ತುಟ್ಟಿ ಭತ್ಯೆ ಕಡಿತಗೊಳಿಸುವ ಕಾಯ್ದೆ ರದ್ದುಗೊಳಿಸಲು ಆಗ್ರಹ
Demand to repeal the act cutting dearness allowance
ಲೋಕದರ್ಶನ ವರದಿ
ವಿಜಯಪುರ 25: 2025 ರ ಕಾಯ್ದೆಯಿಂದ ತುಟ್ಟಿ ಭತ್ಯೆ ಕಡಿತಗೊಳಿಸುವ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಆಲ್ ಇಂಡಿಯಾ ಸ್ಟೇಟ್ ಪೆನ್ಸನ್ ಫೆಡರೇಶನ್ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ನೌಕರರ ಒಕ್ಕೂಟದ ಸಂಚಾಲಕರಾದ ಸುರೇಶ ಜೀಬಿಮಾತನಾಡಿ, 2025ರ ಕಾಯ್ದೆಯ ರದ್ದತಿಯ ಜೊತೆಗೆ ಇತರೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಪ್ರೀಲ್ 21 ರಂದು ರಾಷ್ಟ್ರೀಯ ಮುಷ್ಕರವನ್ನು ಹಮ್ಮಿಕೊಳ್ಳಲು ಕರೆ ಅಖಿಲ ಭಾರತ ನೌಖರರ ಫೆಡರೇಶನ್ ವತಿಯಿಂದ ನೀಡಲಾಗಿದೆ ಎಂದು ತಿಳಿಸಿದರು. ಎಲ್ಲಾ ನಿವೃತ್ತ ನೌಕರರ ಹೆಚ್ಚಿನ ಸಂಖ್ಯೆಯಲ್ಲಿ ಮುಷ್ಕರದಲ್ಲಿ ಭಾಗವಹಿಸಿ ಯಶಸ್ವಿಗೊಳಸಬೇಕೆಂದು ಎಂದರು.
2025ರ ಕಾಯ್ದೆ ಅನುಷ್ಠಾನಯಾದರೆ ನಿವೃತ್ತ ನೌಕರರಿಗೆ ಆರ್ಥಿಕ ಅಭದ್ರತೆಯುಂಟಾಗುತ್ತದೆ. ಹಿರಿಯ ನಿವೃತ್ತ ನೌಕರರ ಬದಕು ದುಸ್ಥರವಾಗುತ್ತದೆ. 2025 ತುಟ್ಟಿಭತ್ಯೆ ಕಡಿತಗೊಳಿಸುವ ಕಾಯ್ದೆಯನ್ನು ಶೀಘ್ರವೇ ರದ್ದುಗೊಳಿಸಿ ನಿವೃತ್ತ ನೌಕರರಿಗೆ ನ್ಯಾಯ ಒದಗಿಸಬೇಕು. ಆಯಾ ಕಾಲ ಕಾಲಕ್ಕೆ ತುಟ್ಟಿ ಭತ್ಯೆಯನ್ನು ಸರ್ಕಾರಿ ನೌಕರರಿಗೆ ಹೆಚ್ಚಿಸಿದ ಹಾಗೆ ನಿವೃತ್ತ ನೌಕರರು ಹೆಚ್ಚಳಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಇದು ತನ್ನ ಎಲ್ಲಾ ನಾಗರಿಕರಿಗೆ ನ್ಯಾಯ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲು ಶ್ರಮಿಸುವ ಸರ್ಕಾರದ ಘೋಷಿತ ಉದ್ದೇಶಗಳಿಗೆ ವಿರುದ್ಧವಾಗಿದೆ. ಇದು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಂಗ ತೀರ್ುಗಳಿಗೂ ವಿರುದ್ಧವಾಗಿದೆ ಎಂದರು. ಕಲ್ಯಾಣ ರಾಷ್ಟ್ರ ಪರಿಕಲ್ಪನೆಗೂ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದೆ.
ಇದನ್ನು ಯಾವುದೇ ಪೂರ್ವ ಸೂಚನೆ ನೀಡದೆ ಚರ್ಚೆ ಇರದೆ ಲೋಕ ಸಭೆಯಲ್ಲಿ ಚರ್ಚೆ ಇಲ್ಲದೇ ಹಣಕಾಸು ಮಸೂದೆಯ ಭಾಗವಾಗಿ ಪರಿಚಯಿಸಲಾಯಿತು. ಮತ್ತು ಮಾರ್ಚ್ 25, 2025 ರ ದಿನದಂದು ಲೋಕಸಭೆಯು ಅಂಗೀಕರಿಸಿತು. ಈ ಕಾಯ್ದೆಯನ್ನು ಅಕ್ಷರಶಃ ಜಾರಿಗೆ ತಂದರೆ, ಪಿಂಚಣಿದಾರರ ನಿವೃತ್ತಿ ದಿನಾಂಕವು ಪಿಂಚಣಿ ಅರ್ಹತೆಗೆ ಸಂಬಂಧಿಸಿದಂತೆ ವ್ಯತ್ಯಾಸಗಳು ಮತ್ತು ವರ್ಗೀಕರಣಕ್ಕೆ ಆಧಾರವಾಗಿರುತ್ತದೆ, ಇದರಿಂದಾಗಿ ಕೇಂದ್ರ ವೇತನ ಆಯೋಗದ ಕಾರ್ಯಾಚರಣೆಯ ಅವಧಿಗೆ ಮೊದಲು (ಆ ವಿಷಯಕ್ಕೆ, ಯಾವುದೇ ವೇತನ ಆಯೋಗ) ಅಸ್ತಿತ್ವದಲ್ಲಿರುವ ಪಿಂಚಣಿದಾರರು ವೇತನ ಆಯೋಗದ ಶಿಫಾರಸುಗಳ ಪ್ರಯೋಜನಗಳನ್ನು ಕಳೆದುಕೊಳ್ಳುತ್ತಾರೆ. ಈ ಕಠಿಣ ಸಮಯದಲ್ಲಿ ಪಿಂಚಣಿ ವರ್ಧನೆಗೆ ಅರ್ಹರಾಗದೆ ಅಸ್ತಿತ್ವದಲ್ಲಿರುವ ಪಿಂಚಣಿದಾರರು ಭಾರೀ ನಷ್ಟಕ್ಕೆ ಒಳಗಾಗುತ್ತಾರೆ ಕೂಡಲೇ ಇದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಲೇಂಡಿ, ಗೀರೀಶ ಕಿರಸೂರ, ಆರ್.ಎಸ್. ಮಿಣಸಗಿ, ಬೆಳ್ಳುಂಡಗಿ, ವಿ.ಎಚ್.ಜೋಶಿ, ಚೆನ್ನಾರೆಡ್ಡಿ, ಹೊನ್ನಕೇರೆಪ್ಪ, ಬಿ.ಎಂ.ಬಿರಾದಾರ, ಎಸ್.ಎನ್.ಕೆರೂರ, ಅವಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 