ನಗರದಿಂದ ರೈಲು ನಿಲ್ದಾಣ, ಆಸ್ಪತ್ರೆಗಳಿಗೆ ಬಸ್ ಸೇವೆ ಕಲ್ಪಿಸಲು ಆಗ್ರಹ
Demand for bus service from the city to railway stations and hospitals
ಲೋಕದರ್ಶನ ವರದಿ
ಬ್ಯಾಡಗಿ 28: ಪಟ್ಟಣದಲ್ಲಿ ನಗರ ಸಂಚಾರಿ ಬಸ್ಸನ್ನು ನಗರದಿಂದ ನಗರಕ್ಕೆ ಹಾಗೂ ರೈಲ್ವೆ ಸ್ಟೇಷನ್ ತಾಲೂಕು ಆಸ್ಪತ್ರೆ ವಿವಿಧ ಸರಕಾರಿ ಇಲಾಖೆ ಗಳಿಗೆ ಸಾರ್ವಜನಿಕರು ಸಂಚರಿಸಲು ನಗರ ಸಂಚಾರಿ ಬಸ್ಸುಗಳನ್ನು ಪ್ರಾರಂಭಿಸಲು ಆಗ್ರಹಿಸಿ ಕೆಇಬಿ ವಿದ್ಯುತ್ ನಗರ ಸಲಹಾ ಸಮಿತಿ ಸದಸ್ಯರು ಇಂದು ತಾಲೂಕು ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ನಿಗಮ ಸಂಸ್ಥೆ ಹಾವೇರಿ ವಿಭಾಗ ಬ್ಯಾಡಗಿ ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ನೀಡುವ ಮೂಲಕ ಮಾತನಾಡಿದವರು. ಈ ವೇಳೆ ಸದಸ್ಯ ಹೈದರಲಿ ಬೆಂಗಳೂರಿ ಮಾತನಾಡಿ ಪಟ್ಟಣದಲ್ಲಿ ಸುಮಾರು 40 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ್ದು ಮತ್ತು ಪಟ್ಟಣದಲ್ಲಿ ಮುಖ್ಯ ರಸ್ತೆಯ ಅಗಲೀಕರಣ ಪ್ರಾರಂಭವಾಗಿದ್ದು ಮತ್ತು ಪರ ಸ್ಥಳದ ಜನರು ಪಟ್ಟಣಕ್ಕೆ ಆಗಮಿಸುತ್ತಿರುವುದರಿಂದ ಮತ್ತು ವಯಸ್ಸಾದ ಜೀವಿಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಅನಾರೋಗ್ಯ ಹೊಂದಿರುವ ಜನಗಳ ಹಿತದೃಷ್ಟಿಯಿಂದ ನಗರದಿಂದ ನಗರಕ್ಕೆ ಸಂಚಾರಿ ಬಸನ್ನು ಬಿಡುವಂತೆ ಆಗ್ರಹಿಸಿ ಮನವಿ ಪತ್ರವನ್ನು ನೀಡಿದರು.ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಮಂಜುನಾಥ ಹಂಜಗಿ. ಮಾಲತೇಶ್ ಆಡಿನವರ. ಮಾಲತೇಶ್ ಶಿಡ್ಲನ್ನವರ್. ಹಾಗೂ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ 