ತಾಳಿಕೋಟೆ ಬರಪೀಡಿತ ಘೋಷಣೆಗೆ ಆಗ್ರಹ: ಸೋಮವಾರ ಬಂದ್ ಎಚ್ಚರಿಕೆ

ತಾಳಿಕೋಟೆ ಬರಪೀಡಿತ ಘೋಷಣೆಗೆ ಆಗ್ರಹ: ಸೋಮವಾರ ಬಂದ್ ಎಚ್ಚರಿಕೆ  Demand to declare Talikote drought-hit: Warning of a bandh on Monday


ತಾಳಿಕೋಟೆ 17: ತಾಳಿಕೋಟೆ, ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸದಿರುವುದನ್ನು ಖಂಡಿಸಿ   ಮುಖಂಡರು ಸೋಮವಾರ ತಾಳಿಕೋಟೆ ಬಂದ್ಗೆ ಕರೆ ನೀಡಿದ್ದಾರೆ. ಗುರುವಾರ ನಡೆದ ರ್ಯಾಲಿ ಹಾಗೂ ಧರಣಿ ಬಳಿಕ ಮಾತನಾಡಿದ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ, ಮಾಜಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ, ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ಮೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಸುಮಾರು 10 ಸಾವಿರ ರೈತರೊಂದಿಗೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ತಾಳಿಕೋಟೆಯಲ್ಲಿ ಸಮರ​‍್ಕ ನೀರಾವರಿ ಸೌಲಭ್ಯವಿಲ್ಲದಿದ್ದರೂ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ರೈತರಿಗೆ ಅನ್ಯಾಯವಾಗಿದೆ ಎಂದು ಅವರು ಆರೋಪಿಸಿದರು. ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಮೂರು ತಾಲೂಕುಗಳನ್ನು ಸೋಮವಾರದೊಳಗೆ ಬರಪೀಡಿತ ಪಟ್ಟಿಗೆ ಸೇರಿಸದಿದ್ದರೆ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ತಿಳಿಸಿದರು. ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಕೂಡ ತಕ್ಷಣ ಮೂರು ತಾಲೂಕುಗಳನ್ನು ಪಟ್ಟಿಗೆ ಸೇರಿಸಿ ರೈತರಿಗೆ ನೆರವು ನೀಡುವಂತೆ ಆಗ್ರಹಿಸಿದರು.