ಬೆಂಕಿ ಅನಾಹುತ ನಿರ್ವಹಣೆ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ

ಬೆಂಕಿ ಅನಾಹುತ ನಿರ್ವಹಣೆ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ Demonstration to students on fire disaster management

ಲೋಕದರ್ಶನ ವರದಿ 

ಯಮಕನಮರಡಿ   19:  ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಇಂದಿರಾನಗರ ಹತ್ತರಗಿ. ವಿದ್ಯಾರ್ಥಿಗಳಿಗೆ , ಪಾಲಕರಿಗೆ ಹಾಗೂ ಅಡುಗೆ ಸಿಬ್ಬಂದಿಗೆ ಬೆಂಕಿ ಅನಾಹುತಗಳ ಅಣಕು ಪ್ರದರ್ಶನ ಹಾಗೂ ತುರ್ತು ಸೇವೆಗಳ ಕುರಿತು   ಅಗ್ನಿಶಾಮಕ ಠಾಣೆ. ಹತ್ತರಗಿ. ಸಿಬ್ಬಂದಿಗಳು  ಬೆಂಕಿಯಿಂದ ಆಗುವ ಅನಾಹುತವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತಮ್ಮ ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು. ಅಲ್ಲದೆ ನಾವು ಬೆಂಕಿಯನ್ನು ಹೇಗೆ ನಿವಾರಿಸಬೇಕು ಎಂಬುದನ್ನು ತಿಳಿಸಿದರು ಈ ಸಂದರ್ಭದಲ್ಲಿ ಯಮಕನ ಮರಡಿ ಹತ್ತರಗಿ ಅಗ್ನಿಶಾಮಕ ದಳದ ತಾನಧಿಕಾರಿ  ವೈ ಜಿ ಕೋಲ್ಕಾರ್ ಅವರು ಬೆಂಕಿ ತುರ್ತು ನಿರ್ವಹಣೆ ಕುರಿತು ಮಾತನಾಡಿದರು. ಸಿಬ್ಬಂದಿಗಳಾದ ರಾಚನ್ನವರ, ಅರ್ಜುನ್ ದೇವಣ್ಣವರ್‌. ಭೀಮಣ್ಣ ಗುರವ. ಸುರೇಶ್ ನಾವಲಗಿ. ನಿಂಗಪ್ಪ ಕಮತೆ ,ಹಾಗೂ ಹತ್ತರಿಗಿ ಸಿ ಆರ್ ಪಿ ಎಸ್‌. ಬಿ .ಭೀಮ ಗೋಳ ಪತ್ರಕರ್ತರಾದ ಗೋಪಾಲ್ ಚಪನಿ ಶಿಕ್ಷಕಿಯರಾದ ಶ್ರೀಮತಿ ಕವಿತಾ ಪಾಟೀಲ. ಕುಮಾರಿ .ಎಸ್ ವೈ. ಭರ್ಮಗೌಡ್ರು ಮುಂತಾದವರು ಉಪಸ್ಥಿತರಿದ್ದರು ಪ್ರಾರಂಭದಲ್ಲಿ ಶಿಕ್ಷಕರು ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು ಕೊನೆಗೆ ವಂದಿಸಿದರು.