ಬಡತನದಲ್ಲಿ ಹುಟ್ಟಿದ್ದರೂ, ಉನ್ನತ ಸಾಧನೆಯತ್ತ ಗಮನ ಹರಿಸಿ: ನಾಡಗೌಡ
Despite being born in poverty, focus on achieving high standards: Nadagowda
ಲೋಕದರ್ಶನ ವರದಿ
ಬಡತನದಲ್ಲಿ ಹುಟ್ಟಿದ್ದರೂ, ಉನ್ನತ ಸಾಧನೆಯತ್ತ ಗಮನ ಹರಿಸಿ: ನಾಡಗೌಡ
ಮಹಾಲಿಂಗಪುರ 03: ತಾವು ಬಡತನದಲ್ಲಿ ಹುಟ್ಟಿದ್ದರೂ ಪರವಾಗಿಲ್ಲ, ಉನ್ನತ ಸಾಧನೆ ಮಾಡುವತ್ತ ಗಮನ ಹರಿಸಬೇಕು, ಅದು ನನಸಾಗುವ ಮಾರ್ಗ ತೆರೆಯುತ್ತದೆ ಎಂದು ಯು.ಆರ್. ರಾವ್ ಸೆಟಲೈಟ್ ಸೆಂಟರ್ ಇಸ್ರೋ ಬೆಂಗಳೂರಿನ ರಾಮನಗೌಡ ನಾಡಗೌಡ ಹೇಳಿದರು.
ಮುಧೋಳ ತಾಲೂಕಿನ ಸಮೀಪದ ರನ್ನಬೆಳಗಲಿ ಢಪಳಾಪುರ ವಿದ್ಯಾವಿಹಾರ ಶಾಲೆಯಲ್ಲಿ ಶನಿವಾರ ನಡೆದ ಸಾಧಕರ ಸಭೆಯಲ್ಲಿ ಮಾತನಾಡಿದ ಅವರು, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯಂತೆ ಪಾಲಕರು ಮತ್ತು ಶಿಕ್ಷಕರು ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳಲ್ಲಿರುವ ಅಭಿರುಚಿಯನ್ನು ಗುರುತಿಸಿ ಅವರಿಗೆ ಉತ್ತಮ ಸಹಕಾರ ನೀಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಪ್ರಕಾಶ. ನಾಡಗೌಡ ಮತ್ತು ಡಾ. ವಿಜಯ್ ಹಂಚಿನಾಳ, ಹಾಗೂ ಅಜಿತ್ ಕನಕರೆಡ್ಡಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ವಿದ್ಯಾರ್ಥಿನಿಯರಾದ ವರ್ಷಾ ಪಾಟೀಲ್ ಹಾಗೂ ಪ್ರೇಮಾ ಪಾಟೀಲ್ ನಡೆಸಿಕ್ಕೊಟ್ಟರು. ಶಾಲೆಯ ವ್ಯವಸ್ಥಾಪ ವಿವೇಕ್ ಡಪಳಾಪುರ, ಪ್ರಾಂಶುಪಾಲ ಜಾಯ್, ಬೋಧಕ, ಬೋಧಕೇತರ, ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 