ಜೋಳದ ಬೆಂಬಲ ಬೆಲೆ ಹಣವನ್ನು ರೈತರ ಖಾತೆಗಳಿಗೆ ಶೀಘ್ರ ಜಮೆ ಮಾಡಲು ಒತ್ತಾಯ

ಜೋಳದ ಬೆಂಬಲ ಬೆಲೆ ಹಣವನ್ನು ರೈತರ ಖಾತೆಗಳಿಗೆ ಶೀಘ್ರ ಜಮೆ ಮಾಡಲು ಒತ್ತಾಯ Demand for immediate credit of support price money to farmers' accounts

ಬಳ್ಳಾರಿ 21: ಕರ್ನಾಟಕ ರಾಜ್ಯದಂತ ಎಲ್ಲಾ ಜಿಲ್ಲೆಗಳಲ್ಲಿ ತಾಲೂಕಿನ ರೈತರು ಕಳೆದ ಮಾರ್ಚ್‌ ತಿಂಗಳಲ್ಲಿ ಜೋಳ ಬೆಂಬಲ ಬೆಲೆ ನಿಗದಿಪಡಿಸಿದ ದರಕ್ಕೆ ಖರೀದಿ ಕೇಂದ್ರಕ್ಕೆ ಸದರಿ ಜೋಳವನ್ನು ಈಗಾಗಲೇ ಖರೀದಿ ಕೇಂದ್ರಕ್ಕೆ ರೈತರು ಹಾಕಿದ್ದಾರೆ. ಆದರೇ ಸದರಿ ಈಗಾಗಲೇ ಮೂರು ತಿಂಗಳು ಆಗಿದ್ದು 3 ತಿಂಗಳು ಕಳೆದರೂ ಸದರಿ ಜೋಳವನ್ನು ರೈತರು ಹಾಕಿರುತ್ತಾರೆ ಕೂಡಲೇ ರೈತರ ಹಣವನ್ನು ತಮ್ಮ ಸೇವ ಖಾತೆಗೆ ಇನ್ನು ಜಮವಾಗಿರುವುದಿಲ್ಲ  ಹಾಗೂ ಈಗಾಗಲೇ ಮುಂಗಾರು ಕೃಷಿ ಚಟುವಟಿಕೆಗಳು ಪ್ರಾರಂಭಗೊಂಡಿದ್ದು, ಮಳೆಗಾಲ ಆರಂಭಗೊಂಡು ಹಾಗೂ ಕಾಲುವೆಗಳಿಗೆ ಈಗಾಗಲೇ ನೀರು ಬಿಟ್ಟಿದ್ದಾರೆ.    

ರೈತರು ಕೃಷಿ ಚಟುವಟಿಕೆ ಹಾಗೂ ಬಿತ್ತನೆಗೆ ಬೀಜ ಹಾಗೂ ರಸಗೊಬ್ಬರ ಖರೀದಿಗೆ ಹಾಗೂ ಮುಂಗಾರು ಹಾಗೂ ಹಿಂಗಾರು ಸರಿ ರೈತರಿಗೆ 12 ಲಕ್ಷ ಕಿಂಟಾಲ್ಗಿ ಹಣವನ್ನು ಸರ್ಕಾರದಿಂದ ಹಾಕಿಲ್ಲ ಎಂದು ಕನ್ನಡ ನಾಡು ರೈತ ಸಂಘ ಒತ್ತಾಯಿಸ್ತಿದೆ, ಜೋಳ ಖರೀದಿ ಮಾಡಿರುವ ಹಣ ಕೂಡಲೇ ಹಾಕಬೇಕೆಂದು ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ಜಿಲ್ಲಾಧಿಕಾರಿಗೆ  ಮನವಿ ಪತ್ರ ಸಲ್ಲಿಸಿದರು. ಇದರಿಂದಾಗಿ ರೈತರು ಹಣಬಾರದೇ ಹೊಲದಲ್ಲಿ ಆತ್ತನೆ ಕಾರ್ಯ ಗಳಿಗೆ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಹಾಗೂ ರೈತರು ಸಾಲ ಸೂಲಾ ಮಾಡಿಕೊಂಡಿದ್ದು, ಸಾಲಕೊಟ್ಟವರು ಹಾಗೂ ಬ್ಯಾಂಕಿನವರು ಸಹ ಸಾಲ ವಸೂಲಾತಿಗಾಗಿ ಮನೆಗೆ ಅಲೆದಾಡುತ್ತಿದ್ದು. ಇಂತಹ ಸಂಕಷ್ಟಗಳನ್ನು ಅನುಭವಿಸುತ್ತಿದ್ದರು. ಸಂಬಂಧಿಸಿದ ಬೆಳೆ ಹಣವನ್ನು ಖರೀದಿ ಕೇಂದ್ರದಿಂದ ಪಾವತಿಸಿರುವುದಿಲ್ಲ. ಇದರ ಕುರಿತು ಈಗಾಗಲೇ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಗೆ ಮೌಖಿಕವಾಗಿ ತಿಳಿಸಿದರು. ಯಾವುದೇ ಪ್ರಯೋಜನವಾಗಲಿಲ್ಲ ವೆಂದು ಕನ್ನಡ ನಾಡು ರೈತ  ಹಾಗೂ ಈ ತಿಂಗಳು ಕೊನೆಯಲ್ಲಿ ಎಲ್ಲಾ ರೈತರ ಮೊತ್ತವು ಪಾವತಿಸಲಾಗುವುದೆಂದು ಹೇಳದ್ದು, ಅದರೇ ಇಲ್ಲಿಯ ವರೆಗೆ ಹಣ ಪಾವತಿಸಿರುವುದಿಲ್ಲ. ಕಾರಣ ಮಾನ್ಯರಾದ ತಾವುಗಳು ಸದರಿ ರೈತರ ಜೋಳದ ಬೆಳೆ ಮೊತ್ತವನ್ನು ಶೀಘ್ರವಾಗಿ ಪಾವತಿಸಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಕೋರಿಕೊಂಡರು. ಒಂದು ವೇಳೆ ಶೀಘ್ರವಾಗಿ ಪಾವತಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ನಾಡು ರೈತ ಸಂಘ ನೊಂದಾಣಿಕೆ ಎಲ್ಲಾ ಪದಾಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ರೈತರು ಉಗ್ರಹೋರಾಟವನ್ನು ಹಮ್ಮಿಕೊಳ್ಳಾಗುವುದೆಂದು ರೈತರು ತಿಳಿಸಿದರು.  

ಈ ಸಂದರ್ಭದಲ್ಲಿ ಕನ್ನಡ ನಾಡು ರೈತ ಸಂಘ ಅಧ್ಯಕ್ಷರು ಈಶ್ವರ​‍್ಪ ರೈತ ಸಂಘದ ಪದಾಧಿಕಾರಿಗಳು ರಮೇಶ್ ಗೌಡ ಅಮರಾಪುರ,ಜಿ ದೊಡ್ಡ ಬಸನಗೌಡ ಕುಂಟನಹಾಲ್, ಶಿವಕುಮಾರ್ ಗೌಡ, ವೀರಭದ್ರಗೌಡ, ರಾಜಶೇಖರ, ಜಿ ಮಲ್ಲನಗೌಡ, ಮೇಟಿ ಸುರೇಶ್ ಗೌಡ, ಮೇಟಿ ದಿವಾಕರ್ ಗೌಡ, ವೈ ಮಲ್ಲಿಕಾರ್ಜುನ, ಕೆ ಹನುಮನ ಗೌಡ, ಪ್ರಶಾಂತ್ ಸ್ವಾಮಿ ಬಳ್ಳಾರಿ,ಜಿ ಏಕಾಂಬ ರೆಡ್ಡಿ, ಕೋಟೆ ಹರಿಸ್ವಾಮಿ, ಕೋಟೆ ಬಸವನಗೌಡ, ಬಸವರಾಜು, ಶಿವರಾಂ ರೆಡ್ಡಿ, ಚೆನ್ನ ರೆಡ್ಡಿ ಗೋಡೆ ಹಾಲ್, ಅನಿಲ್ ರೆಡ್ಡಿ ಗೋಡೆ ಹಾಲ್, ರೈತರು ಭಾಗವಹಿಸಿದರು.