ಸಚಿವ ಪ್ರಿಯಾಂಕ ಖರ್ಗೆ ಕುಟುಂಬಕ್ಕೆ ರಕ್ಷಣೆ ನೀಡಲು ಆಗ್ರಹ
Demand for protection for Minister Priyanka Kharge family
ಲೋಕದರ್ಶನ ವರದಿ
ಜಮಖಂಡಿ 27: ಸಚಿವ ಪ್ರಿಯಾಂಕ ಖರ್ಗೆ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು, ಆರ್‌ಎಸ್‌ಎಸ್‌ನ ಕಾನೂನು ಬಾಹಿರ ನಡೆಯ ವಿರುದ್ಧ ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಡಿಎಸ್‌ಎಸ್ ಸಾಗರ ಬಣದ ವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ನಂತರ ಜಿಲ್ಲಾ ಸಂಚಾಲಕ ಪರುಶರಾಮ ಕಾಂಬಳೆ ಮಾತನಾಡಿ, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಸಮಾಜವನ್ನು ವ್ಯವಸ್ಥಿತವಾಗಿ ತುಳಿಯುವ ಪ್ರಯತ್ನಗಳು ನಡೆದಿವೆ. ಸಿಜೆ ಅವರ ಮೇಲೆ ವಕೀಲನೊಬ್ಬ ಶೂ ಎಸೆದಿರುವ ಘಟನೆಯಿಂದ ದಲಿತರು ಉನ್ನತ ಸ್ಥಾನದಲ್ಲಿರುವದನ್ನು ಇವರು ಸಹಿಸಿಕೊಳ್ಳುವದಿಲ್ಲ ಎಂಬುದು ಸಾಬೀತಾಗಿದೆ, ಡಾ.ಅಂಬೇಡ್ಕರ ಅವರು ಸಂವಿಧಾನವನ್ನು ಬರೆದಿಲ್ಲ ಎಂಬ ಮಾತುಗಳನ್ನಾಡುತ್ತಾರೆ. ಸಂವಿಧಾನ ಹಾಗೂ ರಾಷ್ಟ್ರ ಧ್ವಜದ ಮೇಲೆ ಗೌರವವಿಲ್ಲದ, ನೋಂದಣಿಯಾಗದ ಸಂಘಟನೆಯನ್ನು ಕಾನೂನಿನ ಅಡಿಯಲ್ಲಿ ತರಬೇಕು ಹಾಗೂ ಸಂವಿಧಾನದ ಅಣತಿಯಂತೆ ನಡೆದುಕೊಳ್ಳಲು ಸೂಚಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಸಂ.ಸಂಚಾಲಕ ಬಸವರಾಜ ಹಳ್ಳದಮನಿ, ಪ್ರಗತಿಪರ ಚಿಂತಕ ಮಹಾಲಿಂಗಪ್ಪ ಆಲಬಾಳ, ತಾಲೂಕು ಸಂಚಾಲಕ ಬಸವರಾಜ ದೊಡಮನಿ, ಸದಾಶಿವ ಐನಾಪುರ, ಪರಸು ಕಾಂಬಳೆ, ಅಮೀತ ಸೂರಗೊಂಡ, ದೀಪಕ ಕಂಕನವಾಡಿ, ಅಪ್ಪಸಿ ಕಾಂಬಳೆ, ವಿದ್ಯಾಸಾಗರ ಹೊಸಮನಿ, ಶ್ಯಾಮರಾವ ಮಾದರ, ಕೃಷ್ಣಾ ಶೆಗುಣಸಿ, ಹುಲ್ಲಪ್ಪ ಅಂಟರಠಾಣಾ, ಚಿನ್ನಪ್ಪ ಬಂಡಿವಡ್ಡರ, ರವಿ ಸುತಾರ, ಶಂಕರ ಹೊಸಮನಿ, ಅಶೋಕ ಸಿಂಗೆ, ಅಡಿವೆಪ್ಪ ಮರೆಗುದ್ದಿ, ಮುತ್ತು ಹರಿಜನ, ಅನೀಲ ತಿಕೊಟಾ ಸೇರಿದಂತೆ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 