ಚನ್ನಮ್ಮ ಅರ್ಬನ್ ಸೌಹಾರ್ದ ಹಗರಣದ ತನಿಖೆ ನಡೆಸುವಂತೆ ಒತ್ತಾಯ
Demand for investigation into Channamma Urban Souharda scam
ಚನ್ನಮ್ಮ ಅರ್ಬನ್ ಸೌಹಾರ್ದ ಹಗರಣದ ತನಿಖೆ ನಡೆಸುವಂತೆ ಒತ್ತಾಯ
ಬೆಳಗಾವಿ 14: ಜಿಲ್ಲೆಯ ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿ.ನ ಹಗರಣದ ತನಿಖೆ ನಡೆಸಬೇಕೆಂದು ಆಗ್ರಹಿಸಿ ಜೈಹೋ ಜನತಾ ವೇದಿಕೆಯವರು ಕೈಯಲ್ಲಿ ಬಳೆ ಹಿಡಿದು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕಿತ್ತೂರು ರಾಣಿ ಚನ್ನಮ್ಮ ಸೊಸೈಟಿ ಹಗರಣ ಕುರಿತು 11 ತಿಂಗಳು ಕಳೆದಿದ್ದು, ಗ್ರಾಹಕರು ತನ್ನ ಕಷ್ಟದ ಸಮಯಕ್ಕೆ ಸಹಾಯ ಆಗುವ ನಂಬಿಕೆಯಿಂದ ಈ ಸೊಸೈಟಿಯಲ್ಲಿ ಹಣ ಠೇವಣಿ ಮಾಡಿದ್ದರು. ಈಗ 1ಕ್ಕೆ 3ರಷ್ಟು ಬೆಲೆಗೆ ಆಸ್ತಿ ತಗೊಳ್ಳಿ ಅನ್ನುವ ಸನ್ನಿವೇಶ ನಡೆದಿದ್ದು, ಠೇವಣಿದಾರರಿಗೆ ಯಾವುದೇ ಸೈಟ್ ಅಥವಾ ಜಮೀನು ಬೇಡ ಎಂದು ಒತ್ತಾಯಿಸಿದ್ದಾರೆ.
ನಮಗೆ ನಮ್ಮ ಹಣ ಬಡ್ಡಿ ಸಮೇತ ಬೇಕೆನ್ನುವ ಬೇಡಿಕೆ ಇದೆ. ಈಗ ವಂಚಕರು ತಾವು ತಪ್ಪಿಸಿಕೊಳ್ಳಲು ಅಧಿಕಾರಿ ಬಳಗವನ್ನು ತಮ್ಮ ಹಿಡಿತಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವು ಬುದ್ದಿ ಜೀವಿಗಳು ಆಶ್ವಾಸನೆ ನೀಡಿ ಸಮಾಧಾನ ಅನ್ನುವ ತುಪ್ಪ ಸವರಿ ಹಗಲು ದರೋಡೆಗೆ ಯಾವುದೇ ಅಡೆತಡ ಆಗದಂತೆ ಠೇವಣಿದಾರರನ್ನು ಹಿಪೋಟೈಸ್ ಮಾಡುವಲ್ಲಿ ಒಂದು ಹಂತಕ್ಕೆ ಗೆದ್ದಿದ್ದರೂ ಕೂಡ ಕೊನೆಗೆ ಸತ್ಯಕ್ಕೆ ಜಯ ಆಗಲಿದೆ ಎಂದರು.
ಈ ಸೊಸೈಟಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ ನಂತರವೂ ಜನತೆ ಠೇವಣಿ ದುಡ್ಡು, ವಂಚಕರ ಪಾಲಾಗದಂತೆ ತನ್ನ ಕರ್ತವ್ಯ ನಿರ್ವಹಿಸಿ ಆಗಿದ್ದರೆ ಜನತೆಗೆ ಠೇವಣಿ ದುಡ್ಡು ದುರುಪಯೋಗ ಆಗದಂತೆ ತಡೆಯ ಬಹುದಿತ್ತು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಇವರಿಗೆ ಮಾಹಿತಿ ಕೇಳಿದಾಗ ನಮ್ಮ ಸಂಸ್ಥೆ ಸಾರ್ವಜನಿಕ ಪ್ರಾಧಿಕಾರಕ್ಕೆ ಒಳಪಡುವುದಿಲ್ಲ ಅನ್ನುವ ಜಾಣ ಹಿಂಬರಹ ನೀಡಿ ತನ್ನ ಮೂಲಕ ಮಾಡಲಾದ ಮಹಾನ್ ವಂಚನೆ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಅಲ್ಲಿನ ಅಧಿಕಾರಿಗಳು ಕೈಗೆ ಬಳೆ ತೊಟ್ಟುಕೊಳ್ಳಿ ಎಂದು ಬಳೆಗಳನ್ನು ಪ್ರದರ್ಶನ ಮಾಡಿದರು. ಜನತೆ ಸಂಪೂರ್ಣ ಬೀದಿಗೆ ಬರಲು ಬೇಕಾದ ಎಲ್ಲ ವ್ಯವಸ್ಥೆ ವಂಚಕರೊಡನೆ ಹೆಗಲಿಗೆ ಹೆಗಲು ನೀಡಿ ಸಹಬಾಳ್ವೆಯಲ್ಲಿ ಜನತೆ ದುಡ್ಡು ತಿನ್ನುವ ಸೂಕ್ಷ್ಮವಾಗಿದೆ ಎಂದು ಆರೋಪಿಸಿದರು.
ಕಿತ್ತೂರು ರಾಣಿ ಚನ್ನಮ್ಮ ಸೊಸೈಟಿ ಆಡಳಿತ ಮಂಡಳಿ ಶಾಖೆಯ ಮ್ಯಾನೇಜರ್ ಹಾಗೂ ಸ್ಥಾನಿಕ ಫೆಡರೇಷನ್ ಮಂಡಳಿ ಕೂಡ ಈ ಹಗರಣದಲ್ಲಿ ಪರೋಕ್ಷ ಅಪರೋಕ್ಷವಾಗಿ ಭಾಗಿಯಾಗಿರುವ ಶಂಕೆ ಇದ್ದು, ಇವರ ಮೇಲೂ ಕೂಡ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರ ಠೇವಣೆ ಹಣದ ರಕ್ಷಣೆಗೆ ನಿರ್ಧಾರ ಮಾಡಬೇಕಿದೆ ಎಂದು ಆಗ್ರಹಿಸಿದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 