ಅಂಜುಮನ ಇಸ್ಲಾಂ ಎ ಕಮೀಟಿ ಸಂಸ್ಥೆಯ ಚುನಾವಣೆ ನಡೆಸುವಂತೆ ಆಗ್ರಹ: ಮುಸ್ಲಿಂ ಬಾಂಧವರ ಧರಣಿ ಸತ್ಯಾಗ್ರಹ
Demand to hold elections for Anjuman Islam A Committee: Muslim brothers hold sit-in and protest
ಮುದ್ದೇಬಿಹಾಳ 31: ಪಟ್ಟಣದ ಇಲ್ಲಿನ ಅಂಜುಮನ ಇಸ್ಲಾಂ ಎ ಕಮೀಟಿ ಸಂಸ್ಥೆಯ ಚುನಾವಣೆ ನಡೆಸುವಂತೆ ಆಗ್ರಹಿಸಿ ಮುಸ್ಲಿಂ ಬಾಂಧವರು ಶನಿವಾರ ತಹಶಿಲ್ದಾರ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಈ ವೇಳೆ ಧರಣಿ ನಿರತ ಸ್ಥಳಕ್ಕೆ ವಿಜಯಪುರ ಜಿಲ್ಲಾ ವಕ್ಫ್ ಬೋರ್ಡ ಇಲಾಖೆ ಅಧಿಕಾರಿ ತಬಸುಮ್ ಅವರು ಬೇಟಿ ನೀಡಿ ಧರಣಿ ನಿರತರಿಗೆ ಮಾಹಿತಿ ತಿಳಿಸುತ್ತಿದ್ದಂತೆ ಧರಣಿ ನೇತೃತ್ವ ಹೊತ್ತುಕೊಂಡ ಮುಖಂಡ ಪಿಂಟು ಸಾಲಿಮನಿ ಅವರು ಮಾತನಾಡಿ 19 ಜೂನ 2025ರಂದು ಚುನಾವಣಾ ಅಧಿಕಾರಿಯಾಗಿ ತಹಶಿಲ್ದಾರ ನೇಮಕಗೊಂಡಿದ್ದು ಆದರೇ ವಿಜಯಪುರ ಜಿಲ್ಲಾ ವಕ್ಫ್ ಬೋರ್ಡ ಇಲಾಖೆ ಅಧಿಕಾರಿ ತಬಸುಮ್ ಅವರು ತಹಶಿಲ್ದಾರವರಿಗೆ ಸಮರ್ಕ ಮಾಹಿತಿ ನೀಡದೇ ಇರುವುದರಿಂದ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಇದರಿಂದ ಇಲ್ಲಿನ ಅಂಜುಮನ್ ಇಸ್ಲಾಂ ಸಂಸ್ಥೆಯ ಆಡಳಿತ ಕುಸಿದು ಅಗಧೊಗತಿಗಿಳಿದೆ ಇದಕ್ಕೆ ಕಾಣ ತಮ್ಮ ಬೇಜವಾಬ್ದಾರಿ ಆಡಳಿತವೇ ಪ್ರಮುಖ ಕಾರಣವಾಗಿ. ಕಾರಣ ತಾವು ಈ ಹುದ್ದಯಲ್ಲಿರಲು ಯೋಗ್ಯರಲ್ಲ ಈ ಕೂಡಲೆ ತತಾವು ನಿರ್ವಹಿಸುತ್ತಿರುವ ಮುದ್ದೇಬಿಹಾಳದ ಅಂಜುಮನ್ ಕೇರಟೇಕರ್ ಹುದ್ದೇಗೆ ಈ ಕೂಡಲೇ ರಾಜಿಮಾನೆ ಸಲ್ಲಿಸಿ ಮತ್ತೋಬದ್ಬರ ಅಧಿಕಾರಿಗಳ ಅಧಿಕಾರಕ್ಕೆ ಅನುವು ಮಾಡಿಕೋಡಬೇಕೇಮದು ವಾಗ್ದಾಳಿ ನಡೆಸಿದರು.
ಈ ವೇಳೆ ವಿಜಯಪುರ ಜಿಲ್ಲಾ ವಕ್ಫ್ ಬೋರ್ಡ ಇಲಾಖೆ ಅಧಿಕಾರಿ ತಬಸುಮ್ ಅವರು ಮಾತನಾಡಿದ ಜುಲೈ 21 ರಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನಮಗೆ ಯಾವೂದೇ ಮುನ್ಸೂಚನೆ ನೀಡದೆ ತೆರಿಗೆ ಹಣ ಪಾವತಿಸಿಲ್ಲವೆಂದು ಮುದ್ದೇಬಿಹಾಳದ ಅಂಜುಮನ್ ಸಂಸ್ಥೆಯ ಪ್ರಸ್ತುತ ಖಾತೆಯನ್ನು ನಿಷ್ಕ್ರೀಯಗೊಳಿಸಿದ್ದಾರೆ, ಸಧ್ಯ ಇದು ಸಂಪೂರ್ಣ ಬಗೆಹರಿಯಬೇಕಾದರೆ ವಿಭಾಗಿಯ ನ್ಯಾಯಾಲಯದಲ್ಲಿ ದಾವೆ ಮಾಠಡಲು ಮುಂಗಡವಾಗಿ ಸುಮಾರು 1.50ರಿಂದ 2 ಲಕ್ಷದವರೆಗೆ ಹಣ ಭರಿಸಬೇಕಾಗುತ್ತದೆ, ನಮಗೆ 50 ಸಾವಿರಕ್ಕಿಂತ ಅಧಿಕ ಹಣವನ್ನು ನಾವು ನಮ್ಮ ವಿಮೋಚನಾ ಖರ್ಚು ಮಾಡಲು ಬರವುದಿಲ್ಲ.
ಕಾರಣ ಮೇಲಾಧಿಕಾರಿಗಳ ಪರವಾನಿಗೆ ಪಡೆದುಕೊಳ್ಳಲು ಅಗಷ್ಟ 21 ರಂದು ತ್ವರಿತಗತಿಯಲ್ಲಿ ಪರವಾನಿಗೆ ನೀಡಲು ರಾಜ್ಯ ವಕ್ಫ್ ಬೋರ್ಡಿಗೆ ಪತ್ರ ಬರೆಯಲಾಗಿದ್ದು. ಆದರೇ ಇಲ್ಲಿತನಕವೂ ಇದಕ್ಕೆ ಪ್ರತಿಯಾಗಿ ಯಾವೂದೇ ಉತ್ತರ ಬರದೆ ಇರುವ ಕಾರಣ ಸಧ್ಯ ಈ ಚುನಾವಣಾ ಪ್ರಕ್ರೀಯೆ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಂತೆಯೆ ಧರಣಿ ನಿತರ ಮುಖಂಡರು ಈ ಮೋದಲೆ ನಿಮಗೆ ಈ ಎರಡು ತಿಂಗಳ ಮುಂಚಿತವಾಗಿಯೇ ಈ ಚುನಾವಣೆಯ ಪ್ರಕ್ರೀಯೆ ನಡೆಸಲು ನಾವು ತಮ್ಮಲ್ಲಿ ವಿನಂತಿಸಲಾಗಿತ್ತು ಇದಕ್ಕೆ ನಮ್ಮ ಹೋರಾಟಕ್ಕೆ ಮನವಿಗೆ ಸ್ಪಂದಿಸದಂತೆ ಜಿಲ್ಲೇಯ ಯಾರಾದರೂ ಪ್ರಮುಖ ರಾಜಕೀಯದವರ ಹಾಗೂ ಮುಖಂಡರ ಒತ್ತಾಯ ಹೇರಿದ್ದರೇ ಎಂಬುದು ಸಂಶಯಯಕ್ಕೆ ಎಡೆಮಾಡಿಕೊಟ್ಟಿದೆ ಹಾಗೇನಾದರೂ ಇದ್ದರೆ ನಮಗೆ ಅವರ ಮಾಹಿತಿ ನಮಗೆ ತಿಳಿಸಿ ಎಂದು ಪಟ್ಟು ಹಿಡಿದು ವಿಜಯಪುರ ಜಿಲ್ಲಾ ವಕ್ಫ್ ಬೋರ್ಡ ಇಲಾಖೆ ಅಧಿಕಾರಿ ತಬಸುಮ್ ಹರಿಹಾಯ್ದರಲ್ಲದೇ ನಮಗೆ ಸಂಪೂರ್ಣ ನ್ಯಾಯ ಸಿಗುವವರೆಗೆ ನಾವೂ ಧರಣಿ ಸತ್ಯಾಗ್ರಹವನ್ನು ಹಿಂಪಡೆಯುವ ಪ್ರಶ್ನೇಯೇ ಇಲ್ಲ ಇದೇ ದಿ, ಸಪ್ಟೆಂಬರ್ 1 ರಂದು ವಿವಿಧ ಸರಕಾರಿ ಕಾರ್ಯಕ್ರಮದಲ್ಲಿ ಬಾಗವಹಿಸಲು ಆಗಮಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ, ಸೇರಿದಂತೆ ಇತರೇ ಎರಲ್ಲ ಸಚೀರಿಗೆ ಕಪ್ಪು ಬಟ್ಟೆ ಧರಸಿ ಪ್ರತಿಭಟನೆ ನಡಸಲಾಗುವುದು ಎಂದು ಎಚ್ಚೆರಿಕೆ ನೀಡಿದರು.
ಈ ವೇಳೆ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಅಂಜುಮನ್ ಇಸ್ಲಾಂ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಜಬ್ಬರ ಗೋಲಂದಾಜ, ಮಾಜಿ ಸದಸ್ಯರಾದ ಮೈಬೂಬ ಅತ್ತಾರ, ಸುಲೇಮಾನ ಮಮದಾಪೂರ, ರಫೀಕ ಮಕಾಂದಾರ, ಇಶಾಕ್ಷಾ ಮಕಾಂದಾರ, ಶಿರಾಜ ಮೋಮೀನ, ಉಮರ ಮಮದಾಪೂರ, ಶಬ್ಬೀರ ಸಂಕನಾಳ, ತೌಶೀಫ್ ನಾಯ್ಕೋಡಿ, ಮಲೀಕ ನದಾಫ್, ಹುಸೇನ ಮುಲ್ಲಾ, ಬಾಬು ಬಿಜಾಪೂರ, ಬಬ್ಲೂ ಹುಣಸಗಿ, ಯಾಶಿನ ಅತ್ತಾರ ಸೇರಿದಂತೆ ಹಲವರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 