ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ :ದಿ.26 ರಂದು ಅರೆಬೆತ್ತಲೆ ಪ್ರತಿಭಟನೆ ಚಳುವಳಿ : ಬಿ.ಹುಸೇನಪ್ಪ ಸ್ವಾಮಿ

ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ :ದಿ.26 ರಂದು ಅರೆಬೆತ್ತಲೆ ಪ್ರತಿಭಟನೆ ಚಳುವಳಿ : ಬಿ.ಹುಸೇನಪ್ಪ ಸ್ವಾಮಿ Demanding implementation of internal reservation: Half-naked protest movement on the 26th: B. Hussai

ಕೊಪ್ಪಳ 11:  ಶೋಷಣೆಗೆ ಒಳಗಾದ  ಮಾದಿಗ ಜನಾಂಗಕ್ಕೆ ಸಾ ಮಾಜಿಕ ನ್ಯಾಯ ಕೊಡುವಲ್ಲಿ ವಿಫಲವಾದ ರಾಜ್ಯದ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುವಲ್ಲಿ ಹೊಸ ಹೊಸ ನಾಟಕ ಮಾಡುತ್ತಿರುವುದನ್ನು ಖಂಡಿಸಿ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾರ್ಚ್‌ 26ರಂದು ಕೊಪ್ಪಳ ನಗರದ ಅಶೋಕ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಅರೆಬೆತ್ತಲೆ ಪ್ರತಿಭಟನೆ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಮಾದಿಗ ದಂಡೋರ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ. ಹುಸೇನಪ್ಪ ಸ್ವಾಮಿ ಮಾದಿಗ ತಿಳಿಸಿದರು. ಅವರು ಬುಧವಾರದಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಮಾದಿಗ ಸಮುದಾಯಕ್ಕೆ 15ಅ ಪೈಕಿ 7ಅ ಮೀಸಲಾತಿ ಸಿಗಬೇಕಾಗಿತ್ತು ಆದರೆ 6ಅ ನಿಗದಿಪಡಿಸಿದ್ದು ಕಾಂಗ್ರೆಸ್ ಸರ್ಕಾರ ಸಂಪುಟ ಸಭೆಯಲ್ಲಿ ಮಾದಿಗ ಸಮುದಾಯಕ್ಕೆ ಮೋಸ ಮಾಡದೆ ಯಥಾವತ್ತಾಗಿ 6ಅ  ಒಳ ಮೀಸಲಾತಿ ಜಾರಿ ಮಾಡಬೇಕು,

ಒಟ್ಟು 15ಅ ಜಾರಿಯಾಗುವಂತೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಯಥವತ್ತಾಗಿ ರಾಜ್ಯ ಸರ್ಕಾರವು ಸಂಪುಟ ಸಭೆಯಲ್ಲಿ ಷಡ್ಯಂತರ ಮಾಡದೆ ಕಾನೂನು ಉಲ್ಲಂಘನೆ ಮಾಡದೆ ಯಥವತ್ತಾಗಿ ಒಳ ಮೀಸಲಾತಿ 6ಅ ಜಾರಿಗೆ ಮಾಡಬೇಕು, ರಾಜ್ಯ ಸರ್ಕಾರ ಮತ್ತೊಂದು ರೀತಿ ಹೊಸ ನಾಟಕ ಮಾಡದೆ ಒಳ ಮೀಸಲಾತಿ ಜಾರಿ ಮಾಡಬೇಕು, ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಮಾಡುವವರೆಗೆ ಯಾವುದೇ ಸರಕಾರಿ ನೇಮಕಾತಿಯನ್ನು ಬ್ಯಾಕ್ ಲಾಗ್ ಹುದ್ದೆಗಳನ್ನು ಮತ್ತು ಮುಂಬಡ್ತಿ ಹುದ್ದೆಗಳನ್ನು ತುಂಬಬಾರದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ಚಳುವಳಿ ನಡೆಸಲಾಗುವುದು ಸಮುದಾಯ ಬಾಂಧವರು ಈ ಚಳುವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಹುಲಗಪ್ಪ ಹಿರೇಮನಿ, ಪೂಜಪ್ಪ ಚಿಕ್ಕ ಮಾದಿನಾಳ, ಶಿವಪ್ಪ ಸಿದ್ದಾಪುರ, ಪುಂಡಪ್ಪ ಹೊಸಮನಿ, ಗುಡದಪ್ಪ, ಮುಕೇಶ್ ಕಟ್ಟಿಮನಿ, ಭೀಮಣ್ಣ ಕುದುರಿಮೋತಿ, ಹನುಮಂತಪ್ಪ ಗಿಣಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.