ಇಂಡಿ ತಾಲೂಕಿನ ಗ್ರಾಮಗಳ ಕಾಲುವೆಗೆ ನೀರು ಹರಿಸಲು ಆಗ್ರಹ
Demand to release water to canals in villages of Indi taluk
ವಿಜಯಪುರ 02 : ಚಡಚಣ ಹಿಇಂಡಿ ತಾಲೂಕಿನ ಮಣಂಕಲಗಿ, ಏಳಗಿ, ಕೆರೂರ, ತದ್ದೆವಾಡಿ, ಹಲಸಂಗಿ, ಉಮ್ರಾಣಿ, ಲೋಣಿ ಬಿ.ಕೆ., ಸೇರಿದಂತೆ ಈ ಹಳ್ಳಿಗಳಲ್ಲಿ ಹಾದು ಹೋಗುವ ಇಂಡಿ ಉಪ ಕಾಲುವೆಯ 35,36 ನಂಬರ್ ಗೆ ಇಲ್ಲಿಯವರೆಗೆ ನೀರು ಬರುತ್ತಿಲ್ಲ, ಇದರಿಂದ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಕೂಡಲೇ ಈ ಕಾಲುವೆ ಮೂಲಕ ನೀರು ಹರೆಸಿ ಕೊನೆಯ ಭಾಗದ ರೈತರಿಗೆ ನೀರು ಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಕಳೆದ ವರ್ಷ 46 ಡಿಗ್ರಿ ಸೆಲ್ಸಿಯಸ್ ಬಿಸಿಲು ಆಗಿದ್ದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ, ಈ ವರ್ಷ ಪ್ರೆಬ್ರುವರಿಯಲ್ಲಯೇ ಅತೀ ಹೆಚ್ಚು ಬಿಸಿಲು ಕಾಣುವಂತಾಗಿದೆ, ಈ ಭಾಗದ ಜನ ಜಾನುವಾರುಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರು ಬೇಕಾದರೆ ಈ ಕಾಲುವೆ ಮೂಲಕ ನೀರು ಹರೆಸಬೇಕು, ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಗೂ ಬೇಜವ್ದಾರಿಯಿಂದ ನೀರು ಬಂದಿಲ್ಲ, ಈ ಕುರಿತು ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ.
ಕೂಡಲೇ ತಾವೂ ವಿಶೇಷ ಗಮನ ಹರೆಸಿ ಈ ಭಾಗದ ರೈತರಿಗೆ, ಜಾನುವಾರುಗಳಿಗೆ ನೀರು ದೊರಕಿಸಿಕೊಡಬೇಕು ಎಂದು ಈ ಮೂಲಕ ತಮ್ಮಲ್ಲಿ ಸಮಸ್ತ ರೈತ ಬಾಂಧವರಿಂಧ ಮನವಿ ಮಾಡಿಕೊಳ್ಳುತ್ತೆವೆ, ಇಲ್ಲವಾದಲ್ಲಿ ಮಾರ್ಚ 15 ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಉಗ್ರ ಮಾಡಲಾಗುವುದು ಎಂದು ಈ ಮೂಲಕ ತಿಳಿಸುತ್ತೆವೆ ಎಂದರು.
ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ, ಮುಖಂಡರಾದ ಮಹಾದೇವ ಬನಸೋಡೆ, ಸಂಗಪ್ಪ ಟಕ್ಕೆ, ದಯಾನಂದ ಕೋಳಿ, ಸಂದೀಪ ಬೆಳ್ಳಿ, ಮಾಳಪ್ಪ ಬುಗದಡ್ಡಿ, ವಿಠ್ಠಲಗೌಡ ಪಾಟೀಲ್, ಪಂಚಯ್ಯ ಮಠ, ರಾಯಗೊಂಡ್ ರಾಘಟೆ, ಸಿದ್ದರಾಯ ಮೇತ್ರಿ, ಶಂಕರ ವಡ್ರೆ, ದಸಗೀರ ವಾಲಿಕಾರ, ರಾಮಗೊಂಡ ಮಾದಭಾವಿ, ಧರೆಪ್ಪ ಉಪ್ಪಾರ, ಸಿದ್ದರಾಮ ಕಟ್ಟಿಮನಿ, ಮಲ್ಲು ಮೇತ್ರಿ , ಸೋಮು ಮಾಧಭಾವಿ, ಸಂತೋಷ ನಿವರಗಿ, ರಾಮಚಂದ್ರ ಕೋಳಿ, ಭೀಮಾಶಂಕರ ಹೂಗಾರ , ದರ್ಶನ್ ಹೊಸಮನಿ, ಸೂರ್ಯಕಾಂತ ಆಳೂರ್, ಸಂಜೀವ್ ಶಿರಹಟ್ಟಿ, ಈರಣ್ಣ ಮೇತ್ರಿ, ಆನಂದ ಮಧಭಾವಿ, ಸೇರಿದಂತೆ ಮಣಂಕಲಗಿ, ಮರಗುರ, ಹಲಸಂಗಿ, ಧೂಳಖೇಡ, ಏಳಗಿ ಪಿ. ಎಚ್, ಗ್ರಾಮದ ರೈತರು ಇದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 