ದೇಶನೂರ ಗ್ರಾಮ ಕಳ್ಳಭಟ್ಟಿ ಸಾರಾಯಿ ಮುಕ್ತ ಕಾರ್ಯಕ್ರಮ

ದೇಶನೂರ ಗ್ರಾಮ ಕಳ್ಳಭಟ್ಟಿ ಸಾರಾಯಿ ಮುಕ್ತ ಕಾರ್ಯಕ್ರಮ Deshanura village illegal liquor free program


ನೇಸರಗಿ 08: ಸಮೀಪದ ದೇಶನೂರ ಗ್ರಾಮದಲ್ಲಿ ಕಳ್ಳಭಟ್ಟಿ ಸಾರಾಯಿ ಮುಕ್ತ ಮಾಡುವಲ್ಲಿ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದು ಬೈಲಹೊಂಗಲ ಅಬಕಾರಿ ನೀರೀಕ್ಷಕ ಅಧಿಕಾರಿ ಶ್ರೀಶೈಲ ಅಕ್ಕಿ ಹೇಳಿದರು.  

ಬುಧವಾರ ಸಮೀಪದ ದೇಶನೂರು ಗ್ರಾಮದಲ್ಲಿ ಕಳ್ಳಭಟ್ಟಿ ಮುಕ್ತ ಗ್ರಾಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾರ್ವಜನಿಕರ ಆರೋಗ್ಯ ಮತ್ತು ಉತ್ತಮ ಜೀವನದ ಹಿತದೃಷ್ಟಿಯಿಂದ ಸಾರಾಯಿ, ಕಳ್ಳಭಟ್ಟಿ ಮುಂತಾದವುಗಳನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದು, ಕಳ್ಳಭಟ್ಟಿ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. 

ಜನರ ಪೌಷ್ಟಿಕತೆ ಮಟ್ಟ ಹೆಚ್ಚಿಸಲು ಮತ್ತು ಆರೋಗ್ಯ ಸುಧಾರಿಸಲು ವಿಶೇಷ ಓಷಧಿ ತಯಾರಿಸಲಾಗುತ್ತಿದೆ. ಜನರು ನೆಮ್ಮದಿಯ ಜೀವನದಿಂದ ವಿಮುಖವಾಗದಿರಲಿ ಎಂಬ ಉದ್ದೇಶದಿಂದ ಕಳ್ಳಭಟ್ಟಿ ಸಾರಾಯಿ, ನಕಲಿ ಮದ್ಯ, ಸ್ಪಿರಿಟ್, ಸೇಂದಿ ಮುಂತಾದವುಗಳನ್ನು ತಯಾರಿಸುವುದು ಮತ್ತು ಮಾರುವುದು ನಿಷೇಧಿಸಲಾಗಿದೆ ಎಂದು ಹೇಳಿದರು. 

ಪಿಡಿಓ ಅಯ್‌.ಆರ್‌.ಪೋಲಿಸನವರ, ನೇಮಣ್ಣ ಟಗರಿ, ಎಂ.ಬಿ.ಮುಲ್ಲಾ, ಸಂತೋಷ ತಲ್ಲೂರ, ರಾಘವೇಂದ್ರ ಹಳ್ಳದ, ಕುಮಾರ ಕೆಳಗಿನಮನಿ, ಶಶಿಕಲಾ ತಳವಾರ, ರಂಗೋಜಿ ಕಂಚಿಮರದ, ಸುನಿತಾ ಕಂಚಿಮರದ, ಅಡಿವೆಪ್ಪ ಕಮತಗಿ, ಸಂತೋಷ ಬೀರಣ್ಣವರ, ಇದ್ದರು.