ಜಾಲವಾದ ಗ್ರಾಮದಲ್ಲಿ ಪಶು ಆಸ್ಪತ್ರೆ ಸ್ಥಾಪನೆಗೆ ಒತ್ತಾಯ : ಕೆ. ವೆಂಕಟೇಶ್
Demand for establishment of veterinary hospital in Jalavada village: K. Venkatesh
ದೇವರಹಿಪ್ಪರಗಿ 20 : ತಾಲೂಕಿನ ಜಾಲವಾದ ಗ್ರಾಮದಲ್ಲಿ ಪಶು ಆಸ್ಪತ್ರೆ ಸ್ಥಾಪಿಸುವ ನಿಟ್ಟಿನಲ್ಲಿ ಸರಕಾರ ಕೈಗೊಂಡ ಕ್ರಮಗಳ ಕುರಿತು ವಿಧಾನ ಪರಿಷತ್ತಿನ ಬಜೆಟ್ ಅಧಿವೇಶನದಲ್ಲಿ ಬುಧವಾರ ವಿಪ ಸದಸ್ಯ ಕೇಶವ ಪ್ರಸಾದ.ಎಸ್ ಚುಕ್ಕೆ ಗುರುತಿಲ್ಲದ ಪ್ರಶ್ನೆ-1632ರಡಿ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ. ವೆಂಕಟೇಶ ಅವರಿಗೆ ಪ್ರಶ್ನಿಸಿದರು. ದೇವರಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ಪಶು ಆಸ್ಪತ್ರೆ ನಿರ್ಮಿಸಲು ಸರ್ಕಾರದ ಮುಂದೆ ಪ್ರಸ್ತಾವನೆ ಇದೆ ಇದ್ದಲ್ಲಿ ಯಾವ ಕಾಲಮಿತಿಯಲ್ಲಿ ಮಂಜೂರಾತಿಯನ್ನು ನೀಡಲಾಗುವದು ಸಂಪೂರ್ಣ ಮಾಹಿತಿಯನ್ನು ವದಗಿಸುವುದು, ಗ್ರಾಮದಲ್ಲಿ ಜಾನುವಾರಗಳು ಬಹು ಸಂಖ್ಯೆಯಲ್ಲಿ ಇದ್ದು ರೋಗ ರುಜಿನಗಳಿಗೆ ತುತ್ತಾಗುತ್ತಿರುವದು ಸರ್ಕಾರದ ಗಮನಕ್ಕೆ ಬಂದಿದೆಯೇ ಹಾಗೂ ಹೊಸದಾಗಿ ಪಶು ಆಸ್ಪತ್ರೆ ಮಂಜೂರಾತಿಗೆ ಯಾವ ಯಾವ ಗಣ್ಯ ವ್ಯಕ್ತಿಗಳು ಶಿಫಾರಸ್ಸು ಪತ್ರಗಳನ್ನು ನೀಡಿದ್ದಾರೆ.
ಹಾಗೂ ಹೊಸದಾಗಿ ಪಶು ಆಸ್ಪತ್ರೆ ನಿರ್ಮಿಸಲು ಬೇಕಾದ ಸರ್ಕಾರದ ಮಾನದಂಡ ಮತ್ತು ಮೂಲ ಸೌಕರ್ಯಗಳು ಇದ್ದರು ವಿಳಂಬವಾಗಲು ಕಾರಣವೇನು? ಈ ಕುರಿತು ವಿಪ ಸದಸ್ಯ ಕೇಶವ ಪ್ರಸಾದ. ಎಸ್ ಪ್ರಶ್ನೆಸಿದರು. ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್ ಉತ್ತರಿಸಿ. ಈ ಕುರಿತು ಪಶು ಆಸ್ಪತ್ರೆ ಸ್ಥಾಪನೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸ್ವಿಕೃತಗೊಂಡಿರುತ್ತದೆ. ಆದ್ಯತೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಪರೀಶೀಲಿಸಲಾಗುವುದು. ಜಾನುವಾರಗಳಲ್ಲಿ ರೋಗೋದ್ದೇಕ ಉಂಟಾಗಿರುವ ಬಗ್ಗೆ ವರದಿಯಾಗಿರುವುದಿಲ್ಲ. ಮುಂಜಾಗ್ರತ ಕುರಿತು ಲಸಿಕೆ ಹಾಕಲಾಗಿದೆ. ತಾಲೂಕಿನ ಜಾಲವಾದ ಗ್ರಾಮದಲ್ಲಿ ಪಶು ಚಿಕಿತ್ಸಾಲಯ ಮಂಜೂರು ಮಾಡಲು ನಾವು ಸಲ್ಲಿಸಿದ ಪ್ರಸ್ತಾವನೆ ಸ್ವಿಕೃತವಾಗಿದ್ದು. ಆದ್ಯತೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ನೂತನ ಪಶು ಚಿಕಿತ್ಸೆಗಳ ಮಂಜುರಾತಿಗೆ ಪರೀಶೀಲಿಸಲಾಗುತ್ತಿದೆ ಎಂದು ಉತ್ತರಿಸಿದ್ದಾರೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 