ಹಾವೇರಿ: ಪ್ರಕೃತಿ ವಿಕೋಪ ನಿರ್ವಹಣೆ ಪ್ರತಿ ಇಲಾಖೆ ಜವಾಬ್ದಾರಿ. ವಿಪತ್ತುಗಳು ಸಂಭವಿಸಿದಾಗ ತತಕ್ಷಣ ಸ್ಪಂದಿಸುವ ಕುರಿತಂತೆ ಇಲಾಖಾವಾರು ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆ ತಯಾರಿಸಿ ಎಂದು ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಅವರು ಹೇಳಿದರು.
ಪ್ರಕೃತಿ ವಿಕೋಪ ನಿರ್ವಹಣೆ ಕುರಿತಂತೆ ಜಿಲ್ಲೆಯ ಎ ಮತ್ತು ಬಿ ವೃಂದದ ಅಧಿಕಾರಿಗಳಿಗೆ ಜಿಲ್ಲಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ತರಬೇತಿ ಸಂಸ್ಥೆ ಇವರ ಸಹಯೋಗದಲ್ಲಿ ಆಯೋಜಿಸಲಾದ ಎರಡು ದಿನಗಳ ಕಾಯರ್ಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕೃತಿ ಅವಘಡಗಳನ್ನು ತಡೆಯುವುದು, ಸಂಭವಿಸಿದಾಗ ತುತರ್ು ಸ್ಪಂದನೆ ಹಾಗೂ ನಂತರದ ಪರಿಹಾರ ಕಾರ್ಯಗಳು ಪ್ರತಿ ಇಲಾಖೆಯ ನೌಕರ, ಅಧಿಕಾರಿಗಳ ಕರ್ತವ್ಯವಾಗಿದೆ. ಅತ್ಯಂತ ಮಹತ್ವದ ವಿಷಯವಾದ ವಿಪತ್ತು ನಿರ್ವಹಣೆ ಕುರಿತಂತೆ ಇಲಾಖೆವಾರು ಕಾರ್ಯ ಯೋಜನೆ ತಯಾರಿಸಿ ಎಲ್ಲ ಮಾಹಿತಿ ಸಂಗ್ರಹಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯನ್ನು ತಯಾರಿಸಲಾಗುವುದು. ಈ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳಿಗೆ ಈ ಕಾಯರ್ಾಗಾರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಪ್ರಕೃತಿ ವಿಕೋಪ ಕುರಿತಂತೆ ಪರಿಚಯ, ಇಲಾಖಾವಾರು ಯೋಜನೆಯ ಕಾರ್ಯತಂತ್ರ ಕುರಿತು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರದ ತರಬೇತಿ ನಿದರ್ೆಶಕ ಒ. ಚಂದ್ರಾ ನಾಯಕ ಅವರು ಮಾತನಾಡಿ, ಪ್ರಕೃತಿ ವಿಕೋಪಗಳು ಆಕಸ್ಮಿಕ ಹಾಗೂ ಅನಿರೀಕ್ಷಿತವಾಗಿ ಎರಗುತ್ತವೆ. ಇಂತಹ ಸಂದರ್ಭದಲ್ಲಿ ಸಂಭವಿಸುವ ಜೀವಹಾನಿ, ಆಸ್ತಿಪಾಸ್ತಿ ಹಾನಿ ತಡೆಯುವ ನಿಟ್ಟಿನಲ್ಲಿ ಪೂರ್ವ ಯೋಜನೆ ಅಗತ್ಯವಾಗಿದೆ. ಸ್ಥಳೀಯ ಸಂಭವನೀಯ ಅವಘಡಗಳನ್ನು ಗುರುತಿಸಿಕೊಂಡು ಅಪಾಯಕಾರಿ ಪ್ರದೇಶ, ಸನ್ನಿವೇಶ, ಅವಘಡಗಳು ಸಂಭವಿಸಿದಾಗ ತುತರ್ಾಗಿ ಸ್ಪಂದಿಸುವ ಕುರಿತಂತೆ ವ್ಯವಸ್ಥಿತವಾದ ಕಾರ್ಯಯೋಜನೆ ರೂಪಿಸಿದರೆ ಜೀವಹಾನಿಯನ್ನು ತಡೆಯಬಹುದು. ನಷ್ಟವನ್ನು ಗಣನೀಯವಾಗಿ ತಗ್ಗಿಸಬಹುದಾಗಿದೆ ಎಂದು ಹೇಳಿದರು.
ಪ್ರತಿ ಅವಘಡಗಳು ಸಂಭವಿಸಿದಾಗ ಸಾವು-ನೋವು, ಹಾನಿಗಳನ್ನು ತಡೆಯಲು ಘಟನೆ ಸಂಭವಿಸಿದ ಮೂರು ಗಂಟೆ ಅವಧಿಯನ್ನು ಗೋಲ್ಡನ್ ಅವರ್ ಎಂದು ನಾವು ಕರೆಯುತ್ತೇವೆ.
ಈ ಅವಧಿಯ ಕಾಯರ್ಾಚರಣೆ ಯಶಸ್ವಿಯಾಗಿ ಕೈಗೊಂಡರೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದರೆ ಹಾನಿಯ ಪ್ರಮಾಣವನ್ನು ತಡೆಯಬಹುದಾಗಿದೆ ಎಂದು ಹೇಳಿದರು.
ಪ್ರತಿ ಇಲಾಖೆಯ ಅಭಿವೃದ್ಧಿ ಕಾರ್ಯಯೋಜನೆಯ ಜೊತೆಗೆ ವಿಪತ್ತು ತಡೆಯ ಕಾರ್ಯಯೋಜನೆಯು ಮಹತ್ವದ್ದಾಗಿದೆ. ಎಲ್ಲ ಇಲಾಖೆಯ, ಎಲ್ಲ ಸ್ಥರದ ಅಧಿಕಾರಿ ಹಾಗೂ ಸಿಬ್ಬಂದಿಗಳು ವಿಪತ್ತು ನಿರ್ವಹಣೆಯಲ್ಲಿ ಮಹತ್ವದ ಪಾತ್ರವಿದೆ.
ತಮ್ಮ ತಮ್ಮ ವ್ಯಾಪ್ತಿಯ ವಿಪತ್ತುಗಳನ್ನು ಗುರುತಿಸಿ ತಮ್ಮ ತಮ್ಮ ಇಲಾಖೆಯ ಮೂಲಕ ಇತರ ಇಲಾಖೆಯ ಸಮನ್ವಯತೆಯೊಂದಿಗೆ ಅವಘಡಗಳಿಗೆ ಸ್ಪಂದಿಸಲು ಕಾರ್ಯಯೋಜನೆ ರೂಪಿಸಬೇಕು. ಅಧಿಕಾರಿಗಳ ಗೈರಿನಲ್ಲೂ ಕೆಲಸ ನಡೆಯಬೇಕು. ಸಾಧ್ಯವಾದಷ್ಟು ಪ್ರಾಣ ರಕ್ಷಣೆ, ಆಸ್ತಿ ಹಾನಿಗಳನ್ನು ತಡೆಯಲು ಸಾಧ್ಯಾಗುತ್ತದೆ ಎಂದು ಹೇಳಿದರು.
ವಿಪತ್ತು ಯೋಜನೆಗಳು ಸಾಧ್ಯವಾದಷ್ಟು ಕನ್ನಡ ಭಾಷೆಯಲ್ಲಿ ತಯಾರಿಸಬೇಕು. ತಮ್ಮ ತಮ್ಮ ಇಲಾಖಾ ವೆಬ್ಸೈಟ್ ಜೊತೆಗೆ ಜಿಲ್ಲಾ ವೆಬ್ಸೈಟ್ನಲ್ಲಿ ಅಳವಡಿಸಬೇಕು. ಸಾಮಾನ್ಯನೂ ಸಂಕಷ್ಟದ ಸಂದರ್ಭದಲ್ಲಿ ನೆರವನ್ನು ಕೋರಲು ಮಾಹಿತಿ ಒದಗಿಸುವಂತೆ ಇರಬೇಕು ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯರಾದ ಸಿ.ಎಸ್.ಭಂಗಿ ಅವರು ಮಾತನಾಡಿದರು. ಸಕರ್ಾರಿ ಅಭಿಯೋಜಕರಾದ ಜಿ.ಸಿ.ಗಿರಿಯಪ್ಪನವರ ಹಾಗೂ ವಾತರ್ಾಧಿಕಾರಿ ಡಾ.ಬಿ.ಆರ್.ರಂಗನಾಥ್ ಅವರು ಉಪಸ್ಥಿತರಿದ್ದರು.