ಹೊಲಗಳಿಗೆ ಹೋಗಲು ಅಂಡರ ಪಾಸ ದಾರಿ ಮಾಡುವಂತೆ ಆಗ್ರಹ

ಹೊಲಗಳಿಗೆ ಹೋಗಲು ಅಂಡರ ಪಾಸ ದಾರಿ ಮಾಡುವಂತೆ ಆಗ್ರಹ Demand to build a Underpass to access the fields

ಲೋಕದರ್ಶನ ವರದಿ 

ಸೋಲಾಪುರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸುತ್ತಿರುವ ಸೇತುವೆ ಕೆಳಗೆ  

ವಿಜಯಪುರ 28: ನಗರದ ಹೊರವಲಯದ ಬೆಂಗಳೂರ ಬೈಪಾಸಿನಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿರುವುದರಿಂದ ಅಲ್ಲೊಂದು ಓವರ ಬ್ರೀಡ್ಜ ಮಾಡಬೇಕೆಂದು ಹಲವಾರು ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಸಂಸದರಾದ ರಮೇಶ ಜಿಗಜಿಣಗಿ ಅವರಿಗೆ ಮನವಿ ಸಲ್ಲಿಸಲಾಗಿತ್ತು ಅದರ ಪ್ರತಿಫಲವಾಗಿ ಇಂದು ಓವರ್ ಬ್ರಿಡ್ಜ್‌ ಮಾಡಲಾಗುತ್ತಿದೆ. 

ಈ ಓವರ್ ಬ್ರಿಡ್ಜ್‌ ಕೆಳಗೆ ಅಂಡರ ಪಾಸ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ನಗರದ ಸಂಸದರಾದ ರಮೇಶ ಜಿಗಜಿಣಗಿ ಅವರಿಗೆ ಬೇಡಿ ಆಗಿ ಮನವಿ ಸಲ್ಲಿಸಿದರು. 

ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಮಾತನಾಡುತ್ತಾ ಸಮಗಮೇಶ್ವರ ಆಸ್ಪರ್ತೆ ಹತ್ತಿರ ಅಂಡರ ಪಾಸ ಮಾಡಬೇಕು ಇದರಿಂದ ಉತ್ನಾಳ ಗ್ರಾಮಕ್ಕೆ ನೇರವಾಗಿ ಹೋಗಲು ಅನುಕೂಲ ಆಗಲಿದೆ, ಜೊತೆಗೆ ವಾರ್ಡ ನಂಬರ 21, ಇಬ್ರಾಹಿಂಪುರ, ಗಣೇಶ ನಗರ, ತ್ರೀಮೂರ್ತಿ ನಗರ, ಕಾಸಗೇರಿ, ಸಾಯಿ ಪಾರ್ಕ, ಮುರಾಣಕೇರಿ, ಮನಗೂಳಿ ಅಗಸಿ, ಸೇರಿದಂತೆ ಸಾವಿರಾರು ಎಕರೆ ರೈತರ ತಮ್ಮ ಜಮೀನುಗಳಿಗೆ ಹೋಗಲು ಎತ್ತಿನ ಗಾಡಿ ಹಾಗೂ ಟ್ರಾಕ್ಟರ್ ಕೋಂಡೊಯ್ಯಲು ಅನುಕೂಲವಾಗುತ್ತದೆ. 

ಒಂದು ವೇಳೆ ಸಂಗಮೇಶ ಆಸ್ಪತ್ರೆ ನೇರದಲ್ಲಿ ಅಂಡರ್ ಪಾಸ ಮಾಡದಿದ್ದಲ್ಲಿ ಎತ್ತಿನ ಗಾಡಿ ಹಾಗೂ ಟ್ರಾಕ್ಟರ್ ಗಳನ್ನು ಹಿಟ್ನಳ್ಳಿ ಟೋಲ ಸಮೀಪ ಹೋಗಿ ಮರಳಿ ಇತ್ತ ಕಡೆ ಬರಬೇಕಾಗುತ್ತದೆ, ಇದರಿಂದ ಟ್ರಾಪೀಕ ಸಮಸ್ಯೆ ಆಗುವುದರ ಜೊತೆಗೆ ಅಪಘಾತ ಕೂಡಾ ಸಂಭವವಿದೆ. ಆದ್ದರಿಂದ ಮಾನ್ಯ ಸಂಸದರು ಈ ಬಗ್ಗೆ ವಿಶೇಷ ಗಮನ ಹರೆಸಿ ರಾಷ್ಟರೀಯ ಹೆದ್ದಾರಿಯ ಮುಖ್ಯ ಅಧಿಕಾರಿಗಳ ಗಮನಕ್ಕೆ ತಂದು ಅಂಡರ ಪಾಸ ಕಾಮಗಾರಿ ಮಾಡಿಕೊಡಬೇಕಾಗಿ ಮನವಿ ಪೂರ್ವಕ ವಿನಂತಿ ಮಾಡಿಕೊಂಡರು. 

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ  ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ, ಜಿಲ್ಲಾ ಸಂಚಾಲಕರಾದ ಸಂಗಪ್ಪ ಟಕ್ಕೆ, ಮುಖಂಡರಾದ ಶಿವನಗೌಡ ನಾಡಗೌಡ, ಯಮನೂರಿ ಸಿಂದಗಿ ಸೇರಿದಂತೆ ಇತರರು ಇದ್ದರು,