ಆನ್ಲೈನ್ ಓಷಧಿ ಮಾರಾಟ ಬಂದ್ ಮಾಡಲು ಸಾಲಕ್ಕಿ ಆಗ್ರಹ
Demand to ban online medicine sales
ದೇವರಹಿಪ್ಪರಗಿ 20: ಡೆಲಿವರಿ ಆ್ಯಪ್ಗಳ ಮೂಲಕ ಆನ್ಲೈನ್ನಲ್ಲಿ ಓಷಧಿಗಳ ಮಾರಾಟ ಹೆಚ್ಚುತ್ತಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಮೆಡಿಕಲ್ ಶಾಪ್ಗಳ ಮಾಲೀಕರು ಬೃಹತ್ ಬಂದ್ಗೆ ಕರೆ ನೀಡಿದ್ದಾರೆ. ಅದರಂತೆ ಪಟ್ಟಣದ ಸುಮಾರು 33ಕ್ಕೂ ಹೆಚ್ಚು ಮೆಡಿಕಲ್ ಶಾಪ್ ಸಂಪೂರ್ಣವಾಗಿ ಬಂದ್ ಮಾಡಿ ಬೆಂಬಲ ಸೂಚಿಸಿ, ಆನ್ಲೈನ್ ಓಷಧಿ ಮಾರಾಟ ಬಂದ್ ಮಾಡಲು ತಾಲೂಕು ಓಷದ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಕಾಶಿನಾಥ ಸಾಲಕ್ಕಿ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಬುಧವಾರದಂದು ಕರ್ನಾಟಕ ಕೆಮಿಸ್ಟ್ರಿ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡ ಬಂದ್ ಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಆನ್ ಲೈನ್ ಕಂಪನಿಗಳ ಅನಿಯಂತ್ರಿತ ವ್ಯವಹಾರದಿಂದ ಸ್ಥಳೀಯ ಮೆಡಿಕಲ್ ಶಾಪಗಳು ಸಂಕಷ್ಟದಲ್ಲಿವೆ, ಆನ್ ಲೈನ್ ಓಷಧಿ ಮಾರಾಟದಿಂದ ಸಣ್ಣ ಮತ್ತು ಮಧ್ಯಮ ಮಟ್ಟದ ಮೆಡಿಕಲ್ ಶಾಪುಗಳಿಗೆ ಬಾರಿ ಆರ್ಥಿಕ ಹೊಡೆತ ಬೀಳುತ್ತಿದೆ. ಎಲ್ಲ ಅಂಗಡಿಗಳ ಮೂಲಕವೇ ಓಷಧಿ ಮಾರಾಟ ನಡೆಯಬೇಕು, ಈ ಕುರಿತು ಸರ್ಕಾರ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ನಿಯಮಗಳನ್ನು ಜಾರಿಗೆ ತಂದು, ನಮ್ಮ ನ್ಯಾಯಯುತ ಬೇಡಿಕೆಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಲವಾರು ಮುಖಂಡರು ಮಾತನಾಡಿ, ವ್ಯಾಪಾರಸ್ಥರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಆಗ್ರಹಿಸಿದರು.ಇದೇ ಸಂದರ್ಭದಲ್ಲಿ ಪಟ್ಟಣದ ಓಷದ ವ್ಯಾಪಾರಸ್ಥರುಗಳ ಕಾರ್ಯದರ್ಶಿಗಳು ನಿಂಗೂ ಹಡಗಲಿ, ಶಿವಾನಂದ ಕೋರಿ, ಸದಾನಂದ ಮಣ್ಣೂರ, ರಾಜು ವಾಲಿಕಾರ, ಜಗದೀಶ ಮಾಣ್ಣೂರ, ಬಸವರಾಜ ಚೌಕಿಮಠ, ಮಲ್ಲನಗೌಡ ಬಿರಾದಾರ, ಮುತ್ತು ಕಮತಗಿ, ಮಂಜುನಾಥ ಬಿಂಗೊಳ್ಳಿ ,ಡಾ. ಮೈನುದ್ದಿನ್ ಮುಲ್ಲಾ, ಜುಬೇರ ಮನಿಯಾರ, ರಾಕೇಶ ಅಗಸರ, ಮಹಾಂತೇಶ ಯಾಳಗಿ, ಬಿಲಾಲ್ ಪಾನ್ಪರೋಶ, ಬಸವರಾಜ ಬಿಸನಾಳ, ಯಶವಂತ ಚವ್ಹಾಣ, ಬಸವರಾಜ ದುತ್ತರಗಾಮಿ,ಅಪ್ಪು (ಚಿನ್ಮಯಿ) ಕೋರಿ,ಡಾ. ಅಮರ ಸಾಲಕ್ಕಿ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 