ಸಂಗಮ ವೃತ್ತದಲ್ಲಿ ಅಂಬೇಡ್ಕರ ಮೂರ್ತಿ ನಿರ್ಮಿಸಲು ಆಗ್ರಹ
Demand to build Ambedkar statue at Sangama Circle
ರಾಣಿಬೆನ್ನೂರ 25: ಸ್ಥಳೀಯ ಸಂಗಮ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಮೂರ್ತಿ ನಿರ್ಮಿಸಿ, ಆ ವೃತ್ತಕ್ಕೆ ಅಂಬೇಡ್ಕರವರ ಹೆಸರನ್ನು ಅಧಿಕೃತವಾಗಿ ನಾಮಫಲಕ ಅಳವಡಿಸಬೇಕು ಎಂದು ಆಗ್ರಹಿಸಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ತಾಲೂಕು ಘಟಕದ ಸದಸ್ಯರುಗಳು ಶಾಸಕ ಪ್ರಕಾಶ ಕೋಳಿವಾಡರಿಗೆ ಹಾಗೂ ನಗರಸಭಾ ಅಧ್ಯಕ್ಷೆ ಚಂಪಿಕಾ ಬಿಸಲಳ್ಳಿ ಮತ್ತು ಪೌರಾಯುಕ್ತ ಎಫ್ ಐ ಇಂಗಳಗಿಯವರಿಗೆ ಮನವಿ ಸಲ್ಲಿಸಿದರು.
Hide quoted text ನಗರದ ಸಂಗಮ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪುತ್ತಳಿ ನಿರ್ಮಿಸಿ ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯ ಭೀಮಾ ಆರ್ಮಿ ಕರ್ನಾಟಕ ಏಕತಾ ಮಿಷನ್ ತಾಲೂಕ ಸಮಿತಿಯ ವತಿಯಿಂದ ನಗರಸಭೆಗೆ ಅನೇಕ ಬಾರಿ ಮನವಿ ಅರ್ಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಸದಸ್ಯರುಗಳು ದೂರಿದರು.
ಈ ಹಿಂದೆ ದಲಿತ ಸಂಘರ್ಷ ಸಮಿತಿ ಮತ್ತು ದಲಿತ ಒಕ್ಕೂಟ ಸಮಿತಿಯವರು ಅನೇಕ ಬಾರಿ ನಗರಸಭೆಗೆ ಅರ್ಜಿ ಸಲ್ಲಿಸಿದರೂ ಏನು ಕ್ರಮ ಕೈಗೊಂಡಿಲ್ಲ. ಕಳೆದ ಎರಡು ವರ್ಷಗಳಿಂದ ಮೂರ್ತಿ ಪ್ರತಿಷ್ಠಾಪನೆ, ವೃತ್ತ ನಾಮಕರಣಕ್ಕಾಗಿ ಧರಣಿ, ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲದಿರುವುದು ನೋವಿನ ಸಂಗತಿಯಾಗಿದೆ.
ಈ ಕುರಿತು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡದಿರುವುದು ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನವಾಗಿದೆ ಎಂದವರು ದೂರಿದರು. ಇನ್ನು ಮುಂದಾದರು ನಗರಸಭೆಯವರು ತುರ್ತು ಕ್ರಮ ಕೈಗೊಂಡು ಈ ಬೇಡಿಕೆಯನ್ನು ಈಡೇರಿಸಬೇಕೆಂದು ಸದಸ್ಯರುಗಳು ಆಗ್ರಹಿಸಿದರು ಸಮಿತಿಯ ಅಧ್ಯಕ್ಷ ನಿಖಿತ್ ಮೆಣಸಿನಹಾಳ, ನವೀನ ಎಂ.ಎಂ., ಪ್ರವೀಣ ಮುದೇನೂರ, ಮಾಲತೇಶ ಗುಜ್ಜರ, ಭಗವಾನ ಮುದೇನೂರ, ಮಂಜಪ್ಪ ಗುಡ್ಡಣ್ಣನವರ, ಶಿವರಾಜ ಪಿ., ಹಾಲೇಶ ಹಲವಾಗಲು, ಅನಿಲ ಪೂಜಾರ, ಗದಿಗೆಪ್ಪ, ಪುಟ್ಟಪ್ಪ ಜಲ್ಲಾವರ, ಚೂಡಾಮಣಿ ಮತ್ತಿತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 