ಕುಡಿತಿನಿ ಭೂ ಸಂತ್ರಸ್ತರ ಬೇಡಿಕೆ ಈಡೇರಿಕೆಗೆ ಆಗ್ರಹ: ನಾಳೆ ಬಳ್ಳಾರಿ ಜಿಲ್ಲಾ ಬಂದ್

ಕುಡಿತಿನಿ ಭೂ ಸಂತ್ರಸ್ತರ ಬೇಡಿಕೆ ಈಡೇರಿಕೆಗೆ ಆಗ್ರಹ: ನಾಳೆ ಬಳ್ಳಾರಿ ಜಿಲ್ಲಾ ಬಂದ್  Demand for fulfillment of demands of liquor land victims: Bellary district bandh tomorrow

ಬಳ್ಳಾರಿ  17:  ಕುಡಿತಿನಿ ಪ್ರದೇಶದ ಏಳು ಗ್ರಾಮಗಳ ರೈತರಿಂದ ಕೈಗಾರಿಕೆಗಳ ಸ್ಥಾಪನೆ ಹೆಸರಿನಲ್ಲಿ ಸ್ವಾಧೀನಪಡಿಸಿಕೊಂಡ 12,875.09 ಎಕರೆ ಭೂಮಿಗೆ ನ್ಯಾಯಯುತ ಭೂಬೆಲೆ ನಿಗದಿಪಡಿಸದೆ ವಂಚನೆ ಮಾಡಲಾಗಿದೆ ಹಾಗೂ 16 ವರ್ಷಗಳು ಕಳೆದರೂ ಉದ್ದೇಶಿತ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿ ಮಾಡದ ಹಿನ್ನೆಲೆಯಲ್ಲಿ ಜೂನ್ 18ರಂದು ಬಳ್ಳಾರಿ ಜಿಲ್ಲಾ ಸಂಪೂರ್ಣ ಬಂದ್ ಸ್ವರೂಪದ ಹರತಾಳಕ್ಕೆ ಕರೆ ನೀಡಲಾಗಿದೆ ಎಂದು ಕುಡಿತಿನಿ ಪ್ರದೇಶದ ಭೂ ಸಂತ್ರಸ್ತರ ಹೋರಾಟ ಸಮಿತಿ ತಿಳಿಸಿದೆ.ಬುಧವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಹೋರಾಟ ಸಮಿತಿಯ ಮುಖಂಡರು, ಬಳ್ಳಾರಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬಂದ್ ನಡೆಸಿ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.