ಸಮಗ್ರ ಆರೋಗ್ಯ ರಕ್ಷಣೆಯಲ್ಲಿ ದಂತಗಳ ಪಾತ್ರ ಪ್ರಮುಖವಾಗಿದೆ - ಕ್ಯಾ.ಬಿ.ಜೆ.ಹಿರೇಮಠ

ಸಮಗ್ರ ಆರೋಗ್ಯ ರಕ್ಷಣೆಯಲ್ಲಿ ದಂತಗಳ ಪಾತ್ರ ಪ್ರಮುಖವಾಗಿದೆ - ಕ್ಯಾ.ಬಿ.ಜೆ.ಹಿರೇಮಠ   Dentistry plays an important role in comprehensive healthcare - C.B.J. Hiremath

    ರಾಣೆಬೆನ್ನೂರು :13 ಆರೋಗ್ಯ ಪೂರ್ಣ ಜೀವನ ಬದುಕಿಗೆ ಸಹಜವಾಗಿ ಬಂದೆರಗುವ ದಂತಗಳ ರಕ್ಷಣೆ ಕುರಿತಂತೆ ಇಂದಿನ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ, ಕ್ಯಾಪ್ಟನ್ ಬಿ.ಜೆ.ಹಿರೇಮಠ  ಹೇಳಿದರು.  ಅವರು ಇಲ್ಲಿನ ನಗರಸಭಾ ಆವರಣದಲ್ಲಿರುವ ಸರ್ಕಾರಿ ಶಾಲೆ ನಂಬರ1.7 ಮತ್ತು 8 ಮತ್ತು  ರೋಟರಿ ಶಾಲೆಯಲ್ಲಿ, ರೋಟರಿ ಸೇವಾ  ಸಂಸ್ಥೆ, ಹಾಗೂ ದಾವಣಗೆರೆ ಎಸ್‌. ಎಸ್‌.ಡೆಂಟಲ್ ಕೇರ್ ಆಸ್ಪತ್ರೆ ಆಯೋಜಿಸಿದ್ದ, ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.  

ಆರೋಗ್ಯಕರ ಬೆಳವಣಿಗೆ ಇಂದಿನ ಅಗತ್ಯವಿದ್ದು ಮಕ್ಕಳು ನಿತ್ಯವೂ ಚಾಕ್ಲೇಟ್, ಪೆಪ್ಪರ್ ಮೆಂಟ್, ಐಸ್ ಕ್ರೀಮ್, ಮತ್ತಿತರೆ ಆಹಾರ ಪದಾರ್ಥಗಳು  ಸೇವಿಸುವುದರಿಂದ ಮತ್ತು ಅದರ ಕುರಿತು ಅರಿವು ಇಲ್ಲದ ಕಾರಣದಿಂದ ದಂತ ರೋಗಗಳು ಬರುವುದು ಸಹಜ. ಇಂತಹ ಶಿಬಿರಗಳ ಮೂಲಕ ಪರೀಕ್ಷೆ ಮಾಡಿಸುವುದರಿಂದ ರಕ್ಷಣೆ ಮಾಡಿಕೊಳ್ಳಲು ಸಹಕಾರಿ ಯಾಗುವುದು. ಇಂತಹ ಶಿಬಿರಗಳು ಆಯೋಜಿಸುವುದರ ಮೂಲಕ,ಮಕ್ಕಳ ಆರೋಗ್ಯಕ್ಕೆ ಸಂಸ್ಥೆ ತಮ್ಮದೇ ಆದ ಸೇವೆ ಸಲ್ಲಿಸುತ್ತಾ ಬಂದಿದೆ ಎಂದರು.  

ತಪಾಸಣಾ ಶಿಬಿರದಲ್ಲಿ ದಂತ ತಜ್ಞ ವೈದ್ಯರಾದ ದಾವಣಗೆರೆಯ  ಸುಶಾಂತ್, ಮಿಥುನ್, ಪ್ರಿಯಾ, ಭವಾನಿ, ಪರ್ಣಿಕಾ, ಹಾಗೂ ಡಾ.ಅಮೂಲ್ಯ ಸೇರಿದಂತೆ ಇತರರು ಪಾಲ್ಗೊಂಡು ತಮ್ಮ ಸೇವೆ ಸಲ್ಲಿಸಿದರು.   ಇದೇ ಸಂದರ್ಭದಲ್ಲಿ ಸಾವಿರಾರು ಮಕ್ಕಳಿಗೆ ದಂತಗಳಿಗೆ ಸಂಬಂಧಿಸಿದಂತೆ ಉಚಿತ  ಬ್ರಸ್, ಟೂತ್ಪೇಸ್ಟ್‌ ಓಷಧಿ ವಿತರಿಸಲಾಯಿತು.  

 ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ಡಾ ನಾರಾಯಣ ಪವಾರ, ಸದಸ್ಯ ಫಕೀರ​‍್ಪ ಹೊನ್ನಾಳಿ, ವಿ. ಪಿ. ಪೊಲೀಸಗೌಡ್ರ, ಜಿ. ಜಿ.ಹೊಟ್ಟಿಗೌಡ್ರ, ಉಮಾಪತಿ ಹೊನ್ನಾಳಿ, ವೀರೇಶ ಹನುಗೋಡಿಮಠ, ಪ್ರಸಾದ ಕಲ್ಲೋಳಿಮಠ,  ವೀರೇಶ ಮೋಟಗಿ, ಪ್ರಕಾಶ ಮಾಳಗಿ, ವಾಸುದೇವ ಗುಪ್ತಾ, ರಾಜೇಂದ್ರ ಇರಕಲ್, ಎಂ. ಆರ್‌. ಪಾಟೀಲ, ಈರಣ್ಣ ಶೆಟ್ಟರ, ಜಗದೀಶ್ ಕಲ್ಯಾಣಿ ಸೇರಿದಂತೆ ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕರು ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು. ಶಾಲೆಗಳ ಮಕ್ಕಳಿಗಾಗಿ ಆಯೋಜಿಸಿದ್ದ ಶಿಬಿರದಲ್ಲಿ ಸಾವಿರಾರು ಮಕ್ಕಳು ಪಾಲ್ಗೊಂಡು ತಪಾಸಣೆಗೊಳಪಟ್ಟರು.