ಬ್ಯಾಡಗಿ 12 : ಕಳೆದೆರಡು ವರ್ಷಗಳಿಂದ ಯಾವುದೇ ಅನುದಾನವಿಲ್ಲದಿದ್ದರೂ ಕೂಡಾ ಉತ್ತಮವಾಗಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿರುವ ಹಾವೇರಿ ವಿಶ್ವವಿದ್ಯಾಲಯವನ್ನು ಯಥಾ ಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿ ಗುರುವಾರ ತಾಲೂಕಿನ ವಿವಿಧ ಸಂಘಟನೆಗಳು ತಹಶೀಲ್ದಾರ ಫಿರೋಜಾಷಾ ಸೋಮನಕಟ್ಟಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಮಾಜಿ ಸೈನಿಕ ಮಲ್ಲೇಶಣ್ಣ ಚಿಕ್ಕಣ್ಣನವರ ಮಾತನಾಡಿ ಹಾವೇರಿ ವಿಶ್ವವಿದ್ಯಾಲಯಕ್ಕೆಸರ್ಕಾರ ಯಾವುದೇ ಸೌಕರ್ಯ ಒದಗಿಸದಿದ್ದರೂ ಹಲವು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಉನ್ನತ ಶಿಕ್ಷಣ ಪಡೆಯಲು ವಿವಿಧ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಹಾವೇರಿ ವಿ.ವಿ ಮುನ್ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ, ವಿ.ವಿ ಮಚ್ಚುವುದಾಗಿ ಸರ್ಕಾರ ಘೋಷಿಸಿರುವುದನ್ನು ತೀವ್ರ ಖಂಡಿಸಿದ ಅವರು ಸರ್ಕಾರ ಜನತೆಯಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳು ವಿಶ್ವವಿದ್ಯಾಲಯ ಮುಚ್ಚುವುದಿಲ್ಲವೆಂದು ಹೇಳಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ಕಿಡಿ ಕಾರಿದರು.ಬಸವರಾಜ ಭೀಮ ನಾಯ್ಕರ ಮಾತನಾಡಿ ಹಾವೇರಿ ಜಿಲ್ಲೆಯ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಿರುವ ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚದಂತೆ ಹಾಗೂ ವೀಲೀನಗೊಳಿಸದಂತೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಬಾರದು.ಹಾವೇರಿ ವಿ.ವಿ ಮುಚ್ಚಿದರೆ, ಬೀದಿಗಿಳಿದು ಹೋರಾಟ ಮಾಡಲು ತಾಲೂಕಿನ ವಿವಿಧ ಸಂಘಟನೆಗಳು ಸಜ್ಜಾಗಿದ್ದು, ಜನರ ವಿದ್ಯಾರ್ಥಿಗಳ ತಾಳ್ಮೆಯನ್ನು ಸರ್ಕಾರ ಪರೀಕ್ಷೆ ಮಾಡುವ ಬದಲು ವಿಶ್ವ ವಿದ್ಯಾಲಯ ಹಾವೇರಿಯಲ್ಲೇ ಉಳಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಭ್ರಷ್ಟಾಚಾರ ವಿರೋಧಿ ಜನಾಂದೋಲನ ನ್ಯಾಸ ಸಂಘಟನೆ, ತಾಲೂಕಾ ನಿವೃತ್ತ ನೌಕರರ ಸಂಘ ಹಾಗೂ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಡಾ. ಎಸ್.ಎಸ್. ಬಿದರಿ, ಆರಿ್ಬ.ಹೊಸಳ್ಳಿ, ಪ್ರಭು ಪಾಟೀಲ, ಎಂ.ಬಿ.ಕೊತವಾಲ, ಕೆ.ಎನ್.ಹುಚ್ಚೇರ, ಮಹದೇವಪ್ಪ ಸಂಕಣ್ಣನವರ,ಬಿ.ಎಂ.ಕೋರಿಶೆಟ್ಟರ, ಎಂ.ಎಸ್.ಕಲ್ಯಾಣಿ, ಸಿ.ಎಸ್.ಪಾಟೀಲ, ಶ್ರೀಕಾಂತ್ ಹುಣಸಿಮರದ, ಆರ್.ಎಸ್.ತೊಪ್ಪಲ, ಎಸ್.ಕೆ.ಗುರ್ಪನವರ,ಪಿ.ವಿ.ಗಂಗವ್ವನವರ, ರಮೇಶ ಮೋರೆ ಸೇರಿದಂತೆ ಇತರರಿದ್ದರು.