ದಿನಗೂಲಿ ಆಧಾರದ ಮೇಲೆ ಕೆಲಸ ನೀಡಲು ಆಗ್ರಹ
Demand for work on daily wage basis
ಲೋಕದರ್ಶನ ವರದಿ
ವಿಜಯಪುರ 27: ಅಖಿಲ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘಟನೆಯ ತಿಕೋಟಾ ತಾಲೂಕಾ ಘಟಕದ ಪದಾಧಿಕಾರಿಗಳೆಲ್ಲರೂ ಸೇರಿ 25ರ ಸೋಮವಾರ ದಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ತಿಕೋಟಾ ತಾಲೂಕಿನ ತಹಶೀಲ್ದಾರ್ ಇವರ ಮುಖಾಂತರ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಇವರಿಗೆ ಮನವಿ ಸಲ್ಲಿಸಿ ಮಾತನಾಡುತ್ತಾ ಸರಿ ಸುಮಾರು 8-10 ವರ್ಷಗಳಿಂದ ತಿಕೋಟಾ ತಾಲೂಕಿನಲ್ಲಿ 56 ಜನ ಬೆಳೆ ಸಮೀಕ್ಷೆದಾರರಾಗಿ ಕೆಲಸ ಮಾಡುತ್ತಾ ಬಂದಿರುವ ನಮಗೆ ಹಂಗಾಮುವಾರು ನಮ್ಮನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳದೇನೆ ಕನಿಷ್ಠ ವೇತನದ ನೀತಿ ಅಡಿಯಲ್ಲಿ ದಿನಗೂಲಿ ಕಾರ್ಮಿಕರನ್ನಾಗಿ ನೇಮಿಸಿಕೊಂಡು ವರ್ಷದ 12 ತಿಂಗಳುಗಳ ಕಾಲ ಕೆಲಸವನ್ನು ನೀಡುವಂತೆ ಆಗ್ರಹಿಸಲಾಯಿತು.
ಈ ವೇಳೆ ತಾಲೂಕಾ ಅಧ್ಯಕ್ಷರಾದ ಭಾಗೇಶ ಮಲಕಪ್ಪ ರಾಮತೀರ್ಥ ಅವರು ಮನವಿ ಪತ್ರವನ್ನು ಸಲ್ಲಿಸಿದರು. ಈ ಒಂದು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಭೀಮಪ್ಪ ಲಕ್ಷ್ಮಣ ತಳವಾರ ಅವರು ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ಮಹಾ ಸ್ವಾಮಿ ಕರ್ನಾಟಕ ರಾಜ್ಯದಲ್ಲಿ ಬೆಳೆ ಸಮೀಕ್ಷೆದಾರರಾದ ನಾವು 23,720 ಜನ ಕೆಲಸಗಾರರು ಕಾರ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಕೆಲಸಕ್ಕೆ ಸರ್ಕಾರ ನೀಡುವ ಸಂಬಳ ಯಾವ ವಿಧದಲ್ಲೂ ಸರಿಯಾದುದಲ್ಲ, ಯಾಕೆಂದರೆ ದರ ಪರಿಷ್ಕರಣೆ ಅನ್ನೋದು ಎಲ್ಲದರಲ್ಲೂ ಮಾಡಿರುವಿರಿ , ಆದರೆ ನಮಗೇಕೆ ಮಲತಾಯಿ ಧೋರಣೆ ಮಾಡುತ್ತಿರುವಿರಿ ಎಂದು ಮಾತನಾಡಿದರು.
ಮನವಿಯನ್ನು ಸ್ವೀಕರಿಸಿದ ಕೃಷಿ ಅಧಿಕಾರಿಗಳು ಈ ಒಂದು ಪ್ರಶ್ನೆಗೆ ಹೌದು ನೀವು ಪಡುತ್ತಿರುವ ಕಷ್ಟ ಕಾರ್ಪಣಯಗಳ ಬಗ್ಗೆ ನಮಗೂ ಕೂಡಾ ಕನಿಕರವಿದೆ, ನೀವುಗಳು ರೈತರ ಮತ್ತು ಸರ್ಕಾರದ ಮಧ್ಯೆ ಕೊಂಡಿಗಳಾಗಿ ಕೆಲಸ ಮಾಡುತ್ತಿರುವಿರಿ, ನಿಮ್ಮ ಮನವಿಯನ್ನು ನಾವು ಮುಂದೆ ಕಳಿಸುತ್ತೇವೆ ಎಂದು ಧನಾತ್ಮಕವಾಗಿ ಸಹಕರಿಸಿದರು.
ಈ ಸಂದರ್ಭದಲ್ಲಿ ಅರುಣಕುಮಾರ ತಳವಾರ, ಬಂದೇ ನವಾಜ್ ಮುಲ್ಲಾ,ಚಂದನ ಕೋಳಿ, ನಾಗರಾಜ್ ಕೋರೆ,ಶಬ್ಬೀರ್ ಅತ್ತಾರ ಮತ್ತಿತರರು ಉಪಸ್ಥಿತರಿದ್ದರು.
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ? 