ದಿವ್ಯಾಂಗ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ
Demand for fulfillment of demands of disabled employees
ಧಾರವಾಡ 25: ಸಮಾಜದಲ್ಲಿ ದಿವ್ಯಾಂಗ ನೌಕರರು ಹಲವಾರು ಸಮಸ್ಯೆಗಳ ನಡುವೆ ಬದುಕುತ್ತಿದ್ದು, ನಮ್ಮ ಸರಕಾರಗಳು ದಿವ್ಯಾಂಗ ನೌಕರರ ಬೇಡಿಕೆಗಳನ್ನು ಅನುಕಂಪದ ನೆಲೆಯಲ್ಲಿ ತ್ವರಿತವಾಗಿ ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಕವಟಕೊಪ್ಪ ಆಗ್ರಹಿಸಿದ್ದಾರೆ.
ಅವರು ಇತ್ತೀಚೆಗೆ ನಗರದಲ್ಲಿ ಜರುಗಿದ ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕಗಳ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಕೇಂದ್ರ ಸರ್ಕಾರಿ ದಿವ್ಯಾಂಗ ನೌಕರರಿಗೆ ಸಂಚಾರಿ ಭತ್ತೆಯೊಂದಿಗೆ ನಗರಭತ್ತೆಯನ್ನೂ ಕೊಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಕಳೆದ 3 ತಿಂಗಳುಗಳಿಂದ ತಡೆಹಿಡಿದಿದೆ. ಇತರೆ ನೌಕರರಿಗೆ ಎಲ್ಲಾ ಭತ್ತೆಗಳ ಜೊತೆಗೇ ನಗರಭತ್ತೆಯನ್ನು ಸೇರಿಸಿ ಕೊಡುತ್ತಿದ್ದು, ಕೇವಲ ದಿವ್ಯಾಂಗ ನೌಕರರಿಗೆ ಮಾತ್ರ ತಾರತಮ್ಯ ಮಾಡಲಾಗಿದೆ. ಇದು ವಿಕಲಚೇತನರ ಅಧಿನಿಯಮ(ಆರ್.ಪಿ.ಡಬ್ಲ್ಯೂ.ಡಿ.)-2016ರ ಉಲ್ಲಂಘನೆಯಾಗಿದೆ ಎಂದರು.
ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಆರ್. ಆರ್. ತಳವಾರ ಮಾತನಾಡಿ, ಭಾರತ ಸರ್ಕಾರ ಯು.ಡಿ.ಐ.ಡಿ. ಕಾರ್ಡನ್ನು ಎಲ್ಲಾ ಸಂದರ್ಭಗಳಲ್ಲಿ ಕಡ್ಡಾಯವಾಗಿ ಬಳಸಲು ಅಧಿಕೃತ ಆದೇಶವನ್ನು ಕೊಟ್ಟಿದೆ. ಆದರೆ ರಾಜ್ಯ ಸರ್ಕಾರಿ ದಿವ್ಯಾಂಗ ನೌಕರರ ವರ್ಗಾವಣೆ, ಹೆಚ್ಚುವರಿ ಸಂದರ್ಭಗಳಲ್ಲಿ ಮತ್ತೆ ತ್ರಿಸದಸ್ಯ ಸಮಿತಿಯಿಂದ ಪ್ರಮಾಣಪತ್ರ ತರಬೇಕೆಂದು ಸೂಚಿಸುವದರಿಂದ ರಾಜ್ಯ ಸರಕಾರದ ದಿವ್ಯಾಂಗ ನೌಕರರಿಗೆ ವೃಥಾ ಕಿರುಕುಳವಾಗುತ್ತಿದೆ. ಪ್ರತಿಯೊಂದೂ ಹಂತದಲ್ಲಿ ಯು.ಡಿ.ಐ.ಡಿ. ಕಾರ್ಡನ್ನು ಕಡ್ಡಾಯವಾಗಿ ಬಳಸಲು ಅನುಮತಿಸಲು ಒತ್ತಾಯಿಸಿದರು.
ಹಕ್ಕೊತ್ತಾಯ : ನಕಲಿ ದಿವ್ಯಾಂಗ ನೌಕರರಿಂದ ನಿಜವಾದ ವಿಕಲಚೇತನರಿಗೆ ವ್ಯಾಪಕ ಅನ್ಯಾಯವಾಗುತ್ತಿದ್ದು, ಈ ಕುರಿತು ರಾಜ್ಯ ಸರಕಾರ ಸಮಗ್ರ ತನಿಖೆ ನಡೆಸಿ ನಿಜವಾದ ದಿವ್ಯಾಂಗ ನೌಕರರಿಗೆ ನ್ಯಾಯ ಒದಗಿಸಬೇಕು. ಜೊತೆಗೆ ಇತ್ತೀಚಿನ ದಿನಗಳಲ್ಲಿ ಮೇಲಾಧಿಕಾರಿಗಳಿಂದ ವಿಕಲಚೇತನ ನೌಕರರಿಗೆ ಕಿರುಕುಳ ಹೆಚ್ಚಾಗುತ್ತಿದ್ದು, ಇದನ್ನು ನಿವಾರಿಸಲು ಸರ್ವ ಸದಸ್ಯರು ಹಕ್ಕೊತ್ತಾಯ ಮಾಡಿ ನಿರ್ಣಯ ಅಂಗೀಕರಿಸಿದರು. ಇದೇ ಸಂದರ್ಭದಲ್ಲಿ ಡಯಟ್ ನಿವೃತ್ತ ಉಪನ್ಯಾಸಕ ಮತ್ತು ಸಂಘದ ಗೌರವಾಧ್ಯಕ್ಷ ಎಚ್.ಪಿ. ಕಡ್ಲಿಮಟ್ಟಿ ಅವರನ್ನು ಗೌರವಿಸಲಾಯಿತು. ರಮೇಶ ದೊತ್ರದ ಸ್ವಾಗತಿಸಿದರು. ಗೌರಮ್ಮ ಗೊಲ್ಲರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 