ಪ್ರತಿ ಎಕರೆಗೆ 50,000ರೂ. ಪರಿಹಾರ ನೀಡಲು ಆಗ್ರಹ
Demand for compensation of Rs. 50,000 per acre
ಬ್ಯಾಡಗಿ 22: ತಾಲೂಕಿನ ಶಿಡೇನೂರು ಕೆರವಡಿ ತಡಸ ಗ್ರಾಮದ ರೈತರ ಹೊಲಗಳಿಗೆ ಕಾಡು ಪ್ರಾಣಿಗಳ ಹಾವಳಿಯಿಂದ ಹಾನಿಗೊಳಗಾದ ರೈತರಿಗೆ ಅರಣ್ಯ ಇಲಾಖೆ ಕೂಡಲೇ ಪ್ರತಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಕಿರಣ ಗಡೀಗೊಳ ಆಗ್ರಹಿಸಿದರು.
ಪಟ್ಟಣದ ಅರಣ್ಯ ಇಲಾಖೆ ಮುಂದೆ ಇಂದು ನೂರಾರು ರೈತರು ಪ್ರತಿಭಟನೆ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು ಇದೇ ವೇಳೆ ಮಾತನಾಡಿದ ರೈತ ಮುಖಂಡ ಕಿರಣ ಗಡೀಗೊಳ ಶಿಡೇನೂರು ಕೆರವಡಿ ತಡಸ ಗ್ರಾಮದಲ್ಲಿ ಸುಮಾರು 50 ರೈತರು 120 ಎಕರೆಯಲ್ಲಿ ಕಾಡು ಪ್ರಾಣಿಗಳಾದ ಜಿಂಕೆ ಕಾಡು ಹಂದಿ ಮುಳ್ಳುಹಂದಿ ಗಳಿಂದ ನಾವು ಬೆಳೆದ ಬೆಳೆಗಳು ಪ್ರತಿ ವರ್ಷ ಸಂಪೂರ್ಣ ನಾಶವಾಗುತ್ತಿದ್ದು ಈ ವರ್ಷವು ಸಹ ಕಾಡು ಪ್ರಾಣಿ ಹಾವಳಿಗಳಿಂದ ನಾಶವಾಗಿರುತ್ತವೆ ರೈತರು ಸಾಲಸೂಲ ಮಾಡಿ ಬೆಳೆ ಬೆಳೆಯಲು ಹರ ಸಾಹಸ ಪಟ್ಟರು ಬೆಳೆದ ಬೆಳೆಗಳು ಕೈಗೆ ಸಿಗುತ್ತಿಲ್ಲ ಕೂಡಲೇ ಎಕರೆಗೆ 50 ಸಾವಿರ ಪರಿಹಾರವನ್ನು ರೈತರ ಖಾತೆಗಳಿಗೆ ಹಣ ಹಾಕಬೇಕು ಶಾಶ್ವತ ಪರಿಹಾರಕ್ಕಾಗಿ ಸಬ್ಸಿಡಿ ರೂಪದಲ್ಲಿ ಸೋಲಾರ್ ತಂತಿ ಬೇಲಿಯನ್ನು ಹಾಕಿ ಕೊಡಬೇಕು ತಮ್ಮ ಇಲಾಖೆಯಿಂದ ಕಾಡು ಹಂದಿಗಳನ್ನು ಹಿಡಿದು ಬೇರೆಗೆ ಕಡೆಗೆ ಸ್ಥಳಾಂತರಿಸಬೇಕು ಮತ್ತು ನಿಮ್ಮ ಅರಣ್ಯ ಇಲಾಖೆಯ ಸಂಬಂಧ ಪಟ್ಟ ಹದ್ದಿಗೆ 3 ಮೀಟರ್ ಅಗಲ 3 ಮೀಟರ್ ಎತ್ತರದ ಕಾಲುವೆ ನಿರ್ಮಾಣ ಮಾಡಬೇಕು ನಿಮ್ಮ ಹದ್ದಿಗೆ ಜಾಲಿಸ್ ತಂತಿ ಬೇರೆ ನಿರ್ಮಾಣ ಮಾಡ ಬೇಕೆಂದು ಆಗ್ರಹಿಸಿದರು ಕೂಡಲೇ ಈ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆರ್ ಎಫ್ ಓ. ಗಿರಿಧರ್ ಮಾತನಾಡಿ ಶೀಘ್ರವೇ ಮೇಲಾಧಿಕಾರಿಗಳ ಜೊತೆಗೆ ಹಾನಿ ಒಳಗಾದ ಜಮೀನುಗಳನ್ನು ವೀಕ್ಷಿಸಿ ಪರಿಹಾರ ನಿಡಲಾಗುವುದು ಮತ್ತು ಅರಣ್ಯ ವಲಯದ ಅಂಚಿನಲ್ಲಿರುವ ಜಮೀನುಗಳಿಗೆ ಕಾಡು ಪ್ರಾಣಿಗಳು ಬಾರದ ಹಾಗೆ ತಂತಿ ಬೇಲಿಯನ್ನು ಹಾಕಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಡೇನೂರು ತಡಸ ಕೆರವಡಿ ಗ್ರಾಮದ ರೈತರುಗಳಾದ ಮಲ್ಲಿಕಾರ್ಜುನ್. ಕಲ್ಲವೀರ್ಪ ಬ್ಯಾಡಗಿ. ನಾಗಪ್ಪ ಕರೂರ್. ತಿರಕಪ್ಪ ಮತ್ತಿಹಳ್ಳಿ. ಶೋಭಕ್ಕ ಕರೂರ್. ತಿರಕವ್ವ ಕರೂರ್. ತಿರಕಪ್ಪ ದೊಡ್ಡತಳವಾರ. ರಾಮಪ್ಪ ದೊಡ್ಮನಿ. ಭೀಮಪ್ಪ ದೊಡ್ಡಮನಿ. ದೇವಿಂದ್ರ್ಪ ದೊಡ್ಡಮನಿ.ಶಿವಪ್ಪ ನೆಲ್ಲಿಕೊಪ್ಪ. ಚಂದ್ರ್ಪ ನೆಲ್ಲಿಕೊಪ್ಪ. ಹನುಮಂತಪ್ಪ ಶೀಡೆನೂರ. ಚಂದ್ರಶೇಖರ್ ಬೆಟಿಗೇರಿ. ಸೋಮಶೇಖರ್ ಬೆಟಗೇರಿ. ರುದ್ರ್ಪ ಹಲಗಣ್ಣನವರ್. ಹಾಗೂ ಅನೇಕ ರೈತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 