ನೆರೆ ಹಾವಳಿಯಿಂದ ಹಾನಿಯಾದ ಮನೆಗಳ ಉಳಿದ ಕಂತಿನ ಹಣ ಮಂಜೂರು ಮಾಡಲು ಆಗ್ರಹ
Demand to sanction the remaining installments of flood-damaged houses
ಹಾವೇರಿ 24: ತಾಲ್ಲೂಕಿನ ಹಂದಿನೂರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಹೊಸ ಮೇಲ್ಮರಿ ಹಾಗೂ ಹಳೆ ಮೇಲ್ಮರಿ ಗ್ರಾಮಗಳಲ್ಲಿ ಈ ಹಿಂದೆ ನೆರೆ ಹಾವಳಿಯಿಂದ ಮನೆ ಕಳೆದುಕೊಂಡವರಿಗೆ ಮನೆಗಳನ್ನು ಮಂಜೂರಾತಿ ಮಾಡಲಾಗಿದ್ದು, ಅವುಗಳಿಗೆ ಉಳಿದ ಕಂತಿನ ಹಣ ಮಂಜೂರಾತಿ ಮಾಡಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಲಾಯಿತು.
ಹಾವೇರಿ ತಾಲೂಕ ಅಧ್ಯಕ್ಷರಾದ ಆನಂದ ಮುರುಡಪ್ಪನವರ ಮಾತನಾಡಿ ನೆರೆ ಸಂತ್ರಸ್ತ ಫಲಾನುಭವಿಗಳಿಗೆ ಕೂಡಲೇ ಉಳಿದ ಕಂತಿನ ಹಣ ಬಿಡುಗಡೆ ಮಾಡಬೇಕು. ನಮ್ಮ ಮನವಿಗೆ ಕೂಡಲೇ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಧರಣಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದರು. ಉತ್ತರ ಕರ್ನಾಟಕ ಕಾರ್ಯಾಧ್ಯಕ್ಷರಾದ ನಾಗರಾಜ ಮಡಿವಾಳರ ಮಾತನಾಡಿ ಸಂತ್ರಸ್ತ ಫಲಾನುಭವಿಗಳು ಬಡವರಾಗಿದ್ದು, ಮನೆಗಳು ಅರ್ಧಕ್ಕೆ ನಿಂತಿವೆ. ಜಿಲ್ಲಾಧಿಕಾರಿಗಳು ಶೀಘ್ರವಾಗಿ ನಮ್ಮ ಮನವಿಗೆ ಸ್ಪಂದಿಸಿ ಪರಿಹಾರ ನೀಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಕೂಡಲೇ ತಮ್ಮ ಮನವಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗೀಯ ಮಹಿಳಾ ಅಧ್ಯಕ್ಷರಾದ ಲಕ್ಷ್ಮಿ ಜೋಶಿ, ಬೆಳಗಾವಿ ವಿಭಾಗೀಯ ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ರೂಪ ಬಂಗಿ, ಬೆಳಗಾವಿ ಭಾಗಿಯ ಮಹಿಳಾ ಗೌರವಾಧ್ಯಕ್ಷರಾದ ಪ್ರೇಮಲತಾ ಬೆಳಗಾವಿ ವಿಭಾಗೀಯ ಗೀತಾ, ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ ಗೊಣೆಮ್ಮನವರ, ತಾಲೂಕ ಪ್ರಧಾನ ಕಾರ್ಯದರ್ಶಿಯಾದ ನಾಗರಾಜ್ ಶಿಡ್ಲಣ್ಣನವರ, ತಾಲೂಕ ಉಪಾಧ್ಯಕ್ಷರಾದ ಮರ್ತಿಮ್ಮಪ್ಪ ಮರಡೂರು, ತಾಲೂಕ ಪ್ರಚಾರ ಸಮಿತಿ ಅಧ್ಯಕ್ಷರಾದ ಸಚಿನ ಹಲಸೂರು ಹಾನಗಲ್ ತಾಲೂಕ ಅಧ್ಯಕ್ಷರಾದ ಮಾರುತಿ ತಂದಾಲೇ, ಹಾನಗಲ್ ತಾಲೂಕ ಮಹಿಳಾ ಅಧ್ಯಕ್ಷರಾದ ಜ್ಯೋತಿ, ಹಾವೇರಿ ತಾಲೂಕ ಮಹಿಳಾ ಅಧ್ಯಕ್ಷರಾದ ಲಕ್ಷ್ಮಿ ಮೇಲ್ಮುರಿ, ತಾಲೂಕ ಮಹಿಳಾ ಉಪಾಧ್ಯಕ್ಷರಾದ ಆರತಿ ಅವರಂಗ, ತಾಲೂಕ ಗೌರವಾಧ್ಯಕ್ಷರಾದ ಮುಸ್ತಾಕ್ ಮುಲ್ಲಾ, ತಾಲೂಕ ಕಾರ್ಯದರ್ಶಿಯಾದ ಫಕೀರೇಶ ಗುಡ್ಡಜ್ಜನವರ, ಮನೆ ಕಳೆದುಕೊಂಡ ಫಲಾನುಭವಿಗಳಾದ ಭದ್ರ್ಪ ಜಗದಯ್ಯ, ಶಿವರಾಜ, ಪರಮೇಶ,ನಾಗರಾಜ, ಅಮೃತ ಚೆನ್ನಪ್ಪ ಇನ್ನೂ ಅನೇಕ ಕರವೇ ಕಾರ್ಯಕರ್ತರು ಹಾಗೂ ಫಲಾನುಭವಿಗಳು ಭಾಗಿಯಾಗಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 