ಕನಿಷ್ಠ ವೇತನ ಜಾರಿ, 11 ತಿಂಗಳ ಬಾಕಿ ವೇತನ ಪಾವತಿಗೆ ಒತ್ತಾಯ

ಕನಿಷ್ಠ ವೇತನ ಜಾರಿ, 11 ತಿಂಗಳ ಬಾಕಿ ವೇತನ ಪಾವತಿಗೆ ಒತ್ತಾಯ  Demand for implementation of minimum wage and payment of 11 months' outstanding wages

ಹಂಪಿ, ಆ.11: ಕರ್ನಾಟಕ ರಾಜ್ಯ ಸರ್ಕಾರದ ಕನಿಷ್ಠ ವೇತನವನ್ನು ಜಾರಿಗೊಳಿಸುವುದು ಸೇರಿದಂತೆ 11 ತಿಂಗಳ ಬಾಕಿ ವೇತನವನ್ನು ತಕ್ಷಣ ಪಾವತಿಸಬೇಕು ಹಾಗೂ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ವಿಶ್ವವಿದ್ಯಾಲಯ ಹಂಪಿ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.  

ಕರ್ನಾಟಕ ವಿಶ್ವವಿದ್ಯಾಲಯ ಹಂಪಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ರಾಜ್ಯ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ಈವರೆಗೆ ಪಾವತಿಸಲಾಗಿಲ್ಲ. ಅಲ್ಲದೆ, ಕಳೆದ 11 ತಿಂಗಳಿನಿಂದ ವೇತನ ಬಾಕಿ ಉಳಿದಿರುವುದರಿಂದ ನೌಕರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೌಕರರ ಕನಿಷ್ಠ ಬದುಕಿನ ಹಕ್ಕಿನೊಂದಿಗೆ ವಿಶ್ವವಿದ್ಯಾಲಯ ಚಲ್ಲಾಟವಾಡುತ್ತಿರುವುದು ಖಂಡನೀಯ ಎಂದು ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.  

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮರಡಿ ಜಂಬಯ್ಯನಾಯಕ, ಉಪಾಧ್ಯಕ್ಷ ಗದಿಗಯ್ಯ, ಪ್ರಧಾನ ಕಾರ್ಯದರ್ಶಿ ನಾಗುನಾಯಕ್, ನಿಂಗಪ್ಪ, ಚಿದಾನಂದ, ಪಿ. ಪದ್ಮಾವತಿ, ಗಾಯತ್ರಿ, ಶೃತಿ, ಬಿ. ಯಶೋಧಾ, ಎ. ರಾಮಾಂಜನಿ, ಬಸವರಾಜ, ರಾಜು, ಎಚ್‌. ಶ್ವೇತಾ, ನೇತ್ರಾವತಿ, ಹೊನ್ನವ್ವ ಕೃಷ್ಣವೇಣಿ, ನಾಗರತ್ನಮ್ಮ, ಅಂಬಮ್ಮ, ಮಂಗಲಮ್ಮ, ಬಿ. ಪಂಪಾಪತಿ, ಸುಂಕಮ್ಮ ಸೇರಿದಂತೆ ಹಲವು ನೌಕರರು ಭಾಗವಹಿಸಿ ಮನವಿ ಸಲ್ಲಿಸಿದರು.