ಕೊಂಬಳಿಗೆ ನೂತನ ಪಶು ಆಸ್ಪತ್ರೆ ಮಂಜೂರಾತಿಗೆ ಆಗ್ರಹ

ಕೊಂಬಳಿಗೆ ನೂತನ ಪಶು ಆಸ್ಪತ್ರೆ ಮಂಜೂರಾತಿಗೆ ಆಗ್ರಹ  Demand for approval for a new veterinary hospital in Kombali

ಹೂವಿನ ಹಡಗಲಿ 21:  ತಾಲೂಕಿನ ಕೊಂಬಳಿ ಮತ್ತು ಪಶ್ಚಿಮ ಕಾಲ್ವಿ ಗ್ರಾಮಗಳಲ್ಲಿ ನೂತನವಾಗಿ ಪಶು ಆಸ್ಪತ್ರೆಯನ್ನು ನಿರ್ಮಿಸಬೇಕು. ರೈತರಿಗೆ ಭೂ ಪರಿಹಾರ ಸೇರಿದಂತೆ  12ಬೇಡಿಕೆಗಳನ್ನು ಈಡೇರಿಸಬೇಂದು ಒತ್ತಾಯಿಸಿ ಸೋಮವಾರ ತಹಶಿಲ್ದಾರರ ಮೂಲಕ ರಾಜ್ಯದ ಸಿ.ಎಂ.ಸಿದ್ದರಾಮಯ್ಯ ನವರನ್ನು ಇಲ್ಲಿನ ತಾಲ್ಲೂಕು ರೈತ ಸಂಘದವರು ಆಗ್ರಹಿಸಿದ್ದಾರೆ.                             "ಕೊಂಬಳಿ ಗ್ರಾಮ ಪಂಚಾಯಿತ ವ್ಯಾಪ್ತಿಗೆ  6 ಹಳ್ಳಿಗಳು, ಕೊಂಬಳಿ, ಕಾಗನೂರು, ಕೊಯಿಲಾರಗಟ್ಟಿ, ಕೊಯಿಲಾರಗಟ್ಟಿ ತಾಂಡಾ, ಪುರ ಹಾಗೂ ಪಶ್ಚಿಮ ಕಾಲ್ವಿಗೆ 9 ಹಳಿಗಳು ಇದ್ದು  ಈ ಭಾಗದ ಜಾನುವಾರುಗಳ ತುರ್ತು ಚಿಕಿತ್ಸೆ ಅವಶ್ಯಕತೆ ಇದ್ದು ಕೂಡಲೇ ಪಶು ಆಸ್ಪತ್ರೆ ನಿರ್ಮಿಸುವುದರಿಂದ ಆಕಳು, ಎಮೆ, ಎತ್ತು ಮತ್ತು ಕುರಿ, ಮೇಕೆಗಳ ಚಿಕಿತ್ಸೆ ಗೆ ಅನುಕೂಲವಾಗಲಿದೆ ಎಂದು ರೈತ ಸಂಘದ ಕಾರ್ಯದರ್ಶಿ ಶಿವರಾಜ ಒತ್ತಾಯ ಮಾಡಿದ್ದಾರೆ.  

ಸಿಂ.ಏ.ನೀ.ಯೋ.ಭೂಮಿ ಕಳೆದ ಕೊಂಡವರಿಗೆ ತಕ್ಷಣ ಭೂ ಪರಿಹಾರ ರೈತ ರ ಬೆಳೆಸಾಲ ಸ್ವ ಸಹಾಯ ಸಂಘದ ಸಾಲ ಮನ್ನಾ ಮಾಡಬೇಕು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಲು ಮನವಿ ಪತ್ರವನ್ನು ತಹಶಿಲ್ದಾರರಿಗೆ ನೀಡಿ ಆಗ್ರಹಿಸಿದರು.  

ಇದೇ ವೇಳೆ ರೈತ ಸಂಘದ ಅದ್ಯಕ್ಷ ಹೊಸಮನಿ ಸಿದ್ದಪ್ಪ. ಉಪಾಧ್ಯಕ್ಷ ವಿಠಲ್ ನಾಯ್ಕ.ಕೃಷಿ ಸಮಾಜ ಅದ್ಯಕ್ಷ ದೂಪದ ಕೃಷ್ಣಪ್ಪ, ದೇವೇಂದ್ರ ಪ್ಪ.ಮಂಜುನಾಥ ಪುರ, ಗೀರೀಶ್, ಗಣಿಸಾಬ್, ಬಸವರಾಜ ಹಡಗಲಿ, ನಾಗಪ್ಪ ಇದ್ದರು.