ವಾಷಿಂಗ್ಟನ್, ಡಿ ೧೮ ಅಮೆರಿಕಾ ಭೇಟಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಅವರು, ವರ್ಜೀನಿಯಾದ ನಾಪ್ಲೋಕ್ ನೌಕಾಪಡೆಯ
ವಾಯುನೆಲೆಗೆ ಬುಧವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಅವರ ಸ್ಪಾಟಿಕ್
ಪ್ರದರ್ಶನದ ಜೊತೆಗೆ, ಬೋಯಿಂಗ್ ಯುದ್ಧ ವಿಮಾನಗಳ
ಕಾರ್ಯನಿರ್ಹಣೆಯ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ಉಭಯ ದೇಶಗಳ ನಡುವಣ ಬಲಿಷ್ಠ ರಕ್ಷಣಾ ಸಂಬಂಧ
ಹೊಂದುವ ಭಾಗವಾಗಿ ಈ ಭೇಟಿ
ನಡೆಯಿತು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.ರಾಜನಾಥ್ ಸಿಂಗ್ ಅವರೊಂದಿಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಕೂಡಾ ಉಪಸ್ಥಿತರಿದ್ದರು.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮೈಕ್ ಎಸ್ಪರ್. ವಿದೇಶಾಂಗ ಕಾರ್ಯದರ್ಶಿ
ಮೈಕ್ ಪೊಂಪಿಯೊ ಉಪಸ್ಥಿತರಿದ್ದರು. ರಕ್ಷಣಾ ಸಚಿವ ರಾಜನಾಥ್ ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿ, ನಾನು ಅಮೆರಿಕದ ನಾರ್ಫೋಕ್ ನಲ್ಲಿರುವ
ಓಷಿಯಾನಾ ನಾಕಾಪಡೆಯ ವಾಯುನೆಲೆಗೆ ಭೇಟಿ ನೀಡಿದ್ದೆ.
ಎಫ್ / ಎ -೧೮ ವಿಮಾನ ಕಾರ್ಯನಿರ್ವಹಣೆಯ ಮಾಹಿತಿ ಪಡೆದುಕೊಂಡೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ನಿಮಿಟ್ ವರ್ಗಕ್ಕೆ ಸೇರಿದ
ಯುಎಸ್‌ಎಸ್ ಡ್ವೈಟ್ ಡಿ. ಎಸ್ ಎನ್ ಹೋವರ್ ನಲ್ಲಿ ಪ್ರಯಾಣಿಸಿದ್ದಾಗಿ ರಕ್ಷಣಾ ಸಚಿವರು ಎಂದು ಹೇಳಿದ್ದಾರೆ. ಭಾರತೀಯ ವಾಯುಪಡೆ ಮತ್ತು ನೌಕಾಪಡೆಯ ವಿಮಾನಗಳಲ್ಲಿ ಈ ವಿಮಾನಗಳನ್ನು ಸೇರ್ಪಡೆಗೊಳಿಸಲು ಸರ್ಕಾರ
ಗಂಭೀರವಾಗಿ ಪರಿಶೀಲಿಸುತ್ತಿರುವ ಹಿನ್ನಲೆಯಲ್ಲಿ
ರಾಜನಾಥ್ ಸಿಂಗ್ ಅವರ ಅವರ ಭೇಟಿ ಅತ್ಯಂತ ಮಹತ್ವ ಪಡೆದುಕೊಂಡಿದೆ.