ಕೋಟೆ ಕೆರೆಯ ಪ್ರವೇಶ ಶುಲ್ಕ ವಿಧಿಸಿರುವ ನಿರ್ಧಾರ ಮರು ಪರಿಶೀಲನೆ
ಲೋಕದರ್ಶನ ವರದಿ
ಬೆಳಗಾವಿ-07- ಬೆಳಗಾವಿಯ ಕೋಟೆ ಕೆರೆಯ ಆವರಣದ ಪ್ರವೇಶಕ್ಕೆ ಶುಲ್ಕ ವಿಧಿಸಿರುವ ಹಿಂದಿನ ಜಿಲ್ಲಾಧಿಕಾರಿ ಡಾ. ವಿಶಾಲ ಅವರ ನಿಧರ್ಾರವನ್ನು ಸಕಾರಾತ್ಮಕವಾಗಿ ಮರು ಪರಿಶೀಲಿಸಲಾಗುವದೆಂದು ಪ್ರಾದೇಶಿಕ ಆಯುಕ್ತ ಪಿ. ಎ. ಮೇಘಣ್ಣವರ ಹಾಗೂ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಅವರು ಇಂದು ಕನ್ನಡಪರ ಹಾಗೂ ಇತರ ಸಂಘಟನೆಗಳ ಮುಖ್ಯಸ್ಥರಿಗೆ ಭರವಸೆ ನೀಡಿದ್ದಾರೆ.
ಇಂದು ಶುಕ್ರವಾರ ಮುಂಜಾನೆ ಪ್ರಾದೇಶಿಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರವೇಶ ಶುಲ್ಕ ಹೇರಿಕೆಯ ಬಗ್ಗೆ ಸುದೀರ್ಘವಾಗಿ ಚಚರ್ೆ ನಡೆದ ನಂತರ ಉಭಯ ಹಿರಿಯ ಅಧಿಕಾರಿಗಳು ಸಂಘಟನೆಗಳ ಮುಖ್ಯಸ್ಥರಿಗೆ ಈ ಭರವಸೆ ಕೊಟ್ಟಿದ್ದಾರೆ.
ಪ್ರವೇಶ ಶುಲ್ಕ ವಿಧಿಸಿ ಹಿಂದಿನ ಜಿಲ್ಲಾಧಿಕಾರಿಗಳು ನಿಧರ್ಾರ ಕೈಕೊಳ್ಳುವ ಮೊದಲು ಪರಿಶೀಲಿಸಿದ ಅಂಶಗಳನ್ನು ಮರು ಪರಿಶೀಲಿಸಿ ಸಕಾರಾತ್ಮಕ ನಿರ್ಣಯ ಕೈಕೊಳ್ಳಲು ತಾವು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾಗಿ ಮೇಘಣ್ಣವರ ಅವರು ಸಭೆಗೆ ತಿಳಿಸಿದರು. ಮರು ಪರಿಶೀಲನೆ ನಿಧರ್ಾರ ಕೈಕೊಳ್ಳುವ ಮೊದಲು ತಾವು ಈ ಸಂಬಂಧದ ಕಡತದಲ್ಲಿಯ ಅಂಶಗಳನ್ನು ಪರಿಶೀಲಿಸುವದಾಗಿ ಬೊಮ್ಮನ್ನಹಳ್ಳಿ ಅವರು ಭರವಸೆ ನೀಡಿದರು.
ಆರಂಭದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರು, ಹಿಂದಿನ ಜಿಲ್ಲಾಧಿಕಾರಿಗಳು ತಪ್ಪು ತಿಳುವಳಿಕೆಯಿಂದಾಗಿ ಹಾಗೂ ವಾಸ್ತವತೆಯ ಅರಿವಿನ ಅಭಾವದಿಂದಾಗಿ ಕೈಕೊಂಡಿರಬಹುದಾದ ಈ ನಿಧರ್ಾರದಿಂದಾಗಿ ಕೋಟೆ ಕೆರೆಯ ಆವರಣದಲ್ಲಿ ನಿತ್ಯ ವಾಯುವಿಹಾರ ಮಾಡುವ ಸಾಮಾನ್ಯ ಜನರಿಗೆ ತೊಂದರೆಯಾಗಿದೆ. ಮಹಿಳೆಯರು ಮತ್ತು ಮಕ್ಕಳಂತೂ ಈಗ ಕೋಟೆ ಕೆರೆಯ ಸಮೀಪವೂ ಹಾಯುತ್ತಿಲ್ಲ. ಕೆರೆಯ ಆವರಣ ಬಿಕೋ ಎನ್ನುತ್ತಿದೆ. ಈ ನಿಧರ್ಾರವನ್ನು ತಾವಿಬ್ಬರೂ ಹಿರಿಯ ಅಧಿಕಾರಿಗಳು ಪುನರ್ ಪರಿಶೀಲಿಸಬೇಕು ಎಂದು ಮನವಿ ಮಾಡಿದರಲ್ಲದೇ, 1991 ರಲ್ಲಿ ಅಂದಿನ ಜಿ.ಪ. ಮುಖ್ಯ ಕಾರ್ಯದಶರ್ಿ ಭರತಲಾಲ ಮೀನಾ ಸ್ಥಾಪಿಸಿದ್ದ ಅಪ್ನಾ ದೇಶ ಸಂಸ್ಥೆಯೊಂದಿಗೆ ಬೆಳಗಾವಿಯ 60 ಕ್ಕೂ ಅಧಿಕ ಸಂಘಟನೆಗಳ ಸಾವಿರಾರು ಯುವಕರು ಕೈಗೂಡಿಸಿ ಶ್ರಮದಾನ ಮಾಡುವ ಮೂಲಕ ಕೆರೆಗೆ ಒಂದು ರೂಪ ಕೊಟ್ಟಿದ್ದನ್ನು ವಿವರಿಸಿದರು.
ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಬಿ. ತಿಪ್ಪೇಸ್ವಾಮಿ ಅವರು ಮಾತನಾಡಿ ಜನರ ಅಭಿಪ್ರಾಯವನ್ನು ಕೇಳದೆ ಏಕಪಕ್ಷಿಯವಾಗಿ ಕೈಕೊಂಡ ಶುಲ್ಕ ಹೇರಿಕೆ ನಿಧರ್ಾರವನ್ನು ವಾಪಸ್ ಪಡೆಯಬೇಕೆಂದು ಕೋರಿದರು. ಕನರ್ಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ತಳವಾರ, ಯುವ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಸಲೀಮ ಖತೀಬ, ಎಂ.ಜಿ. ಮಕಾನದಾರ, ಶಿವಪ್ಪ ಶಮರಂತ, ರಾಜು ಕುಸೋಜಿ, ಸಾಗರ ಬೊರಗಲ್ಲ, ಬಾಬು ಸಂಗೋಡಿ, ಎಂ.ಕೆ. ಕುಂದರಗಿ, ರಜತ ಅಂಕಲೆ ಮುಂತಾದವರು ಶುಲ್ಕ ಹೇರಿಕೆಯನ್ನು ತೀವ್ರವಾಗಿ ವಿರೋಧಿಸಿದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 