ಬೆಂಗಳೂರು, ಏ 17, ರೈತರು ಬೆಳೆದ ತಾಜಾ ಮಾವಿನ ಹಣ್ಣುಗಳನ್ನು ಮನೆ ಮನೆಗೆ ತಲುಪಿಸಲು ಅಂಚೆ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ಜಾರಿಮಾಡಿರುವ ಲಾಕ್ ಸೌನ್ ಸಂದರ್ಭದಲ್ಲಿ ಅಂಚೆ ಇಲಾಖೆ ರೈತರ ನೆರವಿಗೆ ಧಾವಿಸಿದೆ. ನಾಳೆಯಿಂದ ಬೆಂಗಳೂರಿನ ನಾಗರೀಕರಿಗೆ ಮನೆ ಬಾಗಿಲಿಗೆ ಬಾಯಲ್ಲಿ ನೀರೂರಿಸುವ ಹಣ್ಣುಗಳ ರಾಜಾ ಮಾವಿನ ಹಣ್ಣುಗಳ ವಿತರಣೆ ಸೇವೆ ಆರಂಭವಾಗಲಿದೆ. ನೇರವಾಗಿ ರೈತರಿಂದ ಗ್ರಾಹಕರ ಮನೆಗೆ ಮಾವಿನ ಹಣ್ಣಿನ ಪೂರೈಕೆಗೆ ಅಂಚೆ ಇಲಾಖೆ ಸಜ್ಜಾಗಿದೆ. ಈ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಗ್ರಾಹಕರಿಗೂ ಅನುಕೂಲ ಮಾಡಿಕೊಡುವ ಜತೆಗೆ ರೈತರನ್ನು ಉಳಿಸುವ ಮಾನವೀಯ ಸೇವೆಗೆ ಅಂಚೆ ಇಲಾಖೆ ಸಜ್ಜಾಗಿದೆ. ಇಂದು ಮದ್ಯಾಹ್ನದಿಂದ ಅಂಚೆ ಮಿತ್ರ ಅಪ್ ಮೂಲಕ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಎಲ್ಲರೂ ಈ ಸೌಲಭ್ಯ ಉಪಯೋಗಿಸಬೇಕು. ರೈತರಿಗೆ ನೇರವಾಗುವ ದ್ಯೇಯ ನಮ್ಮದಾಗಿದೆ ಎಂದು ಎಂದು ಅಂಚೆ ಇಲಾಖೆ ಪ್ರಕಟಣೆ ತಿಳಿಸಿದೆ.