ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ
Deputy Chief Ministers launch cleanliness drive
ಸ್ವಚ್ಚತಾ ಓಟಕ್ಕೆ ಉಪಮುಖ್ಯಮಂತ್ರಿಗಳಿಂದ ಚಾಲನೆ
ಬೆಳಗಾವಿ, ಡಿ.17: ಮಹಾತ್ಮಾ ಗಾಂಧೀಜಿ ಅವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಗಾಂಧೀಜಿ ಅವರಂತೆ ಪ್ರತಿಯೊಬ್ಬರು “ಸ್ವಚ್ಚತಾ ಹಿ ಸೇವಾ” ಎಂಬ ಮನೋಭಾವದಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಕರೆ ನೀಡಿದರು.
ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ (ಡಿ.17) ನಗರದ ಅಶೋಕ ವೃತ್ತದಲ್ಲಿ ಆಯೋಜಿಸಲಾಗಿದ್ದ ಸ್ವಚ್ಚತಾ ಓಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಳಗಾವಿ ನಗರದ ಪರಿಸರ ಬೆಂಗಳೂರಿಗಿಂತ ಉತ್ತಮವಾಗಿದೆ. ನಮಗೆ ಸಿಕ್ಕಂತಹ ಅವಕಾಶವನ್ನು ಬಳಸಿಕೊಂಡು ನಗರವನ್ನು ಸ್ವಚ್ಛವಾಗಿಡಲು ಹಾಗೂ ಪರಿಸರವನ್ನು ಹಸಿರಾಗಿಸಲು ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.
ಬೆಳಗಾವಿ ರಾಜ್ಯದ ಎರಡನೆ ರಾಜಧಾನಿಯಾಗಿದ್ದು, ನಗರಾಭಿವೃದ್ಧಿ ಇಲಾಖೆಯಿಂದ ಸುಮಾರು 200 ಕೋಟಿಗಳಷ್ಟು ಅನುದಾನದಡಿ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ನಗರವನ್ನು ಶುದ್ಧವಾಗಿಡುವಲ್ಲಿ ಸರಕಾರದ ಜೊತೆಗೆ ಸಾರ್ವಜನಿಕರ ಸಹಭಾಗಿತ್ವವು ಪ್ರಮುಖವಾಗಿದ್ದು ಈ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಹೆಜ್ಜೆ ಹಾಕೋಣ ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ತಿಳಿಸಿದರು.
ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಇಲಾಖೆ ಸಚಿವರಾದ ಭೈರತಿ ಸುರೇಶ ಅವರು ಮಾತನಾಡಿ ನಗರ ಸ್ವಚ್ಚವಾಗಿರಬೇಕೆಂದರೆ ನಮ್ಮ ನಿಮ್ಮೆಲ್ಲರ ಕಾರ್ಯ ಬಹಳ ಮುಖ್ಯವಾದದ್ದು, ನಮ್ಮ ಮನೆ ಸ್ವಚ್ಚವಾಗಿದ್ದರೆ ರಸ್ತೆ ಸ್ವಚ್ಚವಾಗಿರುತ್ತದೆ, ರಸ್ತೆ ಸ್ವಚ್ಚವಾಗಿದ್ದರೆ ನಗರ ಸ್ವಚ್ಚವಾಗಿರುತ್ತದೆ, ನಗರ ಸ್ವಚ್ಛವಾಗಿದ್ದರೆ ರಾಜ್ಯ ಮತ್ತು ದೇಶ ಸ್ವಚ್ಛವಾಗಿರುತ್ತದೆ. ಆದ್ದರಿಂದ ನಾವೆಲ್ಲರು ಸೇರಿಕೊಂಡು ನಗರವನ್ನು ಸ್ವಚ್ಚವಾಗಿಡೋಣ ಎಂದು ಹೇಳಿದರು.ಮಹಾತ್ಮಾ ಗಾಂಧಿಜಿಯವರು ಹೇಳಿದ ಹಾಗೆ ಸ್ವಚ್ಚತೆಯೇ ದೇವರೆಂದು ನಾವೆಲ್ಲರು ನಗರವನ್ನು ಸ್ವಚ್ಚವಾಗಿಡೋಣ. ಮನೆಯನ್ನು ಸ್ವಚ್ಚವಾಗಿಡುವ ಹಾಗೆಯೇ ನಮ್ಮ ನಗರವನ್ನು ಸ್ವಚ್ಛವಾಗಿಡಬೇಕು. ಮಹಾನಗರ ಪಾಲಿಕೆಗಳ ಸ್ವಚ್ಚತೆಯಲ್ಲಿ ಬೆಳಗಾವಿ 25ನೇ ಸ್ಥಾದಲ್ಲಿದೆ ಇದನ್ನು ನಾವೆಲ್ಲರು ಸೇರಿಕೊಂಡು ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲು ತಿಳಿಸಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಸಚಿವರಾದ ರಹೀಮ್ ಖಾನ್, ಶಾಸಕ ಆಸೀಫ್ ಸೇಠ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ, ನಗರಾಭಿವೃದ್ಧಿ ಇಲಾಖೆ ರಾಜ್ಯ ಅಭಿಯಾನ ನಿರ್ದೆಶಕರಾದ ಡಾ.ಸೆಲ್ವಮಣಿ, ಬೆಳಗಾವಿ ನಗರ ಪೊಲೀಸ್ ಆಯುಕ್ತ ಬೋರಸೆ ಭೂಷಣ ಗುಲಾಬರಾವ, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ ಎಮ್ ಸೇರಿದಂತೆ ವಿವಿಧ ಗಣ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸ್ವಚ್ಚತಾ ಓಟವು ನಗರದ ಅಶೋಕ ವೃತ್ತದಿಂದ ಪ್ರಾರಂಭಗೊಂಡು ಕೊಲ್ಹಾಪುರ ವೃತ್ತದ ಮಾರ್ಗವಾಗಿ ಹೂವಿನ ಮಾರುಕಟ್ಟೆಯ ಮೂಲಕ ಬಂದು ಕನಕದಾಸ ವೃತ್ತದಲ್ಲಿ ಮುಕ್ತಾಯಗೊಂಡಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 