14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಒತ್ತಾಯ
Demand for death penalty for the accused who raped and murdered a 14-year-old girl
ಹೊಸಪೇಟೆ17 :ಬೆಂಗಳೂರು ನಗರಜಿಲ್ಲೆ ಮಾಗಡಿ ರಸ್ತೆಯ ತಾವರಕೇರಿಯಿಂದ ಗಾರೆ ಕೆಲಸ ಮಾಡಿಕೊಂಡು ಜೀವನೋಪಾಯಕ್ಕೆ ದುಡಿಯಲು ಹೋಗಿದ್ದು, ಕೊಪ್ಪಳ ಜಿಲ್ಲೆಯ ಹೊಸಬಂಡಿ ಹರ್ಲಾಪುರ ಗ್ರಾಮದ ದಲಿತ ಪರಿಶಿಷ್ಟ ಜಾತಿ ಅಲಮಾರಿ ಸಿಳ್ಳೆಕ್ಯಾತ ಸಮುದಾಯದ ನಾಗಪ್ಪ ಮತ್ತು ರೇಣುಕಮ್ಮಾ ದಂಪತಿಗಳಿಗೆ ಮೂರು ಜನಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು.
14 ವರ್ಷದ ಅರುಣಾ ಎಂಬ ಹೆಣ್ಣುಮಗಳನ್ನು ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಮಾರಕಾಸ್ತ್ರಗಳಿಂದ ಮುಖಕ್ಕೆ ಹೊಡೆದು ಕೊಲೆ ಮಾಡಿದ್ದಾರೆ. ಪೋಲಿಸರು ಆರೋಪಿಗಳನ್ನು ಬಂಧಿಸಿ ಎಫ್.ಐ.ಆರ್.ದಾಖಲಿಸಿದ್ದಾರೆ. ಘಟನೆ ತಿಳಿದ ತಕ್ಷಣ ರಾಜ್ಯದ ಎಲ್ಲಾ ಅಲೆಮಾರಿ ಸಮುದಾಯದವರು ಮುಖಂಡರುಗಳೂ, ಹಾಗೂ ಬೆಂಗಳೂರು, ರಾಮನಗರಜಿಲ್ಲೆ ನೊಂದ ಕುಟುಂಭವನ್ನು ಬೇಟಿಯಾಗಿ ಬಾಲಕಿ ಮೇಲೆ ಅವಮಾನೀಯ ಕ್ರೂರ ಕೃತ್ಯಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆ ಕೊಡಬೇಕೆಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಅಲೆಮಾರಿ, ದಲಿತ ಸಂಘಟನೆಗಳು ಉಗ್ರವಾಗಿ ಹೋರಾಟ ಮೂಲಕ ಖಂಡನೆ ವ್ಯಕ್ತಪಡಿಸಿದ್ದಾರೆ.
ಕ್ರೂರ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಹಾಗೂ ನೊಂದ ಕುಟುಂಬಕ್ಕೆ ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಮತ್ತು ಮಹಿಳಾ ಮಕ್ಕಳ ಆಯೋಗ, ಪೋಲಿಸ್ ಇಲಾಖೆ, ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳೂ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕುಗಳ ಪದಾಧಿಕಾರಿಗಳು ಅಲೆಮಾರಿ ಮುಖಂಡರುಗಳೂ ಮತ್ತು ದಲಿತ ಪರ ಸಂಘಟನೆಗಳು, ಪ್ರಗತಿಪರ ಚಿಂತಕರು, ಕಾರ್ಯಕಾರಿಣಿ ಸಮಿತಿ ಸದಸ್ಯರುಗಳು ಜಿಲ್ಲಾ ಅನುಷ್ಠಾನ ಸಮಿತಿ, ಸದಸ್ಯರುಗಳು, ಗೌರವ ಸದಸ್ಯರುಗಳು ಸರ್ವ ಸದಸ್ಯರುಗಳು ಈ ಮೂಲಕ ನ್ಯಾಯ ಒದಗಿಸಿಕೊಡಬೇಕೆಂದು ವಿನಂತಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಿದ್ದುಬೆಳಗಲ್, ಕಿನ್ನೂರಿ ಶೇಖಪ್ಪ, ಜೆ.ರಮೇಶ, ಶೇಖರ್, ಜಂಬಯ್ಯ ನಾಯ್ಕ್, ಸತ್ಯಮೂರ್ತಿ, ರಮೇಶ್, ಹಂಪಯ್ಯ, ಮಾರುತಿ, ರಾಜಕುಮಾರ್, ಲಿಂಗಪ್ಪ, ಪಕ್ಕೀರ್ಪ ಬಾದಿಗಿ, ಚೌಡಪ್ಪ, ಎಸ್.ಕೆ.ಹನುಮಕ್ಕ, ಅಂಜಲಿಬೆಳಗಲ್, ಇನ್ನು ಮುಂತಾದವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 