ಕೆ.ಎಂ.ಸೈಯದ್ರಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಣೆ
ಲೋಕದರ್ಶನ ವರದಿ
ಕೊಪ್ಪಳ 05: ನಗರದ 03,04 ಮತ್ತು 7,12ನೇ ವಾಡರ್್ಗಳು ಸೇರಿದಂತೆ ವಿವಿಧ ವಾಡರ್್ಗಳಲ್ಲಿ ಸೈಯದ್ ಫೌಂಡೇಶನ್ ಚಾರಿಟೇಬಲ್ ಅಧ್ಯಕ್ಷ ಕೆ.ಎಂ.ಸೈಯದ್ ಅವರು ಬಡ ಕುಟುಂಬಗಳಿಗೆ ದಿನಬಳಕೆಯ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.
ದೇಶದಲ್ಲಿ ಕೋರೋನಾ ವೈರಸ್ ಹರಡದಂತೆ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ 21 ದಿನಗಳವರೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಲಾಕ್ ಡೌನ್ ಮಾಡಿದ್ದಾರೆ.ಇಂತಹ ಸಂದರ್ಭದಲ್ಲಿ ತೀವ್ರ ಸಂಕಷ್ಟದಲ್ಲಿರುವ ಬಡಕುಟುಂಬಗಳಿಗೆ ಫೌಂಡೇಶನ್ನಿಂದ ನೆರವು ನೀಡಲಾಯಿತು.
ಸೈಯದ್ ಫೌಂಡೇಶನ್ ಚಾರಿಟೇಬಲ್ ಅಧ್ಯಕ್ಷ ಕೆ.ಎಂ.ಸೈಯದ್ ಅವರು ಬಡಜನತೆಗೆ ಸದಾ ನೆರವು ನೀಡುತ್ತಾರೆ ಈಗ ಸಹ ಆಹಾರ ಸಾಮಗ್ರಿಗಳನ್ನು ನೀಡಿ ನಮಗೆ ಆತ್ಮಸೆರ್ಯ ತುಂಬಿದ್ದಾರೆ ಎಂದು ಗಂಗಮ್ಮ ಚಿಲವಾಡಿಗಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಖಾಜಾವಲಿ ಬನ್ನಿಕೊಪ್ಪ, ಯುವ ಮುಖಂಡರಾದ ರಮೇಶ ಗಿಣಿಗೇರಾ, ಸಲೀಂ ಅಳವಂಡಿ, ಎಫ್.ಎ.ನೂರಭಾಷ, ಮಹೆಬೂಬು ಮಚ್ಚಿ, ಜಾಫರ ಸಾದೀಕ, ಆಸ್ಫಾಕ್ ಗದಗ, ಅನ್ವರಪಾಶಾ, ಕುಮಾರ ಮಂಗಳಾಪುರು, ಇಬ್ರಾಹಿಂ,ಜಾವೀದ್ ಮಂಗಳಾಪುರು, ಅಜೀಮ್ ಅತ್ತಾರ್, ಅನ್ವರ್ ಬಾಷ ಮುದಗಲ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 