ಮಂಜುನಾಥ ಬ್ಲಾಕ್ ಸಮಿತಿ ಅಧ್ಯಕ್ಷರನ್ನಾಗಿ ನೇಮಕಕ್ಕೆ ಒತ್ತಾಯ: ಯಲ್ಲಪ್ಪ ಹರಿಜನ
Demand for appointment of Manjunatha as Block Committee President: Yallappa Harijan
ಮಂಜುನಾಥ ಬ್ಲಾಕ್ ಸಮಿತಿ ಅಧ್ಯಕ್ಷರನ್ನಾಗಿ ನೇಮಕಕ್ಕೆ ಒತ್ತಾಯ: ಯಲ್ಲಪ್ಪ ಹರಿಜನ
ಶಿಗ್ಗಾವಿ 29 : ತಾಲೂಕಿನ ಕಾಂಗ್ರೆಸ್ ಪಕ್ಷದ ಕಟ್ಟಾಳು ವಿರೋಧ ಪಕ್ಷಕ್ಕೆ ಸಿಂಹ ಸ್ವಪ್ನ ಮಂಜುನಾಥ ಮಣ್ಣಣ್ಣವರ ಅವರನ್ನು ಶಿಗ್ಗಾವಿ ತಾಲೂಕಿನ ಕಾಂಗ್ರೆಸ್ ಪಕ್ಷದ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಡಿಎ???ಸ್ ಸಂಚಾಲಕ ಎಲ್ಲಪ್ಪ ಹರಿಜನ್ ಶಾಸಕ ಯಾಶೀರ್ ಅಹ್ಮದ ಖಾನ್ ಪಠಾಣ ಅವರಿಗೆ ಮಾಧ್ಯಮ ಹೇಳಿಕೆ ನೀಡಿ ಮನವಿ ಮಾಡಿದ್ದಾರೆ. ತಾಲೂಕಿನಲ್ಲಿ ಕಳೆದ ಎಂಟು ತಿಂಗಳಿಂದ ಪಕ್ಷ ಸಂಘಟನೆ ವಿಚಾರದಲ್ಲಿ ಬ್ಲಾಕ್ ಸಮಿತಿ ತನ್ನ ಕಾರ್ಯ ಚಟುವಟಿಕೆಯಲ್ಲಿ ಕಂಡು ಬರುತ್ತಿಲ್ಲ ಇದು ಕಾರ್ಯಕರ್ತರಲ್ಲಿ ನೋವು ತಂದಿದೆ ಸರಕಾರ ಆಡಳಿತದಲ್ಲಿದ್ದು ತಾಲೂಕಿನ ಪಕ್ಷದ ಸಂಘಟನೆ ಹೆಚ್ಚು ಪ್ರಕರವಾಗಿರಬೇಕು ಬ್ಲಾಕ್ ಸಮಿತಿ ಅಧ್ಯಕ್ಷರಾಗಲಿ ಸದಸ್ಯರಾಗಲಿ ಯಾರು ಪಕ್ಷ ಸಂಘಟನೆ ಚಟುವಟಿಕೆ ವಿರೋಧಿಗಳ ಹೇಳಿಕೆಗಳ ವಿಚಾರದಲ್ಲಿ ಕಂಡು ಬರುತ್ತಿಲ್ಲ ತಳಮಟ್ಟದ ಕಾರ್ಯಕರ್ತರಾಗಿ ಪಕ್ಷವನ್ನು ಸಂಘಟಿಸಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಶಾಸಕ ಯಾಶೀರ ಅಹ್ಮದಖಾನ್ ಪಠಾಣ ಅವರ ಪಕ್ಷ ನಿಷ್ಠೆಗೆ ಮೆಚ್ಚಿಕೊಂಡು ಪಕ್ಷ ಟಿಕೆಟ್ ನೀಡಿ ಇತಿಹಾಸವಿದೆ ಕಾರ್ಯಕರ್ತರ ಶ್ರಮ ಜನರ ಆಶೀರ್ವಾದದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ ಮತಕ್ಷೇತ್ರ ಹಾಗೂ ಪ್ರಮುಖವಾಗಿ ಶಿಗ್ಗಾವಿ ತಾಲೂಕಿನಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಎಲ್ಲ ಸಮುದಾಯಗಳನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ವಿರೋಧ ಪಕ್ಷಕ್ಕೆ ವಿಷಯಾಧಾರಿತ ಪ್ರತ್ಯುತ್ತರ ನೀಡುವ ಯುವ ನಾಯಕ ಹಾಗೂ ಪಕ್ಷದ ನಿಷ್ಠಾವಂತ ಮುಖಂಡ ಮಂಜುನಾಥ ಮಣ್ಣಣ್ಣವರಿಗೆ ಶಿಗ್ಗಾವಿ ತಾಲೂಕಿನ ಬ್ಲಾಕ್ ಸಮಿತಿಯ ಅಧ್ಯಕ್ಷರಾಗಿ ನೇಮಿಸಿದಲ್ಲಿ ಕ್ಷೇತ್ರದಲ್ಲಿ ದೊಡ್ಡ ಲಿಂಗಾಯಿತ ಸಮಾಜದ ಮುಖಂಡರಾಗಿದ್ದು ಸಂಘಟನೆಗೆ ಹೆಚ್ಚು ಶ್ರಮಿಸಿದವರಾಗಿದ್ದು ಬರುವ ದಿನಗಳಲ್ಲಿ ಪಕ್ಷಕ್ಕೆ ದೊಡ್ಡ ಅನುಕೂಲವಾಗಲಿದೆ ಇದು ಬಹುತೇಕ ತಾಲೂಕಿನ ನಿಷ್ಠಾವಂತ ಕಾರ್ಯಕರ್ತರ ಅಭಿಪ್ರಾಯ ಆಗಿದ್ದು ಶಾಸಕರು ಮಂಜುನಾಥ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವಂತೆ ಆಗ್ರಹ ಪಡಿಸುತ್ತೇನೆ.ಈ ಸಂದರ್ಭದಲ್ಲಿ ಅಂದಲಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಜಾಫರಸಾಬ ಯಡಹಳ್ಳಿ, ಹಾವೇರಿ ಜಿಲ್ಲಾ ಎಸ್ ಸಿ ಘಟಕದ ಉಪಾಧ್ಯಕ್ಷ ಶಿವಪ್ಪ ವಡ್ಡರ್ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 