ಹಿರೇ ಕಾಸನ ಕಂಡಿ ಸರ್ಕಾರಿ ಶಾಲೆ ರಕ್ಷಿಸಲು ಆಗ್ರಹ

ಹಿರೇ ಕಾಸನ ಕಂಡಿ ಸರ್ಕಾರಿ ಶಾಲೆ ರಕ್ಷಿಸಲು ಆಗ್ರಹ  Demand to protect Hire Kasana Kandi government school

ಕೊಪ್ಪಳ 20:   ಹಿರೇ ಕಾಸನ ಕಂಡಿ ಸರ್ಕಾರಿ ಶಾಲೆ ರಕ್ಷಿಸಲು ಆಗ್ರಹ ಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ ಽ ಕೆಪಿಎಸ್ ಯೋಜನೆಗೆ ವಿದ್ಯಾರ್ಥಿಗಳು, ಪೋಷಕರ ವಿರೋಧ.ತಾಲೂಕಿನ ಹಿರೇ ಕಾಸನಕಂಡಿ ಸರ್ಕಾರಿ ಶಾಲೆ ರಕ್ಷಿಸಲು ಆಗ್ರಹಿಸಿ ಹಾಗೂ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ವಿದ್ಯಾರ್ಥಿಗಳು ಪೋಷಕರು ಪ್ರತಿಭಟನೆ ನಡೆಸಿದರು. ಗ್ರಾಮದ ದುರ್ಗಮ್ಮನ ಗುಡಿ ಹತ್ತಿರ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು.ಈ ವೇಳೆ ಮಾತನಾಡಿದ ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ತುಳಜರಾಮ್ ಎನ್‌. ಕೆ ಮಾತನಾಡಿ ಹಿರೇಕಾಸನಕಂಡಿ ಯಲ್ಲಿ ಬಡವರಿಗೆ ಇರುವುದು ಒಂದೇ ಸರ್ಕಾರಿ ಶಾಲೆ. ಈ ಶಾಲೆಯನ್ನು ಮುಚ್ಚಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ 5 ವರ್ಷದ ಮಕ್ಕಳು 12 ಕಿಲೋ ಮೀಟರ್ ದೂರ ಹೇಗೆ ಹೋಗಬೇಕು? ಬಡವರ ಮಕ್ಕಳು 150ಕ್ಕೂ ಹೆಚ್ಚು ಅಧಿಕ ಸಂಖ್ಯೆಯಲ್ಲಿ ದಾಖಲಾತಿ ಇರುವ ನಮ್ಮೂರಿನ ಸರ್ಕಾರಿ ಶಾಲೆ ಮುಚ್ಚಬಾರದು ಎಂಬುದು ಪೋಷಕರು ಆಗ್ರಹವಾಗಿದೆ ಎಂದರು.ದೇಶದ ಮಹಾನ್ ಮಾನವತಾವಾದಿ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಅವರು ಇಡೀ ಜೀವನವನ್ನು ಶಿಕ್ಷಣಕ್ಕಾಗಿ ದುಡಿದು, ಶೋಷಿತರಿಗೆ,ದಲಿತರಿಗೆ ಮತ್ತು ಹೆಣ್ಣು ಮಕ್ಕಳಿಗೆ ಅಕ್ಷರ ಕ್ರಾಂತಿಯ ಹರಿಕಾರರಾದರು. ಭಗತ್ ಸಿಂಗ್, ನೇತಾಜಿ ಅವರು ಸ್ವಾತಂತ್ರ್ಯ ನಂತರ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ ಎಂದು ಸಾರಿದರು. ಅಧಿಕಾರದ ಚುಕ್ಕಾಣಿ ಹಿಡಿದ ಎಲ್ಲಾ ಸರ್ಕಾರಗಳು ಬಡ ಮಕ್ಕಳಿಂದ ಶಿಕ್ಷಣವನ್ನು ಕಿತ್ತುಕೊಂಡು, ಸಮಾಜವನ್ನು ಇನ್ನಷ್ಟು ಕತ್ತಲೆ ಕೋಣೆಯಲ್ಲಿ ಹಾಕುತ್ತಿದ್ದಾರೆ ಎಂದು ಆರೋಪಿಸಿರದರು.ಸಾರ್ವಜನಿಕ ಶಿಕ್ಷಣ ಉಳಿಸಿ ಜನರ ಸಮಿತಿ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳನ್ನು ರಕ್ಷಿಸಿ, ಬಲಪಡಿಸಲು ಪ್ರಬಲ ಹೋರಾಟ ಕಟ್ಟಬೇಕು. ಹಾಗೂ ಶಿಕ್ಷಣವನ್ನು ಖಾಸಗೀಕರಣ ಮಾಡುತ್ತಿರುವ ಎಲ್ಲಾ ಸರ್ಕಾರಗಳ ವಿರುದ್ಧ ಜಾತಿ, ಧರ್ಮ ಬೇಧಭಾವವಿಲ್ಲದೆ ಒಂದಾಗಿ ಮತ್ತೊಂದು ನವೋದಯ ಚಳವಳಿ ಕಟ್ಟಲು ಮುಂದಾಗ ಬೇಕು ಎಂದು ಕರೆ ನೀಡಿದರು.ಪ್ರತಿಭಟನೆಯಲ್ಲಿ ಎಐಡಿಎಸ್‌ಓ ರಾಜ್ಯ ಸಮಿತಿ ಸದಸ್ಯರಾದ ಸಿಂಧು ಕೌದಿ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷರಾದ ಹನುಮಂತಪ್ಪ ಕುಟಗನಳ್ಳಿ ವಕೀಲರು, ಕಾರ್ಯದರ್ಶಿಯಾದ ವೀರಯ್ಯ ಹಿರೇಮಠ್, ಸಹ ಕಾರ್ಯದರ್ಶಿಯಾದ ಮಂಜುನಾಥ್ ಗೊಂದಿ ಹೊಸಳ್ಳಿ, ಉಪಾಧ್ಯಕ್ಷರಾದ ಫಕೀರ​‍್ಪ ಪೂಜಾರ್,ಖಆಒಅ ಅಧ್ಯಕ್ಷರಾದ ರಂಗಪ್ಪ ಪೂಜಾರ್ ಸದಸ್ಯರಾದ ವಿಶ್ವನಾಥ್ ಮರ್ಕಟ್ ಫಕೀರ​‍್ಪ ಗೌಡ್ರು, ದೇವಪ್ಪ, ಯಮನೂರ​‍್ಪ, ದೇವಿಂದ್ರ​‍್ಪ,ಗವಿಸಿದ್ದಪ್ಪ ಹಲಗಿ,ಸತ್ಯನಾರಾಯಣ, ಶರಣು ಗಡ್ಡಿ, ಶಾರದಾ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.ಸುದ್ದಿ ಇವರಿಂದ,ಗಂಗರಾಜ ಅಳ್ಳಳ್ಳಿಜಿಲ್ಲಾ ಸಂಚಾಲಕರು ಂಋಖಓ ಕೊಪ್ಪಳ