂದ ದೇವಾಂಗ ಜ್ಯೋತಿಯನ್ನು ಕಳುಹಿಸಲಾಗಿದೆ ಎಂದು ಜಾಗೃತಿ ಸಮಿತಿ ತಿಳಿಸಿತು . ಈ ಸಂದರ್ಭದಲ್ಲಿ ದೇವಾಂಗ ಸಮಾಜದ ಅಧ್ಯಕ್ಷರಾದ ಶಂಕ್ರ​‍್ಪ ಸಿನ್ನೂರ, ಉಪಾಧ್ಯಕ್ಷರಾದ ಸೂರೇಶ ಸಿನ್ನೂರ, ಮಹೇಶ ಹುಲಮನಿ, ಶಂಕ್ರ​‍್ಪ ಸಪ್ಪಂಡಿ, ಬಸವಂತಪ್ಪ ಸಿನ್ನೂರ, , ರವಿ ಸಿನ್ನೂರ , ರಾಜೇಂದ್ರ ಹುಲಮನಿ , ವಿಶಾಲ ಸಿನ್ನೂರ, ಶಂಕರ ಹುಲಮನಿ, ಅನಿಲ ಸಿನ್ನೂರ, ಮಹಿಳೆಯರಾದ ವತ್ಸಲ, ಭೂವನೇಶ್ವರಿ, ಭಾರತಿ ಕಾಳಗಿ, ಸರಸ್ವತಿ , ಸೇರಿದಂತೆ ದೇವಾಂಗ ಸಮಾಜದ ಹಿರಿಯರು, ಮಹಿಳೆಯರು ಹಾಗೂ ಯುವಕರು ಇದ್ದರು. ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಆಗಮಿಸಿದ ದೇವಾಂಗ ಜ್ಯೋತಿಯನ್ನು ಅರ್ಚಕರಾದ ರಾಘವೇಂದ್ರ ಸಿನ್ನೂರ ಹಾಗೂ ಮಂಜುನಾಥ ಸಿನ್ನೂರ ಪೂಜೆ ಸಲ್ಲಿಸಿ ದೇವಾಂಗ ಜಾಗೃತಿ ಜ್ಯೋತಿಯನ್ನು ಬಿಳ್ಕೊಡಲಾಯಿತು