ಸಿ ಎಸ್ ನಾಡಗೌಡ(ಅಪ್ಪಾಜಿ)ರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಸಿ ಎಸ್ ನಾಡಗೌಡ(ಅಪ್ಪಾಜಿ)ರಿಗೆ ಸಚಿವ ಸ್ಥಾನ ನೀಡಲು ಆಗ್ರಹ Demand to give ministerial position to C.S. Nadagowda (Appaji)

            ಮುದ್ದೇಬಿಹಾಳ 17: ಸಧ್ಯ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೆಸ್ ರಾಜ್ಯದಲ್ಲಿ ಪಂಚಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಉತ್ತಮ ಜನಪರ ಆಡಳಿತ ನಡೆಸುತ್ತಿದೆ. ಈ ಸಂದರ್ಭದಲ್ಲಿ 2ನೇ ಅವಧಿಯ ಸಂಪುಟ ವಿಸ್ತರಣೆ ಮಾಡುವ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಭಾಗದ ಸರಳ ಸಜ್ಜನಕೆ ವ್ಯಕ್ತಿತ್ವದ ಸಂಭಾವಿತ ರಾಜಕಾರಿಣಿ ಎಂದೇ ಹೆಸರಾಗಿರುವ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಈ ಬಾರಿ ಕ್ಯಾಬಿನೇಟ್ ದರ್ಜೇಯ ಸಚಿವ ಸ್ಥಾನ ನೀಡಿ ಗೌರವಿಸಬೇಕು ಎಂದು ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಮುಖ್ಯಮಂತ್ರಿ ಸಿದ್ರಾಯನವರ ಆಪ್ತರು ಹಾಗೂ ಪಿಎಲ್‌ಡಿ ಬ್ಯಾಂಕಿನ ಬಿ ಕೆ ಬಿರಾದಾರ ಆಗ್ರಹಿಸಿದ್ದಾರೆ. 

            ಪಟ್ಟಣದ ಪಿಎಲ್‌ಡಿ ಬ್ಯಾಂಕಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಡಗೌಡರು ಸುದೀರ್ಘ 45 ವರ್ಷಗಳ ರಾಜಕೀಯ ಅನುಭವ ಹಾಗೂ ಹಿರಿತನದ ಆಧಾರದ ಮೇಲೆ ಸೂಕ್ತವಾದ ಸ್ಥಾನ ಮಾಡಿ ಗೌರವಿಸಬೇಕೆಂದು ಕೇಳಿಕೋಳ್ಳುತ್ತೇನೆ. ಚುನಾವಣಾ ಪ್ರಚಾರದಲ್ಲಿ ನಮ್ಮ ಮತಕ್ಷೇತ್ರದ ಜನರಿಗೆ ಕಾಂಗ್ರೆಸ್‌ನ ವರಿಷ್ಠರು ಹಾಗೂ ಮುಖ್ಯಮಂತ್ರಿ ಸಿದ್ರಾಮಯ್ಯನವರು ಮಾತು ಕೊಟ್ಟಿದ್ದರು. ಪ್ರಾರಂಭದಲ್ಲೂ ಅವಕಾಶ ಕೊಡಲಿಲ್ಲ. ಸದ್ಯ ಈ 2ನೇ ಅವಧಿಯ ಸಂಪುಟ ವಿಸ್ತರಣೆಯಲ್ಲಿ ಅವಕಾಶ ನೀಡಬೇಕೆಂದು ನಮ್ಮ ಮತಕ್ಷೇತ್ರದ ಜನರ ಒತ್ತಾಯದ ಕೂಗು ಕೇಳಿಬರುತ್ತಿದೆ. ಇಲ್ಲದಿದ್ದರೇ ಪಕ್ಷದ ಮೇಲೆ ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ವಿಶ್ವಾಸ ಕಳೆದುಕೊಳ್ಳುತ್ತಾರೆ. ಆಗ ಪಕ್ಷವೂ ಮುಜುಗರಕ್ಕೆ ಒಳಪಡಬೇಕಾಗುತ್ತದೆ. 

             ನಾಡಗೌಡರು ಒಬ್ಬ ನಿಷ್ಠಾವಂತ ಹಾಗೂ ಜಾತ್ಯಾತೀತ ಸಭ್ಯಸ್ಥ ಹಿರಿಯ ರಾಜಕಾರಿಣಿಯಾಗಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷವೂ ಹಲವು ಮಹತ್ವದ ಹುದ್ದೆಗಳನ್ನು ನೀಡಿತ್ತು. ಅವುಗಳೆಲ್ಲವನ್ನು ಅತ್ಯಂತ ಪ್ರಾಮಾಣಿಕವಾಗಿ ಪಕ್ಷ ನಿಷ್ಠುರರಾಗಿ ಒಂದೂ ಕಪ್ಪು ಚುಕ್ಕೆ ಇಲ್ಲದೇ ಉತ್ತಮ ಜವಾಬ್ದಾರಿಯುತ ಆಡಳಿತ ನೀಡುವ ಜನ ಮೆಚ್ಚುಗೆ ಗಳಿಸಿದ್ದಾರೆ. ಅವರ ಅನುಭವಕ್ಕೆ ಹಿರಿತನಕ್ಕೆ ಸರಕಾರ ಬಂದಾಗಲೆಲ್ಲ ಅವರನ್ನು ಮಂತ್ರಿಯನ್ನಾಗಿ ಮಾಡಬೇಕಿತ್ತು ಆದರೇ ಆವರು ಯಾವತ್ತಿಗೂ ಆಸೆ ಪಟ್ಟವರಲ್ಲ, ಹಾಗಂತ ಅವರನ್ನು ಹಿಂದೆ ಸರಿಸುವುದು ಕೂಡ ಉತ್ತಮ ಬೆಳವಣಿಗೆಯಲ್ಲ ಕಾರಣ ಕಾಂಗ್ರೆಸ್ ಹೈಮಾಂಡನವರು ಈ ಬಾರಿ ನಾಡಗೌಡರಿಗೆ ಮಂತ್ರಿಯನ್ನಾಗಿ ಮಾಡಬೇಕು ಇದಕ್ಕೆ ಇಡಿ ಮತಕಾರರು ಚಿರಋಣಿಯಾಗಿರುತ್ತಾರೆ ಎಂದು ತಿಳಿಸಿದರು.