ರಾಜ್ಯದ ಎಫ್‌.ಪಿ.ಓ ನಿರ್ದೇಶಕರ ರೇಷನ ಕಾರ್ಡ ರದ್ದು ಮಾಡದಂತೆ ಆಗ್ರಹ

ರಾಜ್ಯದ ಎಫ್‌.ಪಿ.ಓ ನಿರ್ದೇಶಕರ ರೇಷನ ಕಾರ್ಡ ರದ್ದು ಮಾಡದಂತೆ ಆಗ್ರಹ Demand not to cancel the ration cards of the state's FPO directors

ವಿಜಯಪುರ 17; ರೈತ ಉತ್ಪಾದಕ ಕಂಪನಿ ಎಂಬುದು ರೈತರಿಂದ ರೈತರಿಗಾಗಿ ಎಂಭ ಧೈಯವಾಕ್ಯದ ಮೇಲೆ ಸ್ಥಾಪಿತವಾಗಿರುವ ಸಂಸ್ಥೆಯಾಗಿರುತ್ತವೆ, ಸಣ್ಣ ಮತ್ತು ಅತೀ ಸಣ್ಣ ರೈತರ ಏಕತೆಗಾಗಿ ಹಾಗೂ ಸಮೂಹ ಬಲವನ್ನು ಬಳಸಿಕೊಂಡು ರೈತರ ಪ್ರತನಿತ್ಯ ಸವಾಲಗಳನ್ನು ಪರಿಹರಿಸಿಕೊಂಡು ರೈತರನ್ನು ನಷ್ಟದಿಂದ ಪಾರುಮಾಡುವ ಉದ್ದೇಶದಿಂದ ಈ ಎಫ್‌.ಪಿ.ಓಗಳನ್ನು ರಚನೆ ಮಾಡಲಾಗಿದೆ, ಇಲ್ಲಿ ಯಾವುದೇ ವ್ಯಕ್ತಿಯ ಲಾಭಕ್ಕಾಗಿ ಕಾರ್ಯ ನಿರ್ವಹಿಸುವುದಿಲ್ಲ ಬದಲಾಗಿ ರೈತ ಕುಲದ ಉಳಿವಿಗಾಗಿ ಶ್ರಮಿಸಲಾಗುವುದು ಎಂದು ಫಲಂದು ಎಫ್‌.ಪಿ.ಓ ಅಧ್ಯಕ್ಷರಾದ ಸಿದ್ದು ಪೂಜಾರಿ ಅವರು ಮಾತನಾಡಿದರು.  

ಎಫ್‌.ಪಿ.ಓಗಳ ನಿರ್ದೇಶಕರ ರೇಷನ ಕಾರ್ಡಗಳನ್ನು ರದ್ದು ಮಾಡುತ್ತಿರುವುದನ್ನು ವಿರೋಧಿಸಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುವ ಮೂಲಕ ಮನವಿ ಸಲ್ಲಿಸುತ್ತಾ ಅವರು ಮಾತನಾಡಿದರು. 

ಕರ್ನಾಟಕ ರಾಜ್ಯ ರೈತ ಉತ್ಪಾದಕ ಸಂಸ್ಥೆಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾದ ಮದನ ಲೋಣಿ ಮಾತನಾಡುತ್ತಾ ಎಫ್‌.ಪಿ.ಓ ಗಳು 2013 ರ ಕಂಪನಿ ಕಾಯ್ದೆ ಪ್ರಕಾರ ಕಾರ್ಯ ನಿರ್ವಹಿಸಲು ನಿರ್ದೇಶಕರನ್ನು ಕಡ್ಡಾಯವಾಗಿ ನೇಮಿಸಲಾಗಿದೆ, ಅವರಿಗೆ ಪ್ಯಾನ ಕಾರ್ಡ, ಡಿಜಿಟಲ್ ಸಹಿ ಹಾಗೂ ಗುರುತು ಸಂಖ್ಯೆ ಹೊಂದುವುದು ಅವಶ್ಯಕ ಎಂದು ಎಂ.ಸಿ.ಎ ಪೋರ್ಟಲ್‌ನಲ್ಲಿ ಅಧಿಕೃತ ನೋಂದಾಯಿತರಾಗುತ್ತಾರೆ, ಆದರೆ ಇತ್ತಿಚಿಗೆ ಈ ಕಾನೂನನ್ನು ಮುಂದಿಟ್ಟುಕೊಂಡು ಕಂಪನಿಯ ನಿರ್ದೇಶಕರಿಗೆ ಬಿ.ಪಿ.ಎಲ್ ಕಾರ್ಡಿನ ಸೌಲಭ್ಯಕ್ಕೆ ಅನರ್ಹರು ಎಂದು ಗುರುತಿಸಿ ಇವರ ಉಚಿತ ಸಬ್ಸಿಡಿ ಧಾನ್ಯ ಸೌಲಭ್ಯವನ್ನು ಹಿಂಪಡೆಯಲಾಗಿದೆ. 

ಇಲ್ಲಿ ನಿರ್ದೇಶಕರು ಉದ್ಯಮಿಗಳಲ್ಲ, ಇವರಿಗೆ  ಯಾವುದೇ ಸಂಬಳ ನೀಡಲಾಗುವುದಿಲ್ಲ ಇದೊಂದು ಗೌರವದ ಹುದ್ದೆ ಹಾಗೂ ಇದು ಸ್ವಯಂ ಸೇವಾ ಮನೋಭಾವದಿಂದ ಮಾಡಲಾಗುವುದು ಇಲ್ಲಿ ಇಡೀ ನಾಡಿನ ರೈತರನ್ನ ಉಳಿಸಿ ಬೆಳೆಸುವುದೇ ಮೂಲಧೈಯವಾಗಿದೆ, ಒಂದು ವೇಳೆ ನಿರ್ದೇಶಕರ ರೇಷನ್‌ಕಾರ್ಡ ರದ್ದು ಮಾಡಿದರೆ ಅವರು ಬದುಕು ನಡೆಸುವುದು ದುಸ್ತರವಾಗಲಿದೆ, ಕೂಡಲೆ ಇದನ್ನ ಕೈಬಿಡಬೇಕು ಎಲ್ಲಾ ನಿರ್ದೇಶಕರಿಗೂ ಮೊದಲಿನ ಹಾಗೆ ರೇಷನ್ ಸಣಲಭ್ಯ ಸಿಗಬೇಕು ಎಂದರು . 

ಈ ವೇಳೆ ಹೋರ್ತಿ ರೇವಣಸಿದ್ಧೇಶ್ವರ ಎಫ್‌.ಪಿ.ಓ.ಅಧ್ಯಕ್ಷರಾದ ಶಿವಾನಂದ ಬಿರಾದಾರ, ಭೂರಕ್ಷಕ ಎಫ್‌.ಪಿ.ಓ.ದ ನಿರ್ದೇಶಕರಾದ ಮಲ್ಲಿಕಾರ್ಜುನ ಮಾಡಿಗ್ಯಾಳ, ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಎಫ್‌.ಪಿ.ಓ.ದ ಸಲಹೆಗಾರರಾದ ವಿವೇಕ ಹಳ್ಳಿ , ಶರಣು ಹಿಪ್ಪರಗಿ, ಸಂಗಮೇಶ ಸಗರ ಸೇರಿದಂತೆ ಇತರರು ಇದ್ದರು .