ಶಿರಾಡೋಣ-ಲಿಂಗಸೂಗೂರು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಒತ್ತಾಯ

ಶಿರಾಡೋಣ-ಲಿಂಗಸೂಗೂರು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಒತ್ತಾಯ Demand to upgrade Shiradona-Lingasuguru to a national highway

ದೇವರಹಿಪ್ಪರಗಿ  08: ತಾಲೂಕಿನ ವ್ಯಾಪ್ತಿಯಲ್ಲಿ ಹಾದು ಹೋಗುವ ಶಿರಾಡೋಣ-ಲಿಂಗಸೂಗೂರು ರಾಜ್ಯ ಹೆದ್ದಾರಿ-41, ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ಹಾಗೂ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಸಂಪೂರ್ಣ ಮಾಹಿತಿ ಮತ್ತು ಜಿಲ್ಲೆಯಿಂದ ಯಾವ ಯಾವ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೊಳಿಸಲಾಗಿದೆ ಅದರ ಸಂಪೂರ್ಣ ವಿವರ ನೀಡುವ ಕುರಿತು ವಿ.ಪ ಸದಸ್ಯ ಕೇಶವ ಪ್ರಸಾದ. ಎಸ್ ಪ್ರಶ್ನಿಸಿದರು. ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ ಜಾರಕಿಹೊಳಿ ಉತ್ತರಿಸಿ.

ಈ ಕುರಿತು ಶಿರಾಡೋಣ-ಲಿಂಗಸೂಗೂರು ರ ವರೆಗೆ ಇರುವ ರಾಜ್ಯ ಹೆದ್ದಾರಿ-41 ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು 2016ರಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ತಾತ್ವಿಕ ಅನುಮೋದನೆ ನೀಡಿದ್ದು. ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲು ಇವರನ್ನು ಸಮಾಲೋಚಕರನ್ನಾಗಿ ನೇಮಿಸಲಾಗಿತ್ತು.ದಿ.28.07.2020ರ ಹೆದ್ದಾರಿ ಸಚಿವಾಲಯದ ಪತ್ರದಲ್ಲಿ ಮೇಲ್ದರ್ಜೆಗೇರಿಸುವ ಕಾರ್ಯಸಾಧ್ಯತಾ ಅಧ್ಯಯನಗಳ ಸಲಹಾ ಸೇವೆಗಳನ್ನು ಜಿಠಜಛಿಟಜಡಿ ಮಾಡುವಂತೆ ಸೂಚಿಸಿದ್ದು ಅದರನ್ವಯ ಕ್ರಮ ವಹಿಸಲಾಗಿರುತ್ತದೆ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯವು ದಿ.14.072025ರ ಪತ್ರದಲ್ಲಿ ಯಾವುದೇ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗಳನ್ನು ಪರಿಗಣಿಸುತ್ತಿಲ್ಲ ಎಂದು ತಿಳಿಸುತ್ತಾರೆ ಎಂದು ಉತ್ತರಿಸಿದ್ದಾರೆ.