ಕರ್ನಾಟಕ ದಿನಗೂಲಿ ನೌಕರರ ಬೇಡಿಕೆ ಈಡೇರಿಸಲು ಒತ್ತಾಯ
Demand to fulfill the demands of Karnataka daily wage workers
ವಿಜಯಪುರ 19: ದುಬಾರಿ ದಿನಮಾನದಲ್ಲಿ ದಿನಗೂಲಿ ನೌಕರರ ಜೀವನ ಸಾಗಿಸುವುದು ಕಷ್ಟಕರವಾಗಿದೆ. ತುಟ್ಟಿ ಭತ್ಯ ಹಾಗೂ ಮನೆ ಬಾಡಿಗೆ ಭತ್ಯ ಖಾಯಂ ನೌಕರರಿಗೆ ನೀಡುತ್ತಿರುವಷ್ಟೇ ನೀಡಬೇಕು ಈಗ ಖಾಯಂ ನೌಕರರಿಗೆ ನೀಡುತ್ತಿರುವ ಭತ್ಯೆಯ 90ಅ ರಷ್ಟು ನೀಡುತ್ತಿದ್ದು ಇದು ಅನ್ಯಾಯವಾಗಿದೆ ಇದನ್ನು ತಗೆದು ಹಾಕಬೇಕು. ಹಾಗೂ ಶೇಕಡಾ 100 ಕ್ಕೆ 100 ರಷ್ಟು ಕೊಡಬೇಕೆಂದು ಒಕ್ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ ಎಸ್. ಬುರಾಣಪೂರ ಹೇಳಿದರು.
ವಿವಿಧ ಭೇಡಿಕೆ ಈಡೇರಿಕೆಗಾಗಿ ಕರ್ನಾಟಕ ರಾಜ್ಯದ ಎಲ್ಲ ದಿನಗೂಲಿ ಕ್ಷೇಮಾಭಿವೃದ್ಧಿ ವಿಧೇಯಕದಡಿ ನೇಮಣೂಕಿಯಾದ ನೌಕರರ ಒಕ್ಕೂಟದಿಂದ ಗುರುವಾರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಅಧಿನಿಯಮದಲ್ಲಿ ದಿ. 10-4-2006 ರ ಪೂರ್ವದಲ್ಲಿ 10 ವರ್ಷ ದಿನಗೂಲಿ ಸೇವೆ ಕಡಿಮೆ ಇರದಂತೆ ಕಾರ್ಯನಿರ್ವಹಿಸಿ ಸೇವೆಯನ್ನು ಪೂರ್ಣಗೊಳಿಸಿದಂಥ ನೌಕರನಾಗಿರಬೇಕು ಎಂದು ಹೇಳಲಾಗಿದೆ. ಕಾರಣ ಇವರು ಹಳೆ ನೌಕರರಾಗಿರುವುದರಿಂದ ದಿನಗೂಲಿ ಪೂರ್ತಿ ಸೇವೆ ಹಿಡಿದು ಹಳೆ ಪಿಂಚಣಿ ಸೌಲಭ್ಯ ನೀಡಬೇಕು ಅಥವಾ ನಿವೃತ್ತಿಯಾದ ಕ್ಷೇಮಾಭಿವೃದ್ಧಿ ನೌಕರರಿಗೆ 10 ರಿಂದ 15 ಸಾವಿರ ಪ್ರತಿ ತಿಂಗಳು ಪಿಂಚಣಿ ನೀಡಬೇಕು. ಡಿ.ಸಿ.ಆರ್.ಜಿ. ಸೌಲಭ್ಯವನ್ನು ಮಂಜೂರು ಮಾಡಬೇಕು. ವಾರ್ಷಿಕ ವೇತನ ಬಡ್ತಿ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಿ. ಕೊಂಡಗೂಳಿ, ಮಲ್ಲಾರಾವ ಕೆ. ಕುಲಕರ್ಣಿ ಮಾತನಾಡಿ, ದಿನಗೂಲಿ ನೌಕರರು ಸೇವೆಯಲ್ಲಿದ್ದಾಗ ಮೃತ ಹೊಂದಿದರೆ ನೌಕರರ ಅವಲಂಬಿತರಿಗೆ ಅನುಕಂಪ ಆಧಾರದ ಮೇಲೆ ನೌಕರಿಯನ್ನು ನೀಡಬೇಕು. ರಾಜ್ಯ ಸರಕಾರದಲ್ಲಿ 2.5 ಲಕ್ಷ ಹುದ್ದೆಗಳು ಖಾಲಿ ಇದ್ದು, ದಿನಗೂಲಿ ನೌಕರರನ್ನು ತುಂಬಬೇಕು. ನೌಕರರೂ ಕಾರ್ಯನಿರತರಾಗಿದ್ದಾಗ, ಮೃತರಾದರೆ ಮಣ್ಣ ಖರ್ಚಿಗಾಗಿ ರೂ. 25,000-00 ಕೊಡಬೇಕು.
ಇದೇ ಸಂದರ್ಭದಲ್ಲಿ ಲಕ್ಷ್ಮಣ ಹಂದ್ರಾಳ ಸಿ.ಆಯ್.ಟಿ.ಯು. ಪ್ರಧಾನ ಕಾರ್ಯದರ್ಶಿಗಳು, ಸುರೇಶ ಜಿಬಿ ಸಿ.ಆಯ್.ಟಿ.ಯು. ಮುಖಂಡರು, ಸುರೇಖಾ ರಜಪೂತ, ಸಿ.ಆಯ್.ಟಿ.ಯು. ಮುಖಂಡರು, ರವಿ ಶಂಕರ ದಾಮನಕರ, ಶಂಕರಗೌಡ ಬಿ. ಪಾಟೀಲ, ಕಸ್ತೂರಿಚಂದ ಮ. ಒಣಕುದರಿ, ಬಾಳಕೃಷ್ಣ ಇ. ಕಡಕೋಳ, ಶರಣಪ್ಪ ಅ. ಹರಿಜನ, ದಶರಥ ಬ. ಬಬಲೇಶ್ವರ, ಶಿವಪ್ಪ ಅಳಗುಂಡಗಿ ಮುಂತಾದವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 