ಮರಾಠ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡಲು ಒತ್ತಾಯ
Demand to give ministerial berths to MLAs from Maratha community
ಲೋಕದರ್ಶನ ವರದಿ
ಮಹಾಲಿಂಗಪುರ 22 : ಡಿ.ಕೆ.ಶಿವಕುಮಾರ ನೇತೃತ್ವದ ರಾಜ್ಯ ಸರ್ಕಾರದ ಎರಡನೇ ಹಂತದ ಸಚಿವ ಸಂಪುಟದಲ್ಲಿ ಮರಾಠ ಸಮಾಜದ ಶಾಸಕರಾದ ಸಂತೋಷ ಲಾಡ್, ಶ್ರೀನಿವಾಸ ಮಾನೆ ಇಬ್ಬರಲ್ಲಿ ಒಬ್ಬರಿಗೆ ಕ್ಯಾಬಿನೇಟ್ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ರಬಕವಿ-ಬನಹಟ್ಟಿ ತಾಲ್ಲೂಕಿನ ಮರಾಠ ಸಮಾಜದ ಹಿರಿಯರು ಕೆಪಿಸಿಸಿ ಮತ್ತು ಎಐಸಿಸಿ ಅಧ್ಯಕ್ಷರಿಗೆ, ಸಿಎಂ ಡಿಕೆಶಿ ಅವರಿಗೆ ಒತ್ತಾಯಿಸಿದರು.
ಪಟ್ಟಣದ ವಡಗೇರಿ ಪ್ಲಾಟ್‌ನ ಛತ್ರಪತಿ ಶಿವಾಜಿ ಭಗವನದಲ್ಲಿ ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಮರಾಠ ಸಮಾಜದ ರಬಕವಿ-ಬನಹಟ್ಟಿ ತಾಲೂಕಾ ಅಧ್ಯಕ್ಷ ಪಂಡಿತ ಬೋಸಲೆ ಮಾತನಾಡಿ ಮರಾಠ ಸಮಾಜದ ಅಭಿವೃದ್ದಿಗೆ ಹಾಗೂ ಸಾಮಾಜಿಕ ನ್ಯಾಯದ ಅಡಿಯಲ್ಲಿ ನಮ್ಮ ಸಮಾಜದ ಶಾಸಕರಾದ ಸಂತೋಷ ಲಾಡ್ ಮತ್ತು ಶ್ರೀನಿವಾಸ ಮಾನೆ ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂದು ತೇರದಾಳ ಮತಕ್ಷೇತ್ರದ ಹಾಗೂ ರಬಕವಿ-ಬನಹಟ್ಟಿ ಮರಾಠ ಸಮಾಜದ ವತಿಯಿಂದ ರಾಜ್ಯ ಮತ್ತು ರಾಷ್ಟ್ರದ ಕಾಂಗ್ರೆಸ್ ಮುಖಂಡರಿಗೆ, ಸಿಎಂ ಡಿಕೆಶಿ ಅವರಿಗೆ ಈ ಮೂಲಕ ಒತ್ತಾಯಿಸಿದರು.
ಸಮಾಜದ ಮುಖಂಡರಾದ ಮಹೇಶ ಜಾಧವ, ಮಾರುತಿ ಸೋರಗಾಂವಿ, ಸುರೇಶ ಜಾಧವ ಸೇರಿದಂತೆ ಹಲವರು ಮಾತನಾಡಿ ನಮ್ಮ ಮರಾಠ ಸಮಾಜವು ಸಣ್ಣ ಸಮಾಜ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಬಡವರು, ದುಡಿಯುವ ವರ್ಗದವರಿದ್ದು. ನಮ್ಮ ಸಮಾಜದ ಸಾಮಾಜಿಕ, ಶೈಕ್ಷನೀಕ, ಆರ್ಥಿಕ ಅಭಿವೃದ್ದಿಗಾಗಿ ಇಬ್ಬರು ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನವನ್ನು ನೀಡುವ ಮೂಲಕ ಹಿಂದೂ ಧರ್ಮರಕ್ಷಕ ಛತ್ರಪತಿ ಶಿವಾಜಿ ಮಹಾರಾಜರು ಜನ್ಮ ತಾಳಿದ ಮರಾಠ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ದುಂಡಪ್ಪ ಜಾಧವ, ಮಹಾದೇವ ಗಾಯಕವಾಡ, ಅಶೋಕ ಬೋಸಲೆ, ಕೇದಾರಿ ಗಾಯಕವಾಡ, ಪ್ರಕಾಶ ಶಿರಗೂರ, ದುಂಡಪ್ಪ ಗಾಯಕವಾಡ, ಮಹಾದೇವ ಸಾವಂತ, ಅರ್ಜುನ ಮೋಪಗಾರ, ಸುರೇಶ ಶಿಂಧೆ, ಜ್ಯೋತಿಬಾ ಮೋಪಗಾರ, ನಾರಾಯಣ ನಿಕ್ಕಂ, ಚಂದ್ರಶೇಖರ ಮೋರೆ, ನೇತಾಜಿ ಶಿಂಧೆ, ಪ್ರಶಾಂತ ಹವಾಲ್ದಾರ, ಜ್ಯೋತಿಬಾ ಪವಾರ, ಮುಕುಂದ ಮೆಂಗಾಣಿ, ವಿಶಾಲ ಶಿಂಧೆ, ಪ್ರಲ್ಹಾದ ನೂಲಿ, ರಾಘು ಪವಾರ, ಅರುಣ ವಾಘಮೋಡೆ, ಚನ್ನಪ್ಪ ಪವಾರ ಸೇರಿದಂತೆ ರಬಕವಿ-ಬನಹಟ್ಟಿ, ಆಸಂಗಿ, ಕೆಸರಗೊಪ್ಪ, ಮಹಾಲಿಂಗಪುರ, ಜಗದಾಳ ಸೇರಿದಂತೆ ವಿವಿಧ ಗ್ರಾಮಗಳ ಮರಾಠ ಸಮಾಜದ ಹಿರಿಯರು, ಯುವಕರು ಇದ್ದರು
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 