ಗೂಗಿಕಟ್ಟೆಯಲ್ಲಿರುವ ರಂಗಮಂದಿರದ ಕಟ್ಟಡಕ್ಕೆ ಉಪಸಭಾಧ್ಯಕ್ಷ ರುದ್ರ್ಪ ಮಾನಪ್ಪ ಲಮಾಣಿ ಭೇಟಿ
Deputy Speaker Rudrapa Manappa Lamani visits the theatre building in Googikatte
ಹಾವೇರಿ 30: ನಗರದ ಜೆಪಿ ಸರ್ಕಲ್ ಹತ್ತಿರದ ಗೂಗಿಕಟ್ಟೆಯಲ್ಲಿರುವ ರಂಗಮಂದಿರದ ಕಟ್ಟಡಕ್ಕೆ ಉಪಸಭಾಧ್ಯಕ್ಷ ರುದ್ರ್ಪ ಮಾನಪ್ಪ ಲಮಾಣಿ ಭೇಟಿ ನೀಡಿ ಪರೀಶೀಲನೆ ನಡೆಸಿದರು.ಹಲವು ದಿನಗಳಿಂದ ರಂಗಮಂದಿರದ ಕಟ್ಟಡದಲ್ಲಿ ಯಾವುದೇ ಚಟುವಟಿಕೆಗಳು ನಡೆಯದೆ ಇರುವುದರಿಂದ ಈ ಕಟ್ಟಡ ಪಾಳು ಬಿದ್ದಂತಾಗಿದೆ ಕೂಡಲೇ ಈ ಕಟ್ಟಡದ ನಿರ್ವಹಣೆಯನ್ನು ಖಾಸಗಿ ಅವರಿಗೆ ನೀಡಿ ರಂಗಮಂದಿರದ ರಂಗಮಂದಿರದ ನಿರ್ವಹಣೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಕಟ್ಟಡದ ಪ್ರತಿಯೊಂದು ಮೂಲೆಯನ್ನು ಪರೀಶೀಲಿಸಿದ ಉಪಸಭಾಧ್ಯಕ್ಷ ರುದ್ರ್ಪ ಲಮಾಣಿ ಕಟ್ಟಡಕ್ಕೆ ಬೇಕಾದ ಅಗತ್ಯ ಮೂಲಭೂತ ಒದಗಿಸಲು ನನ್ನ ಅನುದಾನದಲ್ಲಿ ಹೆಚ್ಚಿನ ಅನುದಾನ ನೀಡುತ್ತೇನೆ .
ಕೂಡಲೇ ಕಟ್ಟಡದ ಕಾಮಗಾರಿಯನ್ನು ವೈಜ್ಞಾನಿಕವಾಗಿ ಮರುಪರೀಶೀಲಿಸಿ ಸಿದ್ಧಗೊಳಿಸುವಂತೆ ತಿಳಿಸಿದರು.ಯಾರೋ ಕಿಡಿಗೇಡಿಗಳಿಂದ ರಂಗಮಂದಿರದ ಕಟ್ಟಡದ ಗ್ಲಾಸ್ ಪುಡಿಪುಡಿ ಆಗಿರುವುದನ್ನು ಗಮನಿಸಿದ ಉಪಸಭಾಧ್ಯಕ್ಷರು ಕೂಡಲೇ ಇದನ್ನು ಸ್ವಚ್ಛಗೊಳಿಸಿ ಮುಂದೆ ಈ ರೀತಿ ಕಟ್ಟಡ ಹಾಳಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಗಳಿಗೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಂಎಂ ಮೈದೂರ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಹೇಶ ಕಲಾಲ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 