ಪಿಂಚಣಿದಾರರಿಗೆ ಮಾರಕವಾಗಿರುವ; ಕೇಂದ್ರ ಸರ್ಕಾರದ ಫೈನಾನ್ಸ್ ಕೋಡ್ ಶೀಘ್ರ ವಾಪಸ್ಸು ಪಡೆಯಲು ಆಗ್ರಹ
Demand to withdraw central government's Finance Code soon, which is fatal for pensioners
ವಿಜಯಪುರ 23: ಪಿಂಚಣಿದಾರರಿಗೆ ಮಾರಕವಾಗಿರುವ ಕೇಂದ್ರ ಸರ್ಕಾರದ ಫೈನಾನ್ಸ್ ಕೋಡ್ 2025ನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಿಂಚಣಿದಾರರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಮಹಾದೇವ ಮಠಪತಿ ಹೇಳಿದರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಜಮಖಾನ್ ಕ್ಲಬ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಿಂಚಣಿದಾರರ ಒಕ್ಕೂಟ ಜಿಲ್ಲಾ ಸಮಿತಿ ವಿಜಯಪುರ ವತಿಯಿಂದ ಹಮ್ಮಿಕೊಂಡ ಜಿಲ್ಲಾ ಸಂಘಟನಾ ಸಭೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದಿ. 01-07-2022 ರಿಂದ 31-07-2024ರ ಅವಧಿಯಲ್ಲಿ ನಿವೃತ್ತರಾದ ಎಲ್ಲಾ ಇಲಾಖೆಗಳ 26 ಸಾವಿರಕ್ಕೂ ಅಧಿಕ ಪಿಂಚಣಿದಾರರಿಗೆ 7 ನೇ ವೇತನ ಆಯೋಗದ ಲೆಕ್ಕಾಚಾರದ ಪ್ರಕಾರ ಡಿ.ಸಿ.ಆರ್.ಜಿ ಕಮ್ಯೂಟೇಶನ್ ಮತ್ತು ಘಳಿಕೆ ರಜೆ ನಗಧೀಕರಣ ನೀಡಬೇಕೆಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಸಂಘಟನೆ ಮತ್ತು ಪುನರ್ ರಚನೆ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಮುಖ್ಯಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರಾದ ಎಚ್. ಎಸ್. ಜೈಕುಮಾರ ಮಾತನಾಡಿ, ಪಿಂಚಣಿದಾರರಿಗೆ 70 ವರ್ಷ ವಯಸ್ಸಾದ ನಂತರ ಕಮ್ಯೂಟೇಶನ್ ಕಂತುಗಳ ಕಡಿತಗೊಳೀಸುವಿಕೆಯನ್ನು ನಿಲ್ಲಿಸಬೇಕು. ಎನ್.ಪಿ.ಎಸ್. ಮತ್ತು ಯುಪಿಎಸ್ ವಾಪಸ್ಸು ಪಡೆಯಬೇಕು ಓಪಿಎಸ್ ಮುಂದುವರೆಸಬೇಕೆಂದು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಬೆಂಗಳೂರಿನ ಕ.ರಾ.ಸ. ಪಿಂಚಣಿದಾರರ ಒಕ್ಕೂಟದ ಸಹಾಯಕ ಕಾರ್ಯದರ್ಶಿ ಹಾಗೂ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷರಾದ ಡಿ.ಶಿವಕುಮಾರ ಮಾತನಾಡಿ, ಗುತ್ತಿಗೆ ಹೊರಗುತ್ತಿಗೆ ದಿನಗೂಲಿ ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರು ನೇಮಕಾತಿ ಪದ್ಧತಿಯನ್ನು ವಿರೋಧಿಸಿ ಹಾಗೂ ಖಾಯಂ ಉದ್ಯೋಗಕ್ಕೆ ಸೇರಿ್ಡಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆಡಳಿತ ಸುಧಾರಣಾ ಆಯೋಗ 2 ರ ನೌಕರರ ವಿರೋಧಿ ಶಿಫಾರಸ್ಸುಗಳನ್ನು ಹಿಂಪಡೆಯಲು ಒತ್ತಾಯಿಸಿದರು. ರಾಜ್ಯ ಸರ್ಕಾರಗಳಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2 ಲಕ್ಷ 80 ಸಾವಿರ ಹುದ್ದೆಗಳ ಭರ್ತಿಗಾಗಿ ಆಗ್ರಹಿಸಿದರು.
ಜಿಲ್ಲಾ ಸಂಚಾಲಕರಾದ ಸುರೇಶ ಜೀಬಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀ ಎನ್. ಎಂ. ಹರನಾಳ ಕ್ರಾಂತೀಗೀತೆಗಳನ್ನು ಹಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಣ ಇಲಾಖೆಯ ಮನಗೊಂಡ ಸರ್ ವಂದಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕಾರ್ಯಾಧ್ಯಕ್ಷರಾದ ಚಂದ್ರಶೇಖರ ಲೇಂಡಿ ವಹಿಸಿದ್ದರು.
ಕಾರ್ಯಕ್ರಮ ನೇತೃತ್ವವನ್ನು ಆರ್.ಎಸ್. ಮಿಣಸಗಿ, ಅರ್ಜುನ ಕವಟೇಗರ, ಜಿ.ಬಿ. ಅಂಗಡಿ, ಬೆಳ್ಳುಂಡಗಿ, ನಿವೃತ್ತ ಎಐಡಬ್ಲ್ಯೂ ಎಂ.ಎಂ.ಪಾಟೀಲ, ಜೆ.ವಿ.ಕಿರಸೂರ, ಗುರುಸಿದ್ದ ಮೂರ್ತಿ, ವಹಿಸಿಕೊಂಡಿದ್ದರು.
ಈ ಸಭೆಯಲ್ಲಿ ವಿಜಯಪುರ ಜಿಲ್ಲೆಯ ಎಲ್ಲಾ ಇಲಾಖೆಯ ನಿವೃತ್ತ ಅಧಿಕಾರಿಗಳು, ಸಿಬ್ಬಂಧಿಗಳು ಸೇರಿದಂತೆ ಮುಖಂಡರು ಸೇರಿದಂತೆ ನೂರಾ ಇಪ್ಪತ್ತಕ್ಕೂ ಹೆಚ್ಚಿನ ಜನರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 